Advertisement
ಮಂಗಳವಾರ ಮಹಾರಾಷ್ಟ್ರ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಕರ್ನಾಟಕದ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು, ಇದಕ್ಕೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜತೆಗೆ, ಗಡಿ ತಂಟೆ ಕುರಿತು ಮಹಾರಾಷ್ಟ್ರದ ವರ್ತನೆ ವಿರುದ್ಧ ರಾಜ್ಯ ವಿಧಾನ ಪರಿಷತ್‌ನಲ್ಲಿ ಸರ್ವಾನುಮತ ನಿರ್ಣಯವನ್ನು ಕೈಗೊಳ್ಳಲಾಗಿದೆ.
Related Articles
ಅತ್ತ ಮಹಾರಾಷ್ಟ್ರ ಸರಕಾರ ನಿರ್ಣಯ ಅಂಗೀ ಕರಿಸುತ್ತಿದ್ದಂತೆ, ಇತ್ತ ಬೆಳಗಾವಿಯ ವಿಧಾನಮಂಡಲ ಕಲಾಪದಡಿ ವಿಧಾನ ಪರಿ ಷತ್‌ನಲ್ಲಿ ಪ್ರಸ್ತಾವಗೊಂಡಿತು. ಪಕ್ಷ ಭೇದ ಮರೆತು ಮಹಾರಾಷ್ಟ್ರದ ವರ್ತನೆ, ನಿಲುವನ್ನು ಖಂಡಿಸ ಲಾಯಿತು. ಮುಖ್ಯಮಂತ್ರಿಗಳ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಖಂಡನ ನಿರ್ಣಯ ಮಂಡಿಸಿದರು. ನಮ್ಮ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಹಿತಾಸಕ್ತಿ ವಿಷಯದಲ್ಲಿ ರಾಜಿ ಇಲ್ಲ. ಜನರ ಭಾವನೆಗೆ ಧಕ್ಕೆ ಬಂದಾಗ ಒಗ್ಗಟ್ಟಿನ ಧ್ವನಿ ಮೊಳಗಿಸಲು ನಾವೆಲ್ಲ ಬದ್ಧ ಎಂದರು.
ಇದಕ್ಕೂ ಮೊದಲು ಚರ್ಚೆಯಲ್ಲಿ ಪಾಲ್ಗೊಂಡ ಆಡಳಿತ- ವಿಪಕ್ಷಗಳ ಹಲವು ಸದಸ್ಯರು ಮಹಾ ರಾಷ್ಟ್ರ, ಎಂಇಎಸ್, ಶಿವಸೇನೆಯ ವರ್ತನೆ ಯನ್ನು ಖಂಡಿಸಿದರು. ಮಹಾರಾಷ್ಟ್ರದವರು ತಮ್ಮ ರಾಜಕೀಯ ಅನುಕೂಲಕ್ಕಾಗಿ ಪದೇ ಪದೆ ತಂಟೆ ತೆಗೆಯುತ್ತಿದ್ದು, ಖಂಡಿಸೋಣ ಎಂದು ಅಭಿಪ್ರಾಯ ಪಟ್ಟರು. ಎಂಇಎಸ್ ನಿಷೇಧಕ್ಕೂ ಒತ್ತಾಯಿಸಿದರು.
Advertisement
ಸೋಮವಾರವಷ್ಟೇ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬೆಳಗಾವಿ, ನಿಪ್ಪಾಣಿ, ಕಾರವಾರಗಳನ್ನು ಕೇಂದ್ರಾ ಡಳಿತ ಪ್ರದೇಶಗಳೆಂದು ಘೋಷಿಸುವಂತೆ ಶಿವ ಸೇನೆ ನಾಯಕ ಉದ್ಧವ್ ಠಾಕ್ರೆ ಒತ್ತಾಯಿಸಿದ್ದರು. ಡಿಸಿಎಂ ದೇವೇಂದ್ರ ಫಡ್ನವೀಸ್ ಕೂಡ ರಾಜ್ಯದ ಒಂದು ಇಂಚು ಜಮೀನನ್ನೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದರು. ಈ ಎಲ್ಲ ಬೆಳವಣಿಗೆಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಧ್ಯಪ್ರವೇಶದ ಹೊರತಾಗಿಯೂ ಸಂಘರ್ಷ ಮತ್ತಷ್ಟು ಉಲ್ಬಣಿಸಲು ಕಾರಣವಾಗುವ ಸಂಭವವಿದೆ.
ಮಹಾರಾಷ್ಟ್ರ ನಿರ್ಣಯಕ್ಕೆ ಬೆಲೆ ಇಲ್ಲ : ಮುಖ್ಯಮಂತ್ರಿಮಹಾರಾಷ್ಟ್ರದ ಖಂಡನ ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸರಕಾರ ಒಕ್ಕೂಟ ವ್ಯವ ಸ್ಥೆಗೆ ಧಕ್ಕೆ ತರುವ ಕೆಲಸ ಮಾಡಿದೆ. ಎರಡೂ ಕಡೆ ಜನ ನೆಮ್ಮದಿಯಿಂದ ಇದ್ದಾರೆ. ರಾಜಕೀಯಕ್ಕಾಗಿ ಹೇಳಿಕೆ ನೀಡುವ, ನಿರ್ಣ ಯ ಮಾಡುವ ಚಟ ಅವರದ್ದು ಎಂದರು. ಗಡಿಯಿಂದ ಆಚೆಗಿನ ಕನ್ನಡಿಗರ ರಕ್ಷಣೆಯ ಬದ್ಧತೆ ನಮಗಿದೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ವಿದೆ. ನಾವು ನಮ್ಮ ನೆಲ ಬಿಡುವುದಿಲ್ಲ ಎಂದು ನಿರ್ಣಯ ಅಂಗೀಕರಿಸಿದ್ದೇವೆ. ಅವರು ಕರ್ನಾಟಕದ ನೆಲ ಪಡೆದುಕೊಳ್ಳುತ್ತೇವೆ ಎಂದು ಅಂಗೀ ಕರಿಸಿ ದ್ದಾರೆ. ನಮ್ಮ ನಿರ್ಣಯಕ್ಕೂ ಅವ ರಿಗೂ ವ್ಯತ್ಯಾಸ ವಿದೆ. ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಗಲಿದೆ ಎಂದು ಹೇಳಿದರು. ರಾಜಕೀಯ ಉದ್ದೇಶಕ್ಕಾಗಿ ಮಹಾರಾಷ್ಟ್ರ ಈ ನಿರ್ಣಯ ಕೈಗೊಂಡಿದೆ. ಕನ್ನಡದ ಹಳ್ಳಿಗಳನ್ನು ಕೇಳುವ ಯಾವುದೇ ನೈತಿಕ ಹಕ್ಕು ಅದಕ್ಕಿಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿಚಾರವಾಗಿ ಮಹಾಜನ ವರದಿಯೇ ಅಂತಿಮ.
– ಸಿದ್ದರಾಮಯ್ಯ, ವಿಪಕ್ಷ ನಾಯಕ ಕೇಂದ್ರ, ಮಹಾರಾಷ್ಟ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಚುನಾ ವಣೆ ಸಮಯ ದಲ್ಲಿ ಅಶಾಂತಿ ಮೂಡಿಸುವ ಬಿಜೆಪಿಯ ನಾಟಕವಿದು. ನಮ್ಮ ಒಂದೂ ಹಳ್ಳಿಯನ್ನೂ ನೀಡುವುದಿಲ್ಲ. ಅವರ ಒಂದು ಹಳ್ಳಿಯೂ ನಮಗೆ ಬೇಡ.
– ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಚಾರಿತ್ರಿಕವಾಗಿ ಕನ್ನಡಿಗರು ಹಾಗೂ ಮರಾಠ ರಿಗೆ ಅವಿನಾಭಾವ ಸಂಬಂಧವಿದೆ. ಎರಡೂ ರಾಜ್ಯಗಳ ಮಧ್ಯೆ ಸಾಂಸ್ಕೃತಿಕವಾಗಿ ಎಲ್ಲ ಸರಿ ಇದ್ದು, ರಾಜಕೀಯವಾಗಿ ದ್ವೇಷ ಸರಿಯಲ್ಲ.
– ಮಲ್ಲೇಪುರಂ ಜಿ. ವೆಂಕಟೇಶ್, ಹಿರಿಯ ಸಾಹಿತಿ ಬೇರೆ ಬೇರೆ ಭಾಷಾವಾರು ಪ್ರಾಂತ್ಯಗಳು ಪರಸ್ಪರ ಹೊಂದಿಕೊಂಡು ಅಭಿವೃದ್ಧಿ ಹೊಂದುವ-ಅಖಂಡ ರಾಷ್ಟ್ರದ ಕಲ್ಪನೆ ನಮ್ಮದು. ದೇಶದ ಏಕತೆಗೆ ಭಂಗ ತರುವಂಥ ಪ್ರವೃತ್ತಿ ವಿರುದ್ಧ ಕೇಂದ್ರ ಸರಕಾರ ಬಿಗಿ ನಿಲುವನ್ನು ತಳೆಯಬೇಕು.
– ಎಚ್. ಎಸ್. ವೆಂಕಟೇಶಮೂರ್ತಿ, ಸಾಹಿತಿ