Advertisement

ಕೃಷಿ ಸೌಲಭ್ಯ ಲೂಟಿಗೆ ಆಕ್ರೋಶ

08:49 AM Feb 17, 2019 | Team Udayavani |

ಆಳಂದ: ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ರೈತರ ಹಿತ ಕಾಪಾಡದೇ ಜನಪ್ರತಿನಿಧಿಗಳ ಜತೆ ಒಪ್ಪಂದ ಮಾಡಿಕೊಂಡು ಸೌಲಭ್ಯಗಳನ್ನು ಲೂಟಿ ಹೊಡೆಯಲಾಗುತ್ತಿದೆ ಎಂದು ಅಖೀಲ ಭಾರತ ಕಿಸಾನ್‌ ಸಭಾ, ಭಾರತೀಯ ಖೇತ್‌ ಮಜ್ದೂರ್‌ ಯೂನಿಯನ್‌ ತಾಲೂಕು ಘಟಕದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೃಷಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆಗಳ ಕಾರ್ಯಕರ್ತರು, ಕೃಷಿ ಹೊಂಡ, ತುಂತುರು ನೀರಾವರಿ ಸೇರಿದಂತೆ ಅನೇಕ ಸಾಮಗ್ರಿ ವಿತರಣೆಯಲ್ಲಿ ಗೋಲಮಾಲ್‌ ಮಾಡಿದ್ದಾರೆ. ತೋಟಗಾರಿಕೆಯಲ್ಲಿ ರೈತರಿಗೆ ಸಸಿಗಳನ್ನು ನೀಡಿ, ಅವುಗಳನ್ನು ಹಚ್ಚಲು ಖರ್ಚು-ವೆಚ್ಚ ನೀಡುತ್ತಿಲ್ಲ. ಆ ಹಣವನ್ನು ಎತ್ತಿ ಹಾಕುತ್ತಿದ್ದಾರೆ. ಅಲ್ಲದೇ ಕೆಲವು ಸೌಲಭ್ಯಗಳು ದಲ್ಲಾಳಿಗಳ ಪಾಲಾಗುತ್ತಿವೆ ಎಂದು ಆರೋಪಿಸಿದರು.

ಸಿಂಕ್ಲರ್‌ ಪೈಪ್‌ಗ್ಳಿಗೆ ಅರ್ಜಿ ಸಲ್ಲಿಸಿ ವರ್ಷವಾದರೂ ರೈತರಿಗೆ ಸಾಮಗ್ರಿ ಒದಗಿಸುತ್ತಿಲ್ಲ. ಅರ್ಜಿ ಸಲ್ಲಿಸದೆ ಇರುವ ದಲ್ಲಾಳಿಗಳಿಗೆ ರಾತೋರಾತ್ರಿ ಆರ್‌ಟಿಜಿಎಸ್‌ ಕೈಗೊಂಡು ಸಾಮಗ್ರಿ ವಿತರಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಅರ್ಹರಲ್ಲದವರೂ ಮಧ್ಯವರ್ತಿಗಳ ಮೂಲಕ ಟ್ರ್ಯಾಕ್ಟರ್‌ನಲ್ಲಿ ಪೈಪ್‌ಗ್ಳನ್ನು ತೆಗೆದುಕೊಂಡು ಹೋಗಿ ಮಹಾರಾಷ್ಟ್ರ ರಾಜ್ಯದಲ್ಲಿ ಮಾರಿ ಹಣ ಮಾಡುತ್ತಿದ್ದಾರೆ ಎಂದು ದೂರಿದರು.

ಕಿಸಾನ್‌ಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ, ರಾಜಶೇಖರ ಬಸೆ, ಗೋವಿಂದ ಪೂಜಾರಿ, ಫಕ್ರೋದ್ದೀನ್‌ ಗೋಳಾ, ದತ್ತಾತ್ರೆ ಕಣ್ಮಸ್‌, ಮೈಲಾರಿ ಜೋಗೆ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಸಹಾಯಕ ಕೃಷಿ ನಿರ್ದೇಶಕರ ಅನುಪಸ್ಥಿತಿಯಲ್ಲಿ ಇಲಾಖೆ ತಾಂತ್ರಿಕ ಅಧಿಕಾರಿ ಬಿ.ಎನ್‌. ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next