Advertisement

ದಲಿತ ವಿರೋಧಿ ನೀತಿ ವಿರುದ್ಧ ಆಕ್ರೋಶ

05:18 PM Nov 19, 2019 | Suhan S |

ಮದ್ದೂರು: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳು ರಸ್ತೆ ತಡೆದು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ಉಗ್ರನರಸಿಂಹಸ್ವಾಮಿ ದೇವಾಲಯದ ಬಳಿ ಜಮಾವಣೆಗೊಂಡ ಸಂಘಟನೆಯ ಪದಾಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಂಬೇಡ್ಕರ್‌ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಪ್ರತಿಕೃತಿ ದಹಿಸಿದರು.

ಸಂಚಾರ ಅಸ್ತವ್ಯಸ್ತ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತಮಟೆ ಬಾರಿಸುವ ಮೂಲಕ ಮೆರವಣಿಗೆ ನಡೆಸಿದ ಸಂಘಟನೆ ಕಾರ್ಯ ಕರ್ತರು ಸಂವಿಧಾನ ವಿರೋಧಿ ನೀತಿ ಖಂಡಿಸಿದರು. ಮೈಸೂರು-ಬೆಂಗಳೂರು ಹೆದ್ದಾರಿ ತಡೆದ ಪರಿಣಾಮ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅಂಬೇಡ್ಕರ್‌ಗೆ ಅವಮಾನ: ಭಾರತ ಸಂವಿಧಾನ ಅಂಬೇಡ್ಕರ್‌ ಬರೆದಿಲ್ಲ ಎಂದು ಅವ ಹೇಳನಕಾರಿ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಶಂಕರ್‌ ಅವರನ್ನು ಕರ್ತವ್ಯದಿಂದ ವಜಾ ಗೊಳಿಸಿ ದೇಶ ದ್ರೋಹಿ ಪ್ರಕರಣ ದಾಖಲು ಮಾಡಿ ಬಂಧಿಸುವಂತೆ ಆಗ್ರಹಿಸಿದರು.

ಸರ್ಕಾರದ ಮೌನ ಸರಿಯಲ್ಲ: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರನ್ನು ಹೊಣೆಗಾರರನ್ನಾಗಿ ಮಾಡಿ ಸಚಿವ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನದ ಬಗ್ಗೆ ಕೆಲ ವ್ಯಕ್ತಿಗಳು ಹೇಳಿಕೆ ನೀಡುತ್ತಿದ್ದರೂ ಸರ್ಕಾರ ಮೌನ ವಹಿಸಿರುವ ಕ್ರಮ ಖಂಡಿಸಿದರು.

ಸಂವಿಧಾನ ವಿರೋಧಿ ನೀತಿ: ಸಂವಿಧಾನ ಶಿಲ್ಪಿಯೆಂದೇ ಕರೆಯಲ್ಪಡುವ ಅಂಬೇಡ್ಕರ್‌ ಅವರು ವಿವಿಧ ದೇಶಗಳ ಸಂವಿಧಾನ ಅಧ್ಯ ಯನ ಮಾಡಿ, ಅವಲೋಕಿಸಿ ಉತ್ಕೃಷ್ಟ ಹಾಗೂ ಮಾನವೀಯ ನೆಲಗಟ್ಟಿನಲ್ಲಿ ರಚಿಸಿ ರುವ ಭಾರತದ ಘನ ಸಂವಿಧಾನವನ್ನು ವಿಶ್ವವೇ ಮೆಚ್ಚಿಕೊಂಡಿದೆ. ಆದರೆ, ಕೆಲವರು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಸಂವಿಧಾನ ಮಹತ್ವ ತಿಳಿಸಿ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ ಅವರ ಬಗ್ಗೆ ಮನು ವಾದಿಗಳು ಬಿಜೆಪಿ ಮತ್ತು ಸಂಘ ಪರಿವಾರ ಬೆಂಬಲಿಸುವ ಆಡಳಿತಾರೂಢ ಮಂತ್ರಿಗಳು, ಅಧಿಕಾರಿಗಳು ನಿರಂತರವಾಗಿ ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡುತ್ತಿರುವ ಕ್ರಮ ಸರಿಯಲ್ಲವೆಂದ ಅವರು ಕೂಡಲೇ ಸರ್ಕಾರ ಸಂವಿಧಾನದ ಮಹತ್ವ, ಅಂಬೇಡ್ಕರ್‌ ಕುರಿತು ಪಠ್ಯ ಪುಸ್ತಕದಲ್ಲಿ ಅಳವಡಿಸಿ ಜಾಗೃತಿ ಮೂಡಿಸ ಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹ ಸೀಲ್ದಾರ್‌ ನಾಗೇಶ್‌ ಮನವಿ ಸ್ವೀಕರಿಸಿ ಮಾತ ನಾಡಿ, ತಮ್ಮ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಬೋರಯ್ಯ, ಮಾಜಿ ಅಧ್ಯಕ್ಷ ಸುರೇಶ್‌, ಮಾಜಿ ಸದಸ್ಯ ಹೊಂಬಯ್ಯ, ಸಂಘಟನೆ ಪದಾಧಿಕಾರಿಗಳಾದ ಅಂದಾನಿ ಸೋಮನಹಳ್ಳಿ, ಕಬ್ಟಾಳಯ್ಯ, ಡಿ.ಕೆ.ಕೃಷ್ಣ, ರವಿಕುಮಾರ್‌, ಶಿವು, ದೊರೆಸ್ವಾಮಿ, ರಮಾ ನಂದ, ಸಿದ್ದರಾಮು, ಕರಡಕೆರೆ ಯೋಗೇಶ್‌, ಹುಲಿಗೆರೆಪುರ ಮಹದೇವು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next