Advertisement

ನಾರಾಯಣಗೌಡ ವಿರುದ್ಧ ಆಕ್ರೋಶ

03:09 PM Jan 04, 2018 | |

ಇಂಡಿ: ಜ. 2ರಂದು ಇಂಡಿಯಲ್ಲಿ ಕರವೇ ತಾಲೂಕು ಘಟಕ ಹಮ್ಮಿಕೊಂಡಿದ್ದ ಗಡಿನಾಡು ಜಾಗೃತಿ ಸಮಾವೇಶದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ರಾಷ್ಟ್ರಪುರುಷ ಶಿವಾಜಿ ಮಹಾರಾಜರನ್ನು ಏಕವಚನದಲ್ಲಿ ಉತ್ಛರಿಸಿ ಅವಮಾನಿಸಿದ್ದು ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಮಹಾರಾಷ್ಟ್ರ ಕೀ ಜೈ, ಶಿವಾಜಿ ಕೀ ಜೈ ಎಂದು ಜೈಕಾರ ಹಾಕಿದವರು ಮುಠಾಳರು ಎಂಬ ಕೀಳು ಮಟ್ಟದ ಹೇಳಿಕೆ ನೀಡಿದ ನಾರಾಯಣಗೌಡ ಕೂಡಲೆ ಕ್ಷಮೆಯಾಚಿಸಬೇಕು. ಅವರ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಉಂಟಾಗಲಿದ್ದು ಟಿ.ಎ. ನಾರಾಯಣಗೌಡರನ್ನು ಮತ್ತೂಮ್ಮೆ ಇಂಡಿಗೆ ಆಗಮಿಸದಂತೆ ನಿರ್ಬಂಧಿಸಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಕಾಸುಗೌಡ ಬಿರಾದಾರ, ಯಮನಾಜಿ ಸಾಳುಂಕೆ, ದೇವೇಂದ್ರ ಕುಂಬಾರ ಮಾತನಾಡಿ, ಕನ್ನಡ ನಾಡು-ನುಡಿ ರಕ್ಷಣೆ ಮಾಡಬೇಕಾದ ಕರವೇ ಸಂಘಟನೆ ಸದಸ್ಯರು ಪ್ರತಿ ತಿಂಗಳು ಕಚೇರಿಗಳಿಗೆ ತೆರಳಿ ಮಮೂಲಿ ವಸೂಲಿ ಮಾಡುತ್ತಿದ್ದಾರೆ.

ಅಂತಹ ಸಂಘಟನೆಯವರು ಶಿವಾಜಿ ಮಹಾರಾಜರನ್ನು ನಿಂದಿಸುವುದು ಎಷ್ಟು ಸರಿ? ಮೊದಲು ತಮ್ಮ ಕಾರ್ಯವನ್ನು
ಅವರು ಸರಿಯಾಗಿ ಮಾಡಲಿ, ಅದೂ ಬಿಟ್ಟು ಹಿಂದೂ ಹೃದಯ ಸಾಮ್ರಾಟನ ಬಗ್ಗೆ ಅಮಾನವೀಯವಾಗಿ ಮಾತನಾಡಿದ್ದು ತೀವ್ರ ಖಂಡನೀಯ ಎಂದರು.

ನೂರಾರು ಹಿಂದು ಯುವ ಸಮಿತಿ ಕಾರ್ಯಕರ್ತರು ಪ್ರತಿಭಟನೆ ಮಾಡಿ, ನಗರದ ಬಸವೇಶ್ವರ ವೃತ್ತದಲ್ಲಿ ನಾರಾಯಣಗೌಡರ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಿ ಸಿಎಂಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಬುದ್ದುಗೌಡ ಪಾಟೀಲ, ಮಲ್ಲಿಕಾರ್ಜುನ ಹಾವಿನಾಳಮಠ, ಬಲಭೀಮ ಕಾಟಕರ, ಅನಿಲಕುಮಾರ
ಬಿರಾದಾರ, ನೇತಾಜಿ ಪವಾರ, ಸಂಜು ಕೋಳೆಕರ, ಧಾನಪ್ಪ ಪ್ರಧಾನಿ, ಶಿವಾಜಿ ಮಾನೆ, ರವಿ ಗೌಳಿ, ಅಪ್ಪು ಪವಾರ, ಅಪ್ಪು
ಮಾನೆ, ಪ್ರಕಾಶ ಕೋಳೆಕರ, ಜಗದೀಶ ಕುಂಬಾರ, ಸಂಜು ಪವಾರ, ಸಿದ್ದು ಸೂರ್ಯವಂಶಿ, ಗಜಾನನ ಕೋಳೆಕರ,
ವೀರೇಶ ಸುಲಾಖೆ, ಸಿದ್ದೇಶ ಅಂಬರಕರ, ಮಲ್ಲು ಕಡಣಿ, ಸಂಜು ಸುಲಾಖೆ, ಪುನೀತ ಕಾತರಕಿ, ನಿಲೇಶ ಮಾನೆ, ಶಿವಾಜಿ ಕೋಳೆಕರ, ಸೋನು ಕೋಳೇಕರ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next