Advertisement

ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ

12:21 PM Jul 11, 2020 | Suhan S |

ಮೂಡಿಗೆರೆ: ವಿಧಾನ ಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌ ಅವರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜೂ.29ರಂದು ತಾಪಂ ಸಭಾಂಗಣದಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದಿದ್ದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಿದವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಿಸಿದರೂ ಅಧಿಕಾರಿಗಳು ಮಾತ್ರ ತಾಲೂಕಿನಾದ್ಯಂತ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ.

Advertisement

ಅಂದು ಸಭೆಯ ವೇದಿಕೆಯಲ್ಲಿ ಎಂ.ಕೆ. ಪ್ರಾಣೇಶ್‌ ಸಹಿತ ವೇದಿಕೆಯಲ್ಲಿ ಕುಳಿತಿದ್ದ ಶಾಸಕರು, ತಹಶೀಲ್ದಾರ್‌, ತಾ.ಪಂ.ಇಒ, ತಾಪಂ ಉಪಾಧ್ಯಕ್ಷೆ, ಹಾಗೂ ಜಿ.ಪಂ. ಸದಸ್ಯರಿಬ್ಬರನ್ನು ಸೇರಿದಂತೆ 6 ಮಂದಿಯನ್ನು ಪ್ರಾಥಮಿಕ ಸಂಪರ್ಕವೆಂದು ಪರಿಗಣಿಸಿ ಕಡ್ಡಾಯ ಹೋಂ ಕ್ವಾರಂಟೈನ್‌ಗೆ ಒಳಪಡಿಸಿದ್ದರೆ, ಪೊಲೀಸ್‌ ವೃತ್ತ ನಿರೀಕ್ಷಕರು, ತಾಲೂಕು ಆರೋಗ್ಯಾಧಿಕಾರಿ, ಎಂಜಿಎಂ ಸರಕಾರಿ ಆಸ್ಪತ್ರೆ ಆಡಳಿತಾಧಿಕಾರಿ, ಜಿ.ಪಂ, ಪಿಡಬ್ಲೂಡಿ, ಮೆಸ್ಕಾಂ ಸಹಾಯಕ ಅಭಿಯಂತರು, ಹೆದ್ದಾರಿ ಪ್ರಾಧಿಕಾರದ ಬೇಲೂರು ವಿಭಾಗೀಯ ಎಂಜಿನಿಯರ್‌ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಕೆಲ ಗ್ರಾ.ಪಂ. ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು, ಪತ್ರಕರ್ತರು ಸೇರಿದಂತೆ ಸುಮಾರು 65 ಮಂದಿಯನ್ನು ದ್ವಿತೀಯ ಸಂಪರ್ಕವೆಂದು ಪರಿಗಣಿಸಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಕ್ವಾರಂಟೈನ್‌ಗೊಳಗಾದವರನ್ನು ಅವರ ಮನೆಯಲ್ಲಿ ಇರುವುದನ್ನು ಖಚಿತಪಡಿಸಲು 8 ತಂಡ ರಚಿಸಲಾಗಿದೆ. ಪ್ರತಿದಿನ ಶಾಸಕರು, ಎಲ್ಲಾ ಅಧಿಕಾರಿಗಳು, ಪತ್ರಕರ್ತರ ಮನೆಗೆ ಭೇಟಿ ನೀಡಿ ಫೋಟೊ ತೆಗೆದು ಅಧಿಕಾರಿಗಳು ಕೊಂಡೊಯ್ಯುತ್ತಾರೆ. ಆದರೆ ಪ್ರಥಮ ಸಂಪರ್ಕದ ಶಾಸಕರು ಸಹಿತ ಇಬ್ಬರು ಅಧಿಕಾರಿಗಳು, ಮೂವರು ಸ್ಥಳೀಯ ಜನಪ್ರತಿನಿ ಧಿಗಳು ಹಾಗೂ ದ್ವಿತೀಯ ಸಂಪರ್ಕದ ಪತ್ರಕರ್ತರನ್ನುಹೊರತುಪಡಿಸಿ ಉಳಿದೆಲ್ಲಾ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅಲ್ಲದೇ ತಾಲೂಕಿನಾದ್ಯಂತ ಬೇಕಾಬಿಟ್ಟಿ ತಿರುಗಾಡುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ವಿಚಾರಿಸಿದರೆ ಬೇಜವಾಬ್ದಾರಿ ಉತ್ತರ ನೀಡಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಜನ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next