ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣ: ಕನ್ನಡ ಪರ ಸಂಘಟನೆಯಿಂದ ಆಕ್ರೋಶ
ಕುಷ್ಟಗಿ: ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಾ ಹಾಗೂ ಬೆಳಗಾವಿಯಲ್ಲಿ ದೇಶಭಕ್ತ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಸಂಘಟನೆಯ ಅದ್ಯಕ್ಷ ದೇವರಾಜ್ ಹಜಾಳದಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಂ.ಇ.ಎಸ್. ಹಾಗೂ ಶಿವಸೇನೆಯ ಪತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ದೇವರಾಜ ಹಜಾಳದಾರ ಮಾತನಾಡಿ, ಬೆಳಗಾವಿಯಲ್ಲಿ ದೇಶ ಭಕ್ತ ಸಂಗೊಳ್ಳಿ ರಾಯಣ್ಣ ಪ್ರತಿ ಭಗ್ನಗೊಳಿಸಿರುವುದು ಅತಂಕಕಾರಿ ಬೆಳವಣಿಗೆಯಾಗಿದೆ. ಕೂಡಲೇ ಪ್ರತಿಮೆ ಧ್ವಂಸ ಹಾಗೂ ಕನ್ನಡ ದ್ವಜಾ ಸುಟ್ಟ ನಾಡದ್ರೋಹಿಗಳಿಗೆ ಕರ್ನಾಟಕದಲ್ಲಿ ಜಾಗವಿಲ್ಲ.ಇಷ್ಟು ದಿನ ನಮ್ಮ ಸರ್ಕಾರದಿಂದ ಸೇವಾಸೌಲತ್ತು ತಿಂದುಂಡು ರಾಜ್ಯ ಸರ್ಕಾರದ ವಿರುದ್ದವೇ ತಿರುಗಿ ಬಿದ್ದಿದೆ. ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಗಡಿಪಾರಿನ ಶಿಕ್ಷೆ ವಿಧಿಸಬೇಕು ಎಂದು ದೇವರಾಜ್ ಒತ್ತಾಯಿಸಿದರು.
ಲಕ್ಷ್ಮಣ ನಾಯಕ, ರಮೇಶ ಕಟ್ಟಿಮನಿ ಅಜಾರುದ್ದೀನ್ ಸುರೇಶ ಜರಕುಂಟಿ ಮೊದಲಾದವರಿದ್ದರು.