Advertisement

ರಸಗೊಬ್ಬರಗಳ ದರ ಏರಿಕೆಗೆ ಆಕ್ರೋಶ

04:25 PM Apr 13, 2021 | Team Udayavani |

ಪಾಂಡವಪುರ: ಕೇಂದ್ರ ಸರ್ಕಾರ ದಿನೇ ದಿನೆ ಕೃಷಿ ಹಾಗೂ ನಿತ್ಯ ಬಳಕೆಯ ವಸ್ತುಗಳ ದರ ಹೆಚ್ಚಿಸುವಮೂಲಕ ಶ್ರೀಸಾಮಾನ್ಯರ ಮೇಲೆ ಬರೆ ಎಳೆಯುತ್ತಿದ್ದು, ಜತೆಗೆ ರಸಗೊಬ್ಬರಗಳ ದರ ಏರಿಸುವ ಮೂಲಕ ರೈತರಿಗೆ ಸಂಕಷ್ಟ ತಂದೊಡ್ಡಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ, ನಂತರಮಿನಿಧಾನಸೌಧದ ಆವರಣದಲ್ಲಿ ಧರಣಿ ಪ್ರತಿಭಟಿಸಿದರು.

Advertisement

ಪಟ್ಟಣದ ಐದು ದೀಪ ವೃತ್ತದಲ್ಲಿ ಜಮಾವಣೆಗೊಂಡ ರೈತ ಸಂಘದ ಕಾರ್ಯಕರ್ತರು,ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್‌ನೇತೃತ್ವದಲ್ಲಿ ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯಹೆದ್ದಾರಿ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದರು.

ರಸಗೊಬ್ಬರದ ದರ ಏರಿಕೆ ಮಾಡಿರುವ ಕೇಂದ್ರಸರ್ಕಾರದ ನೀತಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆ ಬಳಿಕಮೆರವಣಿಗೆ ಮೂಲಕ ಮಿನಿವಿಧಾನಸೌಧಕ್ಕೆ ತೆರಳಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು.  ರಸಗೊಬ್ಬರ ದರ ದಿಢೀರ್‌ ಏರಿಕೆ ಮಾಡಿರುವುದು ಸರಿಯಲ್ಲ. ಬೆಳೆಗಳಿಗೆ ಹೆಚ್ಚು ದರ ನಿಗದಿ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ನಾಲೆ ಆಧುನೀಕರಣ ಹೆಸರಿನಲ್ಲಿ ಲೂಟಿ: ಕೆಆರ್‌ ಎಸ್‌ ಜಲಾಶಯದಿಂದ ನಾಲೆಗೆ ಕಟ್ಟುಪದ್ಧತಿ ಮೂಲಕ ನೀರು ಹರಿಸಬೇಕು. ನಾಲೆಗೆ ನೀರು ಹರಿಸದ ಕಾರಣದಿಂದಾಗಿ ಬೆಳೆಗಳು ಒಣಗುತ್ತಿವೆ.ಇದಕ್ಕೆ ಯಾರು ಹೊಣೆಗಾರರು, ನಿಮ್ಮ ಪರಿಹಾರ ಭಿಕ್ಷೆನಮಗೆ ಬೇಕಾಗಿಲ್ಲ. ಮೊದಲು ಸಮರ್ಪಕವಾಗಿ ಕಟ್ಟುಪದ್ಧತಿ ಮೂಲಕ ನಾಲೆಗೆ ನೀರು ಹರಿಸಬೇಕು.ನಾಲೆ ಆಧುನೀಕರಣ ಹೆಸರಿನಲ್ಲಿ ಹಣ ಲೂಟಿ ಮಾಡಲಾಗುತ್ತಿದೆ. ಕಾಮಗಾರಿ ಕೆಲಸ ಯಾವಾಗಬೇಕಾದರೂ ಮಾಡಿಕೊಳ್ಳಿ, ನಮಗೆ ನೀರು ಕೊಡಿ ಎಂದರು.

ಕಾನೂನು ಭಂಗ ಚಳವಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿನಾಕಾರಣ ರೈತರಿಗೆ ತೊಂದರೆ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.. ತಕ್ಷಣ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲದಿದ್ದರೆ ರೈತ ಸಂಘದಿಂದ ಕಾನೂನು ಭಂಗ ಚಳವಳಿಮಾಡಬೇಕಾಗುತ್ತದೆ ಎಂದು ರೈತ ಸಂಘದ ಅಧ್ಯಕ್ಷಚಿಕ್ಕಾಡೆ ಹರೀಶ್‌, ಕೆನ್ನಾಳು ನಾಗರಾಜು ಪ್ರತಿಭಟನೆಯಲ್ಲಿ ಎಚ್ಚರಿಸಿದರು.

Advertisement

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಪ್ರಮೋದ್‌ ಎಲ್‌.ಪಾಟೀಲ್‌ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ರಸ್ತೆತಡೆನಡೆಸಿದ ಪರಿಣಾಮ ಮೈಸೂರು, ತುಮಕೂರುಮಾರ್ಗದ ಸಂಚಾರ ಕೆಲಕಾಲ ಸ್ಥಗಿತಗೊಂಡಿತು. ಪ್ರತಿಭಟನೆಯಲ್ಲಿ ದಸಂಸ ಮುಖಂಡಚಿಕ್ಕಬ್ಯಾಡರಹಳ್ಳಿ ಪ್ರಕಾಶ್‌, ಕೆನ್ನಾಳು ನಾಗರಾಜು,ಕ್ಯಾತನಹಳ್ಳಿ ತುಳಸಿದಾಸ್‌, ಹರವು ಪ್ರಕಾಶ್‌,ಡಾಮಡಹಳ್ಳಿ ಸೋಮಣ್ಣ, ಕ್ಯಾತನಹಳ್ಳಿ ವಿಷಕಂಠ,ಬೇಬಿ ನಟರಾಜು, ರಾಮಚಂದ್ರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next