Advertisement
ಸಾಮಾನ್ಯವಾಗಿ ಒಳಾಂಗಣ ಅಡುಗೆ ಕೋಣೆಗಳ ಮಾದರಿಯಲ್ಲೇ ಇವುಗಳು ಕಂಡುಬಂದರೂ ವಿನ್ಯಾಸದಲ್ಲಿ ಮಾತ್ರ ಕೊಂಚ ಬದಲಾವಣೆಗಳಾಗುವುದನ್ನು ಗಮನಿಸಬಹುದು. ಸಿಂಕ್, ಸ್ಟೋರೇಜ್ ಮುಂತಾದ ವ್ಯವಸ್ಥೆಗಳನ್ನು ಈ ಬಗೆಯ ಅಡುಗೆ ಕೋಣೆಗಳಲ್ಲಿ ಮಾಡಬಹುದಾಗಿದ್ದರೂ ಫ್ರಿಜ್‌ನಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮುಖ್ಯ ಅಡುಗೆ ಕೋಣೆಯಲ್ಲಿಯೇ ಇಡಬೇಕಾಗುತ್ತದೆ. ಒಂದು ವೇಳೆ ಇವುಗಳನ್ನೂ ಹೊರಾಂಗಣ ಅಡುಗೆ ಕೋಣೆಗಳಲ್ಲಿಯೇ ಅಳವಡಿಸಬೇಕು ಎಂಬ ಅಭಿಲಾಷೆ ನಿಮ್ಮದಾಗಿದ್ದರೆ ಅದಕ್ಕೆ ತಗುಲುವ ವೆಚ್ಚ ಕೊಂಚ ಹೆಚ್ಚು.
ಹೊರಾಂಗಣ ಅಡುಗೆ ಕೋಣೆಗಳ ನಿರ್ಮಾಣದ ವೇಳೆ ಗಾಳಿಯ ದಿಕ್ಕು ಯಾವ ಕಡೆಯಿಂದ ಯಾವ ಕಡೆಗೆ ಇದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಮನೆಯ ಹೊರ ಪ್ರದೇಶದಲ್ಲಿ ಗಾಳಿ ಜಾಸ್ತಿ ಇರುವುದರಿಂದ ಗಾಳಿ ಬೀಸುವ ದಿಕ್ಕಿನಲ್ಲಿ ನಿಮ್ಮ ಅಡುಗೆ ಕೋಣೆಯ ಒಲೆಗಳಿದ್ದಲ್ಲಿ ಪದೇ ಪದೇ ಬೆಂಕಿ ಆರಿಹೋಗುವ ಅಥವಾ ಅಗ್ನಿ ಅವಘಡಗಳು ಸಮಭವಿಸಬಹುದಾದ ಸಾಧ್ಯತೆಗಳಿರುತ್ತವೆ.
Related Articles
ಈ ಬಗೆಯ ಅಡುಗೆ ಕೋಣಗಳ ಮೇಲೆ ಚಿಕ್ಕದೊಂದು ಮಾಡು ಅಥವಾ ಹೊದಿಕೆಯಿದ್ದರೆ ಚೆನ್ನ. ಬಿಸಿಲಿನ ಸಂದರ್ಭ ದಲ್ಲಿ ಇವು ನಿಮಗೆ ನೆರಳು ನೀಡುವುದರ ಜತೆಗೆ ಗಾಳಿಗೆ ಕಸ, ಕಡ್ಡಿಗಳು ನಿಮ್ಮ ಅಡುಗೆ ಕೋಣೆ ಸೇರದಂತೆ ಇವು ತಡೆಯಬಲ್ಲವು.
Advertisement
ಉತ್ತಮ ಬೆಳಕಿನ ವ್ಯವಸ್ಥೆಈ ಮಾದರಿಯ ಅಡುಗೆ ಕೋಣೆಗಳು ಹೊರಾಂಗಣದಲ್ಲಿಯೇ ಇರುವುದರಿಂದ ಹಗಲು ಯಾವುದೇ ಕೃತಕ ಬೆಳಕಿನ ಆವಶ್ಯಕತೆ ಬೇಕಾಗಿಲ್ಲ. ಆದರೆ ರಾತ್ರಿ ಉತ್ತಮ ಬೆಳಕಿನ ವ್ಯವಸ್ಥೆ ಬೇಕೇ ಬೇಕು. ನಿಮ್ಮ ಅಡುಗೆ ಕೋಣೆಯ ಅಕ್ಕ ಪಕ್ಕದಲ್ಲಿರುವ ಮರಗಳಿಗೆ ಲೈಟ್ ಅಳವಡಿಸಿ. ಅವುಗಳ ಬೆಳಕು ನೇರವಾಗಿ ಅಡುಗೆ ಕೋಣೆಯ ಪ್ರದೇಶಕ್ಕೆ ಬೀಳುವಂತೆ ಮಾಡಿದಲ್ಲಿ ರಾತ್ರಿಯೂ ನೀವು ಪ್ರಕೃತಿ ಸೌಂದರ್ಯ ಸವಿಯಬಹುದು. ಸ್ವಚ್ಛತೆಗೆ ಆದ್ಯತೆ ನೀಡಿ
ಒಳಾಂಗಣ ಅಡುಗೆ ಕೋಣೆಗಳಿಗಿಂತ ಈ ಬಗೆಯ ಅಡುಗೆ ಕೋಣೆಗಳ ಸ್ವತ್ಛತೆಗೆ ಕೊಚ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ಸಿಂಕ್‌ಗಳನ್ನು ಆಗಾಗ ಸ್ವತ್ಛ ಮಾಡುವುದರ ಜತೆಗೆ ಧೂಳು, ಕಸಗಳನ್ನು ತೆರವುಗೊಳಿಸುವ ಕಾರ್ಯವನ್ನು ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ನೀವು ಮಾಡಲೇ ಬೇಕು. - ಪ್ರಸನ್ನ ಹೆಗಡೆ ಊರಕೇರಿ