ವಿಜಯಪುರ : ಸೇವೇ ಖಾಯಂಗೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು, ಮಂಗಳವಾರ ಅಣಕು ಶವ ಪ್ರದರ್ಶನ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಛೇರಿ ಎದುರು ನಡೆಸಿರುವ ಅನಿರ್ಧಿಷ್ಟ ಧರಣಿಯಲ್ಲಿ ತಮಟೆ ಬಾರಿಸಿದ ಅತಿಥಿ ಉಪನ್ಯಾಸಕರು, ಉಪನ್ಯಾಸಕರೊಬ್ಬರು ಅಣಕು ಶವ ಮಾಡಿ ಪ್ರತಿಭಟನೆ ನಡೆಸಿದರು.
ಸುಮಾರು ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ತಮಗೆ ಸರ್ಕಾರ ನ್ಯಾಯ ಸಮ್ಮತವಾಗಿ ಸೇವೆ ಖಾಯಂ ಸೇರಿದಂತೆ ಇತರೆ ಬೇಡಿಕೆ ಈಡೇರಿಸುತ್ತಿಲ್ಲ. ಇದಕ್ಕಾಗಿ ಕಳೆದ 27 ದಿನಗಳಿಂದ ಧರಣಿ ನಡೆಸಿದರೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಹರಿಹಾಯ್ದರು.
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಡಾ. ಆರ್.ಜಿ. ಕಳ್ಳಿ, ಎಸ್.ಎಂ.ಹಡಪದ, ಎಸ್.ಆರ್.ಡೊಳ್ಳಿ, ಎನ್.ಸಿ.ಮುದ್ದೇಬಿಹಾಳ. ಎಂ.ಸಿ.ಮಾಲಜಿ. ವಿಜಯಲಕ್ಷ್ಮೀ ಜಾಧವ, ಎಂ.ಬಿ. ಪಾಟೀಲ, ಎಸ್.ಎ.ಪಾಟೀಲ ಐಶ್ವರ್ಯ ಪಾರಶೆಟ್ಟಿ, ಶಬ್ಬಿರ ಮುಜಾವರ, ಶಿವಾನಂದ ಸಿಂಹಸನಮಠ, ಆರ್.ಸಿ.ದಾಯಗೊಂಡ, ಜಿ.ಕೆ. ಹತ್ತೆನ್ನವರ, ಶ್ರೀಧರ ಇರಸೂರ, ಎಂ.ಆರ್. ತಪಸೆಟ್ಟಿ, ಎ.ಎಂ. ರಾಠೋಡ, ಪಿ.ಎಂ.ಮಠ, ರಾಜಿದ ಹುಸೇನ ರಿಸಲಾದಾರ, ದೀಪಶ್ರೀ, ಥೊರತ, ಭರತಿ ಹೊನವಾಡ, ವಿ.ವಿ.ಕಲ್ಮೇಶ್ವರ ಎಸ್.ಬಿ. ಗಂಗಮಾಲಿ, ಬಿ.ಐ.ಪಾಟೀಲ, ಗೀತಾ ಬೆಳ್ಳುಂಡಗಿ, ಮಂಜುಳಾ ಬಾವಿಕಟ್ಟಿ, ಭೀಮಶಿ ಹಡಪದ, ಭಾಗ್ಯಶ್ರೀ ಮೋರೆ, ಭಾರತಿ ಇನಾಮದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.