Advertisement

ಸಂತ್ರಸ್ತರಿಗೆ ಪರಿಹಾರವಿಲ್ಲದ್ದಕ್ಕೆ ಆಕ್ರೋಶ

11:33 AM Oct 27, 2019 | Team Udayavani |

ತೇರದಾಳ: ಪ್ರವಾಹದ ಸಂದರ್ಭದಲ್ಲಿ ಮುಳುಗಿಹೋದ ನಮ್ಮ ಬದುಕಿಗೆ ಪರಿಹಾರ ಬಂದಿಲ್ಲ. ಅದರಲ್ಲಿ ತಾರತಮ್ಯವಾಗಿದೆ ಎಂದು ಹಳಿಂಗಳಿ ಗ್ರಾಪಂ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಶೀಘ್ರ ಪರಿಹಾರ ಕೊಡಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಸಭೆಯಲ್ಲಿ ಚರಂಡಿ, ಬೀದಿ ದೀಪ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಇದೆ ಸಂದರ್ಭದಲ್ಲಿ ಗ್ರಾಮದ ಪಶುವೈದ್ಯ ಜಿಡ್ಡಿ, ಸ್ಥಳಿಯ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಜನರು ಬರುತ್ತಿಲ್ಲ. ಅದರ ಬದಲಾಗಿ ಆರೋಗ್ಯ ಕೇಂದ್ರದ ಆವರಣದಲ್ಲಿ ಗಲೀಜು-ಹೊಲಸು ಮಾಡುವ ಪ್ರವೃತ್ತಿ ಕಂಡುಬರುತ್ತಿದೆ ಎಂಬ ಮಾತುಗಳು ಸಭೆಯಲ್ಲಿ ಕೇಳಿ ಬಂದವು.

ಇದೆ ವಿಷಯಕ್ಕೆ ಸಂಬಂಧಿಸಿದಂತೆ ಎಎನ್‌ಎಂ ಶ್ರೀದೇವಿ ಅವರು ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಗ್ರಾಪಂ ಅಧ್ಯಕ್ಷ ಪರಪ್ಪ ಹಿಪ್ಪರಗಿ ಮಾತನಾಡಿದರು. ಗ್ರಾಮದಲ್ಲಿ ಈಗಾಗಲೇ ರಸ್ತೆ, ಚರಂಡಿ, ನಿಸರ್ಗ ವಿಕೋಪಕ್ಕಾಗಿ ಫಲಾನುಭವಿಗಳ ಪಟ್ಟಿ ಸೇರಿದಂತೆ ಹಲವು ಕಾರ್ಯಗಳು ನಡೆದುಬಂದಿವೆ. ಆದರೂ ಕೆಲವು ಭಾಗಗಳಲ್ಲಿ ಸ್ಥಳಿಯರ ಸಹಕಾರವಿಲ್ಲದೇ ಇರುವುದರಿಂದ ರಸ್ತೆ ಇನ್ನಿತರ ಕಾಮಗಾರಿಗಳು ಸ್ಥಗಿತಗೊಂಡಿವೆ. ಅದಕ್ಕೆ ತಾವೆಲ್ಲರೂ ಸಹಕರಿಸಿದರೇ ಮಾತ್ರ ಅಭಿವೃದ್ಧಿ ಕಾರ್ಯಗಳು ಮುಂದುವರಿಯಲು ಸಾಧ್ಯ ಎಂದರು.

ಜಿಪಂ ಮಾಜಿ ಅಧ್ಯಕ್ಷ ಬಿ.ಎ. ದೇಸಾಯಿ, ಗ್ರಾಪಂ ಅಧ್ಯಕ್ಷ ಪರಪ್ಪ ಹಿಪ್ಪರಗಿ, ಸದಸ್ಯರು, ಪಿಡಿಒ ಎನ್‌.ಎಸ್‌. ಪತ್ರಿ, ಜೆ.ಬಿ. ರಂಗಪ್ಪಗೋಳ, ಗಂಗಪ್ಪ ಘೂಳ್ಳನ್ನವರ, ಪಶು, ಕೃಷಿ, ಆರೋಗ್ಯ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇತರರು ದ್ದರು.

Advertisement

Udayavani is now on Telegram. Click here to join our channel and stay updated with the latest news.

Next