ತಿ.ನರಸೀಪುರ: ಅಬಕಾರಿ ಇಲಾಖೆ ಮೇಲೆ ದಸಂಸ ಮುಖಂಡರಿಂದ ಪ್ರಶ್ನೆಗಳ ಸುರಿಮಳೆ, ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ಅಬಕಾರಿ ಉಪ ನೀರಿಕ್ಷಕ ಎಚ್.ಜಿ.ಶ್ರೀನಿವಾಸ್ ತಬ್ಬಿಬ್ಟಾದ ಘಟನೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ನಡೆಯಿತು.
ಪಟ್ಟಣದ ತಾಪಂ ಸಭಾಂಗಣದಲ್ಲಿ ತಹಶೀ ಲ್ದಾರ್ ಸಿ.ಜಿ.ಗೀತಾ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅಬಕಾರಿ ಇಲಾಖೆಯ ಲೋಪಗಳ ಬಗ್ಗೆ ಒಬ್ಬರಾದ ಮೇಲೊಬ್ಬರಂತೆ ಪ್ರಶ್ನೆ ಕೇಳುವ ಮೂಲಕ ಅಧಿಕಾರಿಗೆ ಚಳಿ ಬಿಡಿಸಿದರು.
ದಸಂಸ ಜಿಲ್ಲಾ ಸಂಚಾಲಕ ಸೋಸಲೆ ಶಶಿಕಾಂತ್ ಮಾತನಾಡಿ, ನರಸೀಪುರ ಪಟ್ಟಣದಲ್ಲಿ ವೈನ್‌ಶಾಪ್ ಗಳು ಅಬಕಾರಿ ನಿಯಮ ಪಾಲನೆ ಮಾಡುತ್ತಿಲ್ಲ ತಿಬ್ಟಾದೇವಿ ರೆಸಾರ್ಟ್, ಶಿವಶಕ್ತಿ ಬಾರ್ ಅಂಡ್ ರೆಸ್ಟೋರೆಂಟ್ ಗಳು ಕೊಠಡಿಗಳಲ್ಲಿ ಮದ್ಯಪಾನಕ್ಕೆ ವ್ಯವಸ್ಥೆ ಮಾಡಬೇಕು ಆದರೆ ರಸ್ತೆ ಮತ್ತು ಅಕ್ಕಪಕ್ಕದ ಸ್ಥಳಗಳಲ್ಲಿ ಮದ್ಯಪಾನ ಮಾಡಿಸುತ್ತಿದ್ದಾರೆ. ತಿಬ್ಟಾದೇವಿ ರೆಸಾರ್ಟ್ ನಲ್ಲಿ ಸಂಜೆ 6 ಗಂಟೆ ಆಗುತ್ತಿದ್ದಂತೆ ರೆಸಾರ್ಟ್ ಅಕ್ಕ ಪಕ್ಕದ ಮಾಳದಲ್ಲಿ ಹೆದ್ದಾರಿ ಅಂಚಿನಲ್ಲಿ ಮದ್ಯಾಪಾನ ಮಾಡುವುದನ್ನು ನಿತ್ಯ ಕಾಣಬಹುದು ಬೇಕಿದ್ದರೆ ಅಧಿಕಾರಿಗಳು ಪರಿಶೀಲನೆ ಮಾಡಬಹುದು ಎಂದರು.
ತಾಲೂಕಿನ ಅಬಕಾರಿ ಅಧಿಕಾರಿ ಯಾವುದೇ ವೈನ್‌ಶಾಪ್‌ಗ್ಳ ಮೇಲೆ ನಿಯಮ ಏರಿ ಸನ್ನದ್ದುರಾರ ಮೇಲೆ ಕ್ರಮವಾಗಿರುವ ಬಗ್ಗೆ ನಿರ್ದೇಶನವಿಲ್ಲ ಇವರು ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ. ಅಕ್ರಮ ಮದ್ಯ ಮಾರಾಟ ಮತ್ತು ಮದ್ಯಪಾನದ ಬಗ್ಗೆ ಚರ್ಚಿಸುವ ಅವಶ್ಯಕತೆ ಇಲ್ಲ. ಹಾಗಾಗಿ ಮೊದಲು ಅಬಕಾರಿ ಇಲಖೆ ಅಧಿಕಾರಿಗಳ ಮೇಲೆ ಕ್ರಮವಾಗಬೇಕು ಎಂದು ಒತ್ತಾಯಿಸಿದರು.
ದಸಂಸ ಮುಖಂಡ ಸೋಸಲೆ ರಾಜಶೇಖರ್ ಮಾತನಾಡಿ, ತಲಕಾಡು ಮುಖ್ಯ ರಸ್ತೆಯ ತೋಟಗೇರಿ ಮಾರಮ್ಮನ ದೇವಸ್ಥಾನದ ಸನಿಹದಲ್ಲಿ ತೆರದಿರುವ ಎಂಎಸ್‌ಐಎಲ್ ವೈನ್ ಶಾಪ್ ನಿಯಮಬಾಹಿರವಾಗಿ ತೆರೆದಿದೆ ಪದವಿ ಮತ್ತು ಪದವಿ ಪೂರ್ವ ಕಾಲೇಜು, ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯ, ಕಸಬಾ ರೈತ ಸಂಪರ್ಕ ಕೇಂದ್ರ, ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಉದ್ಘಾಟನೆ ಹಂತದಲ್ಲಿರುವ ಲೋಕೋಪ ಯೋಗಿ ಇಲಾಖೆ ಮತ್ತು ಅತಿಥಿ ಗೃಹ ಇಷ್ಟಲ್ಲದೆ ದೇವಸ್ಥಾನಗಳು ಸಹ ಇದ್ದರು ಸಹ ಸನಿಹದಲ್ಲೇ ಎಂಎಸ್‌ಐಎಲ್ ಬಾರ್ ತೆರೆದಿರುವುದು ನಿಯಮ ಬಾಹಿರವಲ್ಲವೇ ಎಂದು ಪ್ರಶ್ನೆ ಮಾಡಿದರು.
ಪುರಸಭೆ ನಾಮ ನಿರ್ದೇಶಿತ ಸದಸ್ಯ ಗಣೇಶ್ ಮಾತನಾಡಿ, ಪಟ್ಟಣದ ಭ ಗವಾನ್ ಚಿತ್ರ ಮಂದಿರದ ಬಳಿ ಇರುವ ಅನಂತು ಬಾರ್ ಮಾಲೀಕರು ಸೇರಿದಂತೆ ಬಹುತೇಕ ಬಾರ್‌ನವರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಅದರಲ್ಲೂ ಜನ ನಿಬಿಡ ಸ್ಥಳವಾದ ಭಗವಾನ್ ಚಿತ್ರಮಂದಿರದ ಬಳಿ ಇರುವ ವೈನ್‌ಶಾಪ್‌ನವರು ಸ್ಥಳದಲ್ಲೇ ಮದ್ಯಪಾನ ಮಾಡಿಸುತ್ತಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ಮಹಿಳೆಯರು ಮಕ್ಕಳು, ವಿದ್ಯಾರ್ಥಿಗಳು ಓಡಾಡಬೇಕಾದರೆ ಜೀವ ಮತ್ತು ಮಾನ ಕೈಯಲ್ಲಿಡಿದು ಓಡಾಡ ಬೇಕಾಗಿದೆ ಅಬಕಾರಿ ಅಧಿಕಾರಿ ಕಣ್ಣಿದ್ದು ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸಭೆಯಲ್ಲಿ ಸ್ಮಶಾನ ಒತ್ತುವರಿ, ಬಂಗಾರಪ್ಪ ಬಡಾವಣೆ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ತಹಶೀಲ್ದಾರ್ ಸಿ.ಜಿ.ಗೀತಾ, ತಾಪಂ ಇಒ ಸಿ.ಕೃಷ್ಣ, ಸಮಾಜ ಕಲ್ಯಾಣ ಅಧಿಕಾರಿ ರಾಮೇಗೌಡ, ಪೋಲೀಸ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ, ಉಪ ತಹಶೀಲ್ದಾರ್ ಜೆ.ಕೆ.ಪ್ರಭುರಾಜ್, ಪುರಸಭೆ ಮುಖ್ಯಾಧಿಕಾರಿ ಬಸವರಾಜು, ಜಿಪಂ ಎಇಇ ಲಕ್ಷ್ಮಣ್‌ರಾವ್, ತಾಲೂಕು ವೈದ್ಯಾಧಿಕಾರಿ ರವಿಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವಯ್ಯ, ಮುಖಂಡರಾದ ತುಂಬಲ ಮಂಜುನಾಥ್, ಆಲಗೂಡು ಶಿವಕುಮಾರ್, ಶಿವಣ್ಣ, ಬಡ್ಡು ಶಿವಕುಮಾರ್, ಮಿಥುನ್, ಉಮಾಮಹದೇವ, ಬನ್ನೂರು ಚಿಕ್ಕಣ್ಣ, ಆಲಗೂಡು ನಾಗರಾಜು, ಗದ್ದೆ ಮೋಳೆ ಹೊನ್ನನಾಯಕ, ಘಟಕ ಮಹದೇವ್, ಕೇತುಪುರ ಶಿವಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.