Advertisement

ಕೆಎಸ್ಸಾರ್ಟಿಸಿ ಓಡಾಟಕ್ಕೆ ಖಾಸಗಿ ಬಸ್‌ಗಳ ಆಕ್ರೋಶ

12:56 PM Apr 18, 2021 | Team Udayavani |

ಬೆಂಗಳೂರು: ವೇತನ ಪರಿಷ್ಕರಣೆಗೆ ಒತ್ತಾಯಿಸಿ ಸಾರಿಗೆಸಂಸ್ಥೆಯ ನೌಕರರು ನಡೆಸುತ್ತಿರುವ ಮುಷ್ಕರ ಭಾನುವಾರ 12ನೇ ದಿನಕ್ಕೆ ಕಾಲಿರಿಸಿದೆ. ಆದರೆ ಶನಿವಾರ ನಗರದ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಕಡೆಗೆ ಸರ್ಕಾರಿ ಬಸ್‌ಗಳುಕಾರ್ಯಾಚರಣೆ ಆರಂಭಿಸಿದವು.

Advertisement

ಈ ಹಿನ್ನೆಲೆಯಲ್ಲಿಪ್ರಯಾಣಿಕರು ಖಾಸಗಿ ಬಸ್‌ ಬಿಟ್ಟು , ಸರ್ಕಾರಿ ಬಸ್‌ಏರಿದರು.ಖಾಸಗಿ ಬಸ್‌ ಮಾಲೀಕರು ಮತ್ತು ಸಿಬ್ಬಂದಿ ಕೆಎಸ್ಸಾರ್ಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೆಂಪೇಗೌಡ ಬಸ್‌ ನಿಲ್ದಾಣದೊಳಗಿನಿಂದ ಬಸ್‌ ಹೊರನಿಲ್ಲಿಸಿ ಪ್ರತಿಭಟಿಸಿದರು.

ಈ ವೇಳೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ಖಾಸಗಿ ಬಸ್‌ ಮಾಲೀಕರ ಜತೆಗೆ ಮಾತುಕತೆ ನಡೆಸಿದರು.

ಖಾಸಗಿ ಬಸ್‌ನ ಮಾಲೀಕ ಚಂದ್ರು ಮಾತನಾಡಿ,ಕಳೆದ ಮೂರು ದಿನಗಳಿಂದ ಕೆಂಪೇಗೌಡ ಬಸ್‌ನಿಲ್ದಾಣದಿಂದ ಕೆಎಸ್ಸಾರ್ಟಿಸಿ ಬಸ್‌ಗಳು ರಾಜ್ಯದವಿವಿಧ ಜಿಲ್ಲೆಗಳೆಡೆಗೆ ಸಂಚಾರ ಮಾಡುತ್ತಿವೆ. ಹೀಗಾಗಿಖಾಸಗಿ ಬಸ್‌ ಹತ್ತಿದ ಜನರು ಕೆಎಸ್ಸಾರ್ಟಿಸಿ ಬಸ್‌ಬಂದ ತಕ್ಷಣ ಆ ಬಸ್‌ ಏರುತ್ತಾರೆ. ಖಾಸಗಿ ಬಸ್‌ಗಳಿಗೆ ಕಲೆಕ್ಷನ್‌ ಆಗುತ್ತಿಲ್ಲ, ಇದರಲ್ಲಿ ಸಾರಿಗೆ ಅಧಿಕಾರಿಗಳ ಕೈವಾಡವೂ ಇದೆ ಎಂದು ದೂರಿದರು.

ಅಧಿಕಾರಿಗಳ ವಿರುದ್ಧ ಅಸಮಾಧಾನ: ಪ್ರತಿ ಐದ ರಿಂದ ಹತ್ತು ನಿಮಿಷಗಳಿಗೊಮ್ಮೆ ಕೆಎಸ್ಸಾರ್ಟಿಸಿ ಬಸ್‌ಗಳು ಬೇರೆ ಬೇರೆ ಜಿಲ್ಲೆಗಳಿಗೆ ಪ್ರಯಾಣಿಸುತ್ತಿವೆ. ಸಾರಿಗೆ ಅಧಿಕಾರಿಗಳು ಪ್ರಯಾಣಿಕರನ್ನು ಕೆ ಎಸ್‌ಆರ್‌ಟಿಸಿ ಬಸ್‌ಗಳಿಗೆ ಹತ್ತಿಸುತ್ತಿದ್ದಾರೆ. ಇದರಿಂದಾಗಿ ಖಾಸಗಿ ಬಸ್‌ಗಳಿಗೆ ಜನ ಬರುತ್ತಿಲ್ಲ ಎಂದು ಅಯ್ಯಪ್ಪ ಟ್ರಾವೆಲ್ಸ್‌ನ ಸಿಬ್ಬಂದಿ ಸುರೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಖಾಸಗಿ ಬಸ್‌ ಮಾಲೀಕರ ಜತೆ ಸಂಧಾನ ಸಫ‌ಲ ಸಮಸ್ಯೆಗೆ ಸ್ಪಂದಿಸಿದ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಖಾಸಗಿ ಬಸ್‌ ಮಾಲೀಕರ ಮತ್ತು ಸಿಬ್ಬಂದಿಗಳ ಜತೆಗೆ ಸಂಧಾನ ಸಭೆ ನಡೆಸಿದರು. ಒಂದು ಖಾಸಗಿ ಬಸ್‌ ತುಂಬಿ ಹೊರಟ ನಂತರ ಸರ್ಕಾರಿ ಬಸ್‌ಗೆ ಅವಕಾಶ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಈ ವೇಳೆ ಮಾತನಾಡಿದ ರಾಜ್ಯಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನಗಳ ಮಾಲೀಕರ ಸಂಘದ ಅಧ್ಯಕ್ಷ ಭೈರವ ಸಿದ್ದರಾಮಯ್ಯ,ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಕಷ್ಟಕ್ಕೆ ನಾವು ಬೇಕಾಗಿದ್ದೆವು.ಈಗ ಬೇಡವಾಗಿದ್ದೇವೆ ಎಂದರು.

1,140 ಬಿಎಂಟಿಸಿ ಬಸ್‌ ಸಂಚಾರಸಾರಿಗೆ ಸಂಸ್ಥೆಯ ಮುಷ್ಕರದ ನಡುವೆ ಶನಿವಾರ ನಗರದ ವಿವಿಧಡೆಗೆ ಸುಮಾರು 1,140 ಬಸ್‌ಗಳ ಸಂಚಾರ ನಡೆಸಿದವು.ದೊಡ್ಡಬಳ್ಳಾಪುರ, ಜಿಗಣಿ, ಆವಲಹಳ್ಳಿ, ಹನುಮಂತನಗರ,ಬಿಡಿಎ ಪಾರ್ಕ್‌, ವಿಶ್ವನಾಥಪುರ, ಯಲಹಂಕ, ಕೆ.ಆರ್‌.ಪುರ,ಚಂದ್ರಾಲೇಔಟ್‌, ವಿಜಯನಗರ, ಮೈಸೂರು ರಸ್ತೆ, ಕೆಂಗೇರಿ,ಮಲತ್ತಹಳ್ಳಿ, ಅಂಬೇಡ್ಕರ್‌ ಕಾಲೇಜು, ಸುಜಾತ ಕೊಟ್ಟಿಗೆ ಪಾಳ್ಯಸೇರಿದಂತೆ ಮತ್ತಿತರರ ಕಡೆಗಳಿಗೆ ಬಿಎಂಟಿಸಿ ಬಸ್‌ಗಳುಪ್ರಯಾಣಿಕಕರನ್ನು ಹೊತ್ತು ಸಾಗಿದವು. ಹಾಗೆಯೇ ಪೀಣ್ಯಾ,ಮೈಸೂರು ರಸ್ತೆ, ಕೆಂಗೇರಿ, ನಾಯಂಡಹಳ್ಳಿ, ಚಂದ್ರಾಲೇಔಟ್‌,ವಿಜಯನಗರ ,ಕೆಂಗೇರಿ ಸೇರಿದಂತೆ ಮತ್ತಿತರ ಮಾರ್ಗಗಳಿಗೆಕೆ.ಆರ್‌.ಮಾರುಕಟ್ಟೆ ಪ್ರದೇಶದಿಂದ ಬಿಎಂಟಿಸಿ ಬಸ್‌ಗಳುಕಾರ್ಯಾಚರಣೆ ನಡೆಸಿದವು

Advertisement

Udayavani is now on Telegram. Click here to join our channel and stay updated with the latest news.

Next