Advertisement

ಒತ್ತುವರಿ ತೆರವಿಗೆ ಅರ್ಜಿ ಸಲ್ಲಿಕೆ ವಿರುದ್ಧ ಆಕ್ರೋಶ

02:26 PM Aug 03, 2019 | Team Udayavani |

ಕನಕಪುರ: ಧಾರ್ಮಿಕ ಕೇಂದ್ರಗಳಾದ ದೇವಾಲಯಗಳನ್ನು ತೆರವುಗೊಳಿಸಲು ಹೈಕೋರ್ಟ್‌ಗೆ ಅರ್ಜಿಸಲ್ಲಿಸಿದವರ ವಿರುದ್ಧ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಸದಸ್ಯರು, ಜಯ ಕರ್ನಾಟಕ ಸಂಘಟನೆಯ ಮುಖಂಡರು, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ನಗರದ ಪೆಟೆಕೆರೆ ಒತ್ತುವರಿಯಿಂದ ನಿರ್ಮಿತವಾಗಿದ್ದ ಅಯ್ಯಪ್ಪ ದೇವಾಲಯ, ಎಪಿಎಂಸಿ ಮಾರುಕಟ್ಟೆ, ತೋಟಗಾರಿಕೆ ಇಲಾಖೆ ಕಟ್ಟಡಗಳನ್ನು ತೆರವಿಗೆ ಹೈಕೋರ್ಟ್‌ನಲ್ಲಿ ಅರ್ಜಿಸಲ್ಲಿಸಿ, ಯಶಸ್ಸು ಕಂಡ ಆರ್‌ಟಿಐ ಕಾರ್ಯಕರ್ತರು ಅಷ್ಟಕ್ಕೆ ಸುಮ್ಮನಾಗಿಲ್ಲ. ಕೆಂಕೇರಮ್ಮ ದೇವಾಲಯ, ಮಠ ಮಾನ್ಯಗಳು ಹಾಗೂ ಸರ್ಕಾರ ಬಡವರಿಗೆ ನೀಡಿರುವ ನಿವೇಶನಗಳು ಒತ್ತುವರಿಯಿಂದ ನಿರ್ಮಿಸಲಾಗಿದೆ ಎಂದು ಸಾರ್ವಜನಿಕರಲ್ಲಿ ಆತಂಕ ಹುಟ್ಟುಹಾಕಿ, ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಂಕೇರಮ್ಮ ದೇವಾಲಯದಿಂದ ಹೊರಟು ನಗರದ ಮುಖ್ಯರಸ್ತೆಗಳಲ್ಲಿ ಸಾಗಿದ ಪ್ರತಿಭಟನಾಕಾರರು, ಚನ್ನಬಸಪ್ಪ ವೃತ್ತದ ಬಳಿ ಬರುತ್ತಿದ್ದಂತೆ ಪ್ರತಿಭಟನೆ ಚಿತ್ರೀಕರಣಕ್ಕೆ ಮುಂದಾದ ಆರ್‌ಟಿಐ ಕಾರ್ಯಕರ್ತ ರವಿಕುಮಾರ್‌ ಅವರನ್ನು ಪ್ರತಿಭಟನಾಕಾರರು ಹಲ್ಲೆ ಮಾಡಲು ಪ್ರಯತ್ನಿಸಿದರು. ತಕ್ಷಣ ಪೊಲೀಸರು ರವಿಕುಮಾರ್‌ ಅವರನ್ನು ರಕ್ಷಿಸಿ ಸ್ಥಳಾಂತರಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕಬ್ಟಾಳೇಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಮೂರ್ತಿ ಮಾತನಡಿದರು. ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ್‌, ಜೆಡಿಎಸ್‌ ಅಧ್ಯಕ್ಷ ಬಿ.ನಾಗರಾಜು, ಜಯಕರ್ನಾಟಕ ರಾಜ್ಯ ಸಂಚಾಲಕ ಕೃಷ್ಣಪ್ಪ, ವರ್ತಕರ ಸಂಘದ ಅಧ್ಯಕ್ಷ ಕೈಲಾಸ್‌ ಶಂಕರ್‌, ವಿರೇಶ್‌, ಪುರಸಭೆ ಮಾಜಿ ಅಧ್ಯಕ್ಷ ರಾಮಚಂದ್ರು, ಯೂತ್‌ ಕಾಂಗ್ರೆಸ್‌ ರಾಜ್ಯ ಉಪಾಧ್ಯಕ್ಷ ಕೆಂಪರಾಜು, ರಾಮಣ್ಣ, ಬೆಸ್ತರ ಸಂಘದ ಅಧ್ಯಕ್ಷ ಚಿಕ್ಕಣ್ಣ, ಪುರಸಭಾ ಸದಸ್ಯ ಚಾಮರಾಜು, ಕರವೇ ಮುಖಂಡ ಪುಟ್ಟಸ್ವಾಮಿ, ಬಂಡಿನಾಗರಾಜು, ಮರಿಸ್ವಾಮಿ, ಅಂದಾನಿಗೌಡ, ಮಹೇಶ್‌, ರವಿಕುಮಾರ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next