Advertisement

ಅಧಿಕಾರಿಗಳ ನಡೆಗೆ ಆಕ್ರೋಶ

06:12 PM Jan 25, 2020 | Team Udayavani |

ಚನ್ನಪಟ್ಟಣ: ಪ್ರಸಕ್ತ ಸಾಲಿನ ಆಯವ್ಯಯ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಸಾರ್ವಜನಿಕರು ಬೆವರಿಳಿಸಿದ ಪ್ರಸಂಗ ನಗರಸಭೆ ಸಭಾಂಗಣದಲ್ಲಿ ನಡೆಯಿತು.

Advertisement

ನಗರಸೆಭೆ ಬಜೆಟ್‌ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸಲಹೆ ಸ್ವೀಕರಿಸಲು ಸಭೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕರು, ಹಿಂದಿನಬಜೆಟ್‌ಗಳಲ್ಲಿ ಸೇರಿಸಿದ್ದ ಎಷ್ಟು ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸಿದ್ದೀರಿ. ನಿಮ್ಮಿಷ್ಟ ಬಂದಂತೆ ಬಜೆಟ್‌ ಸಿದ್ಧಪಡಿಸಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಏನು ನಿರೀಕ್ಷೆ ಮಾಡಲು ಸಾಧ್ಯ: ಪಟ್ಟಣ ವ್ಯಾಪ್ತಿಯಲ್ಲಿ ಚರಂಡಿ, ರಸ್ತೆ, ಬೀದಿ ದೀಪ, ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಕಸದ ಸಮಸ್ಯೆ ವರ್ಷಗಳಾದರೂ ಸರಿಯಾಗಿಲ್ಲ, ಪ್ರತಿ ಮನೆಗಳ ಬಳಿ ಕಸ ಸಂಗ್ರಹಿಸಲು ಆಗಮಿಸುತ್ತಿದ್ದ ಆಟೋಗಳು ತಿಂಗಳಿ ನಿಂದ ಸ್ಥಗಿತಗೊಂಡಿವೆ. ಎಲೇಕೇರಿ ಬಳಿ ಕಸ ವಿಂಗಡಣಾ ಘಟಕ ನಿರ್ಮಾಣಕ್ಕೆ ಲಕ್ಷಾಂತರರೂ. ವ್ಯಯಿಸಿದ್ದೀರಿ ಅದು ಆರಂಭ ವಾಗಿಲ್ಲ. ಕಸ ವಿಲೇವಾರಿಗೆ ತಾತ್ಕಾಲಿಕ ಜಾಗ ಹುಡು ಕಲು ಆಗುತ್ತಿಲ್ಲ. ನಿಮ್ಮಿಂದ ಏನು ನಿರೀಕ್ಷೆ  ಮಾಡಲು ಸಾಧ್ಯ ಎಂದು ಹರಿಹಾಯ್ದರು.

ಕಾಟಾಚಾರದ ಸಭೆ: ಸಾರ್ವಜನಿಕರ ಹಣ ಪೋಲು ಮಾಡುವುದರಲ್ಲಿ ಅಧಿಕಾರಿಗಳದ್ದು, ಎತ್ತಿದ ಕೈ ಯಾವೊಬ್ಬ ಅಧಿಕಾರಿಯೂ ತಮ್ಮ ವ್ಯಾಪ್ತಿಯ ಕೆಲಸ ಮಾಡುವುದಿಲ್ಲ. ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳು ನೂರಾರಿವೆ. ಆಗಬೇಕಿರುವ ಕೆಲಸಗಳು ಸಾಕಷ್ಟಿವೆ. ಎಲ್ಲ ತಿಳಿದಿದ್ದರೂ, ಹೊಸದಾಗಿ ಏತಕ್ಕೆ ಸಲಹೆ ಕೇಳುತ್ತೀರಿ, ಆಡಳಿತವಿದ್ದಾಗ ಏನೇನು ಕೆಲಸಗಳು ಆಗಬೇಕು ಎನ್ನುವ ಪಟ್ಟಿಯನ್ನು ಈಗಾಗಲೇ ಪಡೆದುಕೊಂಡಿದ್ದೀರಿ, ಈಗ ಹೊಸದಾಗಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಎನ್ನುವ ಕಾಟಾಚಾರದ ಸಭೆ ಆಯೋಜನೆ ಮಾಡಿದ್ದೀರಿ ಎಂದು ಕಿಡಿಕಾರಿದರು.

ಚರಂಡಿ ದುರಸ್ತಿಗೊಳಿ: ಚಾನಲ್‌ ರಸ್ತೆಯಲ್ಲಿನ ಕಾಲುವೆ ಸಮಸ್ಯೆ ಸರಿಪಡಿಸಿಲ್ಲ. ಮೇಲ್ಭಾಗ ಮುಚ್ಚದೆ ಇರುವುದರಿಂದ ಚಾನಲ್‌ ಪಕ್ಕದ ನಿವಾಸಿಗಳು ನಿತ್ಯ ಗಬ್ಬು ವಾಸನೆ ಸಹಿಸಿಕೊಂಡು ಜೀವನ ಸಾಗಿಸಬೇಕು. ಕೆಲವು ವಾರ್ಡ್‌ಗಳಲ್ಲಿ ಚರಂಡಿನಿರ್ಮಾಣ ಮಾಡಲಾಗಿದೆ. ಆದರೆ ಕೊನೆಯಲ್ಲಿ ಯಾವ ಕಾಲುವೆಗೂ ಸಂಪರ್ಕ ನೀಡಿಲ್ಲ. ಇದರಿಂದ ನೀರು ಹರಿಯದೆ ಕೊಳೆಕು ಉಂಟಾಗಿ ರೋಗ ಹರಡಲು ಕಾರಣವಾಗುತ್ತಿದೆ. ಇನ್ನಾದರೂ ನಿರ್ಮಾಣವಾಗಿರುವ ಚರಂಡಿಗಳ ಮೇಲೆ ಮೇಲು ಹಾಸು ನಿರ್ಮಿಸುವ ಜತೆಗೆ ಚರಂಡಿ ಗಳ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿ ಎಂದರು.

Advertisement

ನೀರು ಗಂಟಿಗಳು, ಬೀದಿ ದೀಪ ಸರಿಪಡಿಸುವ ಗುತ್ತಿಗೆ ಹೊತ್ತವರು ಅಧಿಕಾರಿಗಳ ಮಾತನ್ನು ಕೇಳುತ್ತಿಲ್ಲ. ನಗರಸಭೆಯಲ್ಲಿ ಕೆಲಸ ಮಾಡಿಸಿಕೊಳ್ಳಲು ಸಾರ್ವಜನಿಕರು ದಿನ ನಿತ್ಯಅಲೆಯಬೇಕು. ಮೊದಲು ಅವುಗಳನ್ನು ಸರಿಪಡಿಸಿ ಸಿಬ್ಬಂದಿಯ ಬಗ್ಗೆ ನಿಗಾ ವಹಿಸಿ ಸಾರ್ವಜನಿಕರ ಕೆಲಸ ಮಾಡಿಕೊಡಿ ಎನ್ನುವ ಸಲಹೆಗಳು ವ್ಯಕ್ತವಾದವು.

ಸಂದರ್ಭದಲ್ಲಿ ನಗರಸಭೆ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next