Advertisement

ಹೆಬ್ಟಾಳ್ಕರ್‌ ಹೇಳಿಕೆಗೆ ಆಕ್ರೋಶ

04:00 PM Sep 05, 2017 | Team Udayavani |

ದಾವಣಗೆರೆ: ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮಿ ಹೆಬ್ಟಾಳ್ಕರ್‌ ನಾಡದ್ರೋಹದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸೋಮವಾರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಪ್ರತಿಭಟಿಸಿದ್ದಾರೆ.

Advertisement

ಪಕ್ಷದ ಕಚೇರಿಯಿಂದ ಶ್ರೀ ಜಯದೇವ ವೃತ್ತದ ಮೂಲಕ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತೆಯರು, ಕನ್ನಡನಾಡ ವಿರೋಧಿ ಹೇಳಿಕೆ ನೀಡಿರುವ ಲಕ್ಷ್ಮಿ ಹೆಬ್ಟಾಳ್ಕರ್‌ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಕ್ರಮ ತೆಗೆದುಕೊಂಡು ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರು. ಉಪ ವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಕಳುಹಿಸಲು ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ಮರಾಠಿ  ಸಮುದಾಯದವರು ಏರ್ಪಡಿಸಿದ್ದ ಗಣೇಶೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಲಕ್ಷ್ಮಿ ಹೆಬ್ಟಾಳ್ಕರ್‌ ,ಒಂದೊಮ್ಮೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಎಲ್ಲರಗಿಂತಲೂ ಮೊದಲಿಗೆ ನಾನೇ ಜೈ ಎನ್ನುತ್ತೇನೆ… ಎಂಬುದಾಗಿ ಹೇಳುವ ಮೂಲಕ ಕನ್ನಡಿಗರಿಗೆ
ಅಪಮಾನ ಮಾಡಿದ್ದಾರೆ ಎಂದು ದೂರಿದರು. ಬೆಳಗಾವಿ ತಾಯಿ ಭುವನೇಶ್ವರಿಯ ಕನ್ನಡನಾಡಿನ ಅವಿಭಾಜ್ಯ ಅಂಗ. ಬೆಳಗಾವಿ ವಿಚಾರವಾಗಿ ಪ್ರತಿಯೊಬ್ಬ ಕನ್ನಡಿಗರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಗಡಿ ವಿಚಾರವಾಗಿ ಅನೇಕ ಕನ್ನಡಪರ ಹೋರಾಟಗಾರರು ನಿರಂತರ ಹೋರಾಟ ಮಾಡುತ್ತಿದ್ದಾರೆ. ಗಡಿ ಭಾಗದ ಕನ್ನಡಿಗರು ತೊಂದರೆ ಅನುಭವಿಸುತ್ತಿರುವಾಗ ಕೇವಲ ಮತಗಳ ದೃಷ್ಟಿಯಿಂದ ಲಕ್ಷ್ಮಿ ಹೆಬ್ಟಾಳ್ಕರ್‌ ಮಹಾರಾಷ್ಟ್ರದ ಪರ ಹೇಳಿಕೆ ನೀಡಿರುವುದು ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

ಸಮಸ್ತ ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡಿರುವ ಲಕ್ಷ್ಮಿ ಹೆಬ್ಟಾಳ್ಕರ್‌ ಪರ ಕೆಲವರು ಹೇಳಿಕೆ ನೀಡಿರುವುದನ್ನ ಗಮನಿಸಿದರೆ ಅವರಿಗೆ ತಾಯ್ನಾಡಿನ ಬಗ್ಗೆ ಎಷ್ಟು ಅಭಿಮಾನ ಇದೆ ಎಂಬುದು ಗೊತ್ತಾಗುತ್ತದೆ. ಅತ್ಯಂತ ಖಂಡನೀಯ ಹೇಳಿಕೆ ನೀಡಿರುವ ಲಕ್ಷ್ಮಿ ಹೆಬ್ಟಾಳ್ಕರ್‌ ರನ್ನು ಈ ಕೂಡಲೇ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರು. ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಜಯಲಕ್ಷ್ಮಿ ಮಹೇಶ್‌, ಜಿಲ್ಲಾ ಅಧ್ಯಕ್ಷೆ ಎಚ್‌.ಸಿ. ಜಯಮ್ಮ, ಚೇತನಾ ಶಿವಕುಮಾರ್‌, ಶಾಂತಾದೊರೈ, ಪ್ರಭಾವತಿ, ಎಚ್‌.ಎಂ. ಅನಿತಾ, ಆರ್‌. ನಾಗರತ್ನಮ್ಮ, ಎಲ್‌.ಕೆ. ಪ್ರೇಮಾ,
ದೇವಿರಮ್ಮ ರಾಮಚಂದ್ರನಾಯ್ಕ, ಮಂಜುಳಾಬಾಯಿ, ಲಲಿತಾ. ಶಾಂತಮ್ಮ, ಶ್ವೇತಾ, ಸುಶೀಲಮ್ಮ, ರಾಜೇಶ್ವರಿ, ವಾಣಿ, ಶೀಲಾಬಾಯಿ, ಭಾಗ್ಯಮ್ಮ ದೇವರಾಜ್‌, ಸರ್ವಮಂಗಳ ಪ್ರಕಾಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next