Advertisement

ಗ್ಯಾರಂಟಿ ಕಾರ್ಡ್‌ ಹೆಸರಲ್ಲಿ ಜನತೆಗೆ ಮೋಸ

02:07 PM Apr 08, 2023 | Team Udayavani |

ತಿ.ನರಸೀಪುರ: ಅರವತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಜನಮನಣೆ ಕಳೆದುಕೊಂಡು ಗ್ಯಾರಂಟಿ ಕಾರ್ಡ್‌ ಕೊಡ್ತೀವಿ ಎಂದು ಹೇಳಿ ಜನರಿಗೆ ಮತ್ತೆ ಮೋಸ ಮಾಡಲು ಹೊರಟಿದೆ ಎಂದು ಮುಜರಾಯಿ ಇಲಾಖೆ ಸಚಿವ ಆರೋಪಿಸಿದರು.

Advertisement

ವರುಣಾ ವಿಧಾನಸಭಾ ಕ್ಷೇತ್ರದ ಸುತ್ತೂರು ಗ್ರಾಮದಲ್ಲಿ ಜಿಲ್ಲಾ ಮಟ್ಟದ ಒಬಿಸಿ ಮೋರ್ಚಾ ಸಮಾವೇಶದಲ್ಲಿ ಮಾತನಾಡಿ, 60 ವರ್ಷ ದೀರ್ಘ‌ ಅವಧಿ ಆಡಳಿತ ನಡೆಸಿದ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಚುನಾವಣೆ ಪ್ರಣಾಳಿಕೆಯ ಮೂಲಕ ಚುನಾವಣೆಗೆ ಹೋಗಬೇಕಾದವರು ಗ್ಯಾರಂಟಿ ಕಾರ್ಡ್‌ ಮೂಲಕ ಚುನಾವಣೆಗೆ ಹೋಗಿದ್ದಾರೆ. ಮತ್ತೆ ವಿರೋಧ ಪಕ್ಷದ ಸ್ಥಳದಲ್ಲಿ ಕೂರುವುದು ಗ್ಯಾರಂಟಿ ಆದರಿಂದ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಆದ್ದರಿಂದ ಮೈಸೂರು ಜಿಲ್ಲೆ 11 ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರ ಬಾಬು ಮಾತನಾಡಿ, ಬಿಜೆಪಿ ಸರಕಾರ ಸಂವಿಧಾನದ ಆಶಯದಂತೆ ತಳ ಸಮುದಾಯ ದವರಿಗೂ ಸಹ ರಾಜಕೀಯ ಸಮಾನತೆಯನ್ನು ನೀಡಿದೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ತಳ ಸಮುದಾಯದ ಗಾಣಿಗ ಸಮುದಾಯಕ್ಕೆ ಸೇರಿವವರು ಹಾಗೂ ಈ ದೇಶದ ರಾಷ್ಟ್ರಪತಿಯ ನ್ನಾಗಿ ಆದಿವಾಸಿ ಮಹಿಳೆ ದ್ರೌಪದಿ ಮುರ್ಮಾ ಅವರನ್ನು ಮಾಡುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿ ಹಿಡಿದಿದ್ದಾರೆ ಎಂದು ತಿಳಿಸಿದರು.

ಈ ಕ್ಷೇತ್ರದವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದರು. ಈ ಬಾರಿ ಸಹ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿ ದ್ದಾರೆ. ನಿಮ್ಮ ಮನೆ ಮುಂದೆ ಮತ ಕೇಳಲು ಬಂದಾಗ ಒಬಿಸಿ ಸಮುದಾಯಗಳಿಗೆ ಅವರು ಕೊಡುಗೆ ಏನೆಂದು ಪ್ರಶ್ನಿಸಿ. ಆದರೆ ಈ ಸಮುದಾ ಯಗಳಿಗೆ ಅವರು ಕೊಡುಗೆ ಶೂನ್ಯ ಎಂದರು.

ಕುರುಬ ಸಮಾಜದ ಮುಖಂಡರಾದ ಗ್ರಾಂಪಂ ಸದಸ್ಯ ಮನ್ನೆಹುಂಡಿ ನಾಗರಾಜು, ಮುದ್ದ ಬೀರನ ಹುಂಡಿ ನಿಂಗರಾಜು ಹಾಗೂ ವಿವಿಧ ಮುಖಂಡರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಗೊಂಡರು.

Advertisement

ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಮಂಗಳಾ ಸೋಮಶೇಖರ್‌, ವರುಣಾ ಮಂಡಲ ಅಧ್ಯಕ್ಷ ವಿಜಯಕುಮಾರ್‌, ಪ್ರಧಾನ ಕಾರ್ಯ ದರ್ಶಿ ರಂಗು ನಾಯಕ, ಜಿಲ್ಲಾ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಪರಮೇಶ್ವರಪ್ಪ, ವರುಣಾ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಮಂಜು ಕುಮಾರ್‌, ನಿಕಟ ಪೂರ್ವ ಜಿಲ್ಲಾ ಅಧ್ಯಕ್ಷ ವೆಂಕಟರಮಣ ಶೆಟ್ಟಿ, ಮೈ ಮುಲ್‌ ನಿರ್ದೇಶಕ ಸದಾನಂದ್‌, ಹಿರಿಯ ಮುಖಂಡ ತೋಟದಪ್ಪ ಬಸವರಾಜು, ಜಿಪಂ ಮಾಜಿ ಅಧ್ಯಕ್ಷ ಸಿದ್ಧವೀರಪ್ಪ, ಶರತ್‌ ಪುಟ್ಟಬುದ್ಧಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಹಾದೇವಯ್ಯ, ಶಿವಯ್ಯ, ಬಸವರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next