ವಿಜಯಪುರ : ಅವಧಿ ಮೀರಿದ ಕಾಫ್ ಸಿರಪ್ ಔಷಧಿ ಬಾಟಲಿಯ ದಿನಾಂಕ ತಿದ್ದಿ, ಅಕ್ರಮವಾಗಿ ಮಾರಾಟಕ್ಕೆ ಮುಂದಾದ ಇಬ್ಬರನ್ನು ಬಂಧಿಸಿರುವ ಜಿಲ್ಲೆಯ ಅಪರಾಧ ವಿಭಾಗದ ವಿಶೇಷ ದಳದ ಪೊಲೀಸರು 4 ಲಕ್ಷ ರೂ. ಮೌಲ್ಯದ ಔಷಧಿಯನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಪುಲಕೇಶಿ ನಗರದ ನಿರ್ಜನ ಪ್ರದೇಶದಲ್ಲಿ ಅವಧಿ ಮೀರಿದ ಔಷಧಿ ಮಾರಾಟದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಬಾಟಲ್ ಗಳನ್ನು ಸ್ಯಾನಿಟೈಸರ್ ಬಳಸಿ ಅವಧಿ ಮೀರಿದ ದಿನಾಂಕ ಅಳಿಸಿ ಅಕ್ರಮವಾಗಿ ಯುವಕರಿಗೆ ಮಾರಾಟ ಮಾಡಲಾಗುತ್ತಿತ್ತು. ಈ ವೇಳೆ ಅಪರಾಧ ವಿಭಾಗದ ಸಿಪಿಐ ಸುರೇಶ ಬೆಂಡೆಗುಂಬಳ ನೇತೃತ್ವದ ತಂಡ ದಾಳಿ ನಡೆಸಿದೆ.
ಇದನ್ನೂ ಓದಿ:ದಾವಣಗೆರೆ : ಬಾತಿ ದರ್ಗಾದ ಹುಂಡಿಗೆ ಬೆಂಕಿ ; ಲಕ್ಷಾಂತರ ರೂ. ಬೆಂಕಿಗಾಹುತಿ
ಬಂಧಿತರನ್ನು 35 ವರ್ಷದ ಮಹ್ಮದ್ ಸಾಧಿಕ್ ಸಿಖಂದರ್ ಭತಗುಣಕಿ, ಮಹ್ಮದ್ ಮೈನುದ್ದೀನ್ ಕೊತ್ತಲ ಎಂದು ಗುರುತಿಸಲಾಗಿದೆ. ಬಂಧಿತರಿಂದ ಅಕ್ರಮವಾಗಿ ಮಾರಾಟಕ್ಕೆ ಸಂಗ್ರಹಿಸಿದ್ದ 4,16,696 ರೂ. ಮೌಲ್ಯದ ಅವಧಿ ಮೀರಿದ ಕಾಫ್ ಸಿರಪ್ ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಅಪರಾಧ ವಿಭಾಗದ ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.