Advertisement

ನಕಲಿ ಪತ್ರಕರ್ತರ ವಿರುದ್ಧ ಆಕ್ರೋಶ

12:24 PM Dec 18, 2019 | Suhan S |

ಕಾಗವಾಡ/ಉಗಾರ ಬಿಕೆ: ನಕಲಿ ಪತ್ರಕರ್ತರ ಹಾವಳಿ ಎಲ್ಲೆಡೆ ಹೆಚ್ಚಿದ್ದು, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕಾಗವಾಡ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಪೊಲೀಸ್‌ ಇಲಾಖೆ, ತಹಶೀಲ್ದಾರ್‌, ಬಿಇಒ ಇತರ ಇಲಾಖೆಗೆ ಮನವಿ ಸಲ್ಲಿಸಿದರು.

Advertisement

ಮಂಗಳವಾರ ಕಾಗವಾಡ ಪೊಲೀಸ್‌ ಠಾಣಾ ಮುಖ್ಯಸ್ಥ ಎಂ.ಎಸ್‌. ಕರಜಿಮಠ, ಕಾಗವಾಡ ಉಪ ತಹಶೀಲ್ದಾರ್‌ ವಿಜಯ ಚೌಗುಲೆ, ಕಾಗವಾಡ ಬಿಇಒ ಎ.ಎಸ್‌. ಜೋಡಗೇರಿ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿದರು. ತಾಲೂಕಿನಲ್ಲಿ ಕನ್ನಡ, ಮರಾಠಿ ಪತ್ರಿಕೆಗಳ ವರದಿಗಾರರು, ಟಿವಿ ಮಾಧ್ಯಮದ ವರದಿಗಾರರು ಸೇವೆ ನೀಡುತ್ತಿದ್ದಾರೆ. ಆದರೆ ಕೆಲವರು ತಾವು ವರದಿಗಾರರು, ಟಿವಿ ಚಾನಲ್‌ ಪತ್ರಕರ್ತರೆಂದು ಹೇಳುತ್ತ, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವುದು, ಮೋಸ ಮಾಡುತ್ತಿರುವ ಮಾಹಿತಿ ತಿಳಿದು ಬಂದಿದೆ. ಯಾವುದೇ ದಾಖಲೆ ಇಲ್ಲದ ಅಥವಾ ಸುಳ್ಳು ದಾಖಲೆ ಪಡೆದು ಪತ್ರಕರ್ತರೆಂದು ಹೇಳಿ ವಂಚಿಸುವವರ ವಿರುದ್ಧ ಕ್ರಮ ಜರುಗಿಸ ಬೇಕೆಂದು ಮನವಿಯಲ್ಲಿ ಆಕ್ರೋಶ-ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಸುಕುಮಾರ ಬನ್ನೂರೆ, ಪ್ರಭಾಕರ ಗೊಂಧಳಿ, ಕುಮಾರ ಪಾಟೀಲ, ರಾಜು ಇಂಗಳಗಾಂವೆ, ಸುರೇಶ ಕಾಗಲಿ, ರಂಗನಾಥ ದೇಶಿಂಗಕರ, ಲಕ್ಷ್ಮಣ ಸೂರ್ಯವಂಶಿ, ಮುರಗೇಶ ಗಸ್ತಿ, ಶಿವಾಜಿ ಪಾಟೀಲ, ರಾಜಕುಮಾರ ಚೋಳಕೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next