Advertisement

ಆಕ್ರೋಶ; ಕಾಫಿನಾಡಲ್ಲಿ ಮೊದಲ ಚುನಾವಣಾ ಬಹಿಷ್ಕಾರದ ಬ್ಯಾನರ್

02:13 PM Dec 19, 2022 | Team Udayavani |

ಚಿಕ್ಕಮಗಳೂರು : ವಾರದ ಹಿಂದೆ ಪಕ್ಷಾತೀತವಾಗಿ ಮುಂಬರುವ ವಿಧಾನಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದ ಕೊಪ್ಪ ತಾಲೂಕಿನ ಹಾಡುಗಾರ ಗ್ರಾಮಸ್ಥರು ಈಗ ಬ್ಯಾನರ್ ಅಳವಡಿಸಿ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಕಾಫಿನಾಡಲ್ಲಿ ಮೊದಲ ಚುನಾವಣಾ ಬಹಿಷ್ಕಾರದ ಬ್ಯಾನರ್ ಇದಾಗಿದ್ದು, ಪಕ್ಷಾತೀತವಾಗಿ ರಾಜಕೀಯ ಪಕ್ಷದ ಜವಾಬ್ದಾರಿ ಹುದ್ದೆಗಳಿಗೂ ರಾಜೀನಾಮೆ ಸಲ್ಲಿಸಿದ್ದಾರೆ.

ಗ್ರಾಮಕ್ಕೆ ಮೂಲಭೂತ ಸೌಲಭ್ಯ,ಸೇತುವೆ, ರಸ್ತೆಗಾಗಿ ಆಗ್ರಹಿಸಿದ್ದ ಗ್ರಾಮಸ್ಥರು ಗಡುವು ನೀಡಿದರೂ ರಸ್ತೆ ಮಾಡಲು ಮುಂದಾಗದ ಹಿನ್ನೆಲೆ ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಿದ್ದಾರೆ. ರಾಜೀನಾಮೆ ಎಚ್ಚರಿಕೆ ನೀಡಿದರೂ ಪರಿಹಾರ ಸಿಗದ ಕಾರಣ ಹೋರಾಟ ತೀವ್ರಗೊಳಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಬೂತ್ ಸಮಿತಿಯ ಸದಸ್ಯತ್ವಕ್ಕೆ ಹಲವು ಕಾರ್ಯಕರ್ತರು ರಾಜೀನಾಮೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next