Advertisement
ಬೆಳಗಾವಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಿತ್ರ ಪರಿವಾರ ವತಿಯಿಂದ ರವಿ ವಾ ರ ಹಮ್ಮಿಕೊಂಡಿದ್ದ 26ನೇ ವರ್ಷದ ಹಿಂದೂ ಬಾಂಧವರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಭಾರತದಂಥ ಜೀವನ ಪದ್ಧತಿ ಜಗತ್ತಿನ ಎಲ್ಲಿಯೂ ಇಲ್ಲ. ವಿದೇಶದಲ್ಲಿ ಐದಾರು ವಿವಾಹವಾಗಿ ಮಕ್ಕಳನ್ನು ಅನಾಥಾಶ್ರಮಗಳಲ್ಲಿ ಓದಿಸುವ ಪದ್ಧತಿ ಇದೆ. ನಮ್ಮ ಮಕ್ಕಳು ತಂದೆ-ತಾಯಿ ಮಡಿಲಲ್ಲಿ ಓದುತ್ತಿದ್ದಾರೆ. ಜಗತ್ತಿನಲ್ಲಿ ಅತ್ಯಂತ ಸಂತೋಷ ಕುಟುಂಬ ಇರುವುದು ಭಾರತದಲ್ಲಿ ಮಾತ್ರ. ಮುಸ್ಲಿಮರು-ಕ್ರೈಸ್ತರು ಭಾರತವನ್ನು ಪ್ರೀತಿಸಲ್ಲ, ದ್ವೇಷಿಸುತ್ತಾರೆ ಎಂದು ಕಿಡಿಕಾರಿದರು.
ಪೂನಾದ ಹಿಂದೂತ್ವ ಶೌರ್ಯ ಪ್ರಶಸ್ತಿ ಪುರಸ್ಕೃತ ಶರದ್ ಭಾವು ಮೋಹೊಳ ಮಾತನಾಡಿ, ಹಿಂದೂ ರಾಷ್ಟ್ರ ನಿರ್ಮಾಣದತ್ತ ಭಾರತ ಮುನ್ನುಗ್ಗುತ್ತಿದೆ. ಅಖಂಡ ಭಾರತದ ಕಲ್ಪನೆ ಸಾಕಾರಗೊಳ್ಳುವ ಕಾಲ ಬಂದಿದೆ. ಛತ್ರಪತಿ ಶಿವಾಜಿ ಮಹಾರಾಜರ ಕನಸು ಹಿಂದವಿ ಸ್ವರಾಜ್ಯ ನಿರ್ಮಾಣವಾಗುತ್ತಿದೆ ಎಂದರು.
ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಹಲವಾರು ವರ್ಷಗಳಿಂದ ಹಿಂದೂಗಳ ಮೇಲೆ ನಡೆಯುತ್ತಿದ್ದ ಅತ್ಯಾಚಾರ, ದಬ್ಟಾಳಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತಕ್ಕ ಉತ್ತರ ನೀಡುತ್ತಿದ್ದಾರೆ. ಶ್ರೀರಾಮಮಂದಿರ ನಿರ್ಮಾಣ ಕನಸು ನನಸಾಗಿದೆ. ದೇಶದಲ್ಲಿ ಹೇಗೆ ಕಮಲ ಅರಳಿದೆಯೋ ಅದೇ ರೀತಿ ಕರ್ನಾಟಕದಲ್ಲಿ ಮತ್ತೂಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆಬೆಳಗಾವಿ ಗ್ರಾಮೀಣ ಸೇರಿದಂತೆ ಎಲ್ಲ ಕಡೆ ಕಾಂಗ್ರೆಸ್ ಸೋಲಿಸಬೇಕೆಂದು ಹೇಳಿದರು. ಖಾನಾಪುರ ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ಕುಬಲ್ ಮಾತನಾಡಿ , ಆಮಿಷಕ್ಕೊಳಗಾಗಿ ಯಾರೂ ತಮ್ಮ ಮತಗಳನ್ನು ಮಾರಿಕೊಳ್ಳಬಾರದು. ಹಿಂದೂಗಳು ಯಾರ ಬಳಿಯೂ ಕೈಯೊಡ್ಡುವ ಸಂಸ್ಕೃತಿಯವರಲ್ಲ. ಗ್ರಾಮೀಣ ಕ್ಷೇತ್ರದಲ್ಲಿ ಹಿಂದುತ್ವದ ಆಧಾರದ ಮೇಲೆ ಮತ ಚಲಾಯಿಸಿ ಬಿಜೆಪಿ ಗೆಲ್ಲಿಸಬೇಕು ಎಂದರು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ದೀಪಾ ಕುಡಚಿ ಮಾತನಾಡಿ, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಎಲ್ಲರೂ ಕೈಜೋಡಿಸಬೇಕು. ಜತೆಗೆ ಜಿಲ್ಲೆಯಲ್ಲೂ ಕಾಂಗ್ರೆಸ್ ಮುಕ್ತ ಮಾಡಿ ಕಮಲ ಅರಳಿಸಬೇಕು ಎಂದರು.ಹಿಂದೂ ರಾಷ್ಟ್ರ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ ಮಾತನಾಡಿದರು. ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ, ಮಹಾನಗರ ಪಾಲಿಕೆ ಸದಸ್ಯರಾದ ರೇಷ್ಮಾ ಪಾಟೀಲ, ವೀಣಾ ವಿಜಾಪುರೆ, ರಾಜು ಭಾತಖಾಂಡೆ, ಶಂಕರ ಪಾಟೀಲ, ಮುಖಂಡರಾದ ಬಾಬುರಾವ ದೇಸಾಯಿ, ರಮೇಶ ಕುರುಬಗಟ್ಟಿ ಇದ್ದರು.