Advertisement
ಇದು ಎರಡೂ ತಂಡಗಳಿಗೆ ಕೊನೆಯ ಲೀಗ್ ಪಂದ್ಯವಾಗಿದ್ದು ಗೆಲುವು ಅನಿವಾರ್ಯವಾಗಿತ್ತು. ಸೋತ ಆರ್‌ಸಿಬಿ ತಂಡವು ಕೂಟದಿಂದ ಹೊರಬಿದ್ದಿದೆ. ಗೆಲುವು ಸಾಧಿಸಿದ ರಾಜಸ್ಥಾನ್ ತಂಡವು ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶವನ್ನು ಜೀವಂತವಿರಿಸಿಕೊಂಡಿದೆ. ಲೀಗ್‌ನಲ್ಲಿ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿದ್ದು ಈ ಪಂದ್ಯಗಳ ಫಲಿತಾಂಶದ ಬಳಿಕ ಪ್ಲೇ ಆಫ್ಗೆ ತೇರ್ಗಡೆಯಾಗುವ ಎರಡು ತಂಡಗಳು ಯಾವುವು ಎಂಬುದು ನಿರ್ಧಾರವಾಗಲಿದೆ.
ಆರಂಭಿಕ ತ್ರಿಪಾಠಿ ಅವರ ಭರ್ಜರಿ ಆಟದಿಂದಾಗಿ ರಾಜಸ್ಥಾನ್ ಸಾಧಾರಣ ಮೊತ್ತ ಪೇರಿಸುವಂತಾಯಿತು. ಜೋಫ್ರಾ ಆರ್ಚರ್ ಅವರನ್ನು ಬೇಗನೇ ಕಳೆದುಕೊಂಡ ಬಳಿಕ ತ್ರಿಪಾಠಿ ಮತ್ತು ನಾಯಕ ಅಜಿಂಕ್ಯ ರಹಾನೆ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ದ್ವಿತೀಯ ವಿಕೆಟಿಗೆ 99 ರನ್ನುಗಳ ಜತೆ ಯಾಟ ನಡೆಸಿದರು. ಆದರೆ ಇಬ್ಬರೂ ನಿಧಾನವಾಗಿ ಆಡಿದ್ದರಿಂದ ತಂಡ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ.
Related Articles
Advertisement
ಬಿಗು ದಾಳಿ ಸಂಘಟಿಸಿದ ಉಮೇಶ್ ಯಾದವ್ 25 ರನ್ನಿಗೆ 3 ವಿಕೆಟ್ ಕಿತ್ತರು.ಗೆಲ್ಲಲು 165 ರನ್ ತೆಗೆಯುವ ಅವಕಾಶ ಪಡೆದ ಬೆಂಗಳೂರು ತಂಡವು ನಾಯಕ ಕೊಹ್ಲಿ ಅವರನ್ನು ಬೇಗನೇ ಕಳೆದುಕೊಂಡಿತು. ಕೊಹ್ಲಿ 9 ಎಸೆತ ಎದುರಿಸಿ 4 ರನ್ ಹೊಡೆದು ಗೌತಮ್‌ಗೆ ಕ್ಲೀನ್‌ಬೌಲ್ಡ್ ಆದರು. ಆಬಳಿಕ ಪಾರ್ಥಿವ್ ಪಟೇಲ್ ಮತ್ತು ಎಬಿ ಡಿ’ವಿಲಿಯರ್ ದ್ವಿತೀಯ ವಿಕೆಟಿಗೆ 55 ರನ್ ಪೇರಿಸಿದರು. ಆದರೆ ಈ ಜೋಡಿ ಮುರಿದ ಬಳಿಕ ಬೆಂಗಳೂರು ನಾಟಕೀಯ ಕುಸಿತ ಕಂಡಿತು. ಈ ಆಘಾತದಿಂದ ಕೊನೆಯತನಕವೂ ಅದು ಚೇತರಿಸಿಕೊಳ್ಳಲೇ ಇಲ್ಲ.
ಗೋಪಾಲ್ ಮಾರಕ ದಾಳಿರಾಜಸ್ಥಾನ್ ಗೆಲುವಿನಲ್ಲಿ ಶ್ರೇಯಸ್ ಗೋಪಾಲ್ ಪ್ರಮುಖ ಪಾತ್ರ ವಹಿಸಿದರು. ಕರ್ನಾಟಕದ ಗೋಪಾಲ್ ಸ್ಮರಣೀಯ ದಾಳಿ ಸಂಘಟಿಸಿ ಬೆಂಗಳೂರಿಗೆ ಪ್ರಬಲ ಹೊಡೆತ ನೀಡಿದರು. ಪಾರ್ಥಿವ್ ಮತ್ತು ಡಿ’ವಿಲಿಯರ್ ಜೋಡಿಯನ್ನು ಮುರಿದ ಅವರು ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 16 ರನ್ನಿಗೆ 4 ವಿಕೆಟ್ ಕಿತ್ತು ಮಿಂಚಿದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಸಿಕೊಂಡರು. ಕ್ಲಾಸೆನ್ ಮೂರು ಸ್ಟಂಪ್ ಔಟ್ ಮಾಡಿಸಿ ಗೆಲುವಿಗೆ ತನ್ನ ಕೊಡುಗೆ ಸಲ್ಲಿಸಿದರು. ಗೋಪಾಲ್ ಅವರ ಈ ದಾಳಿಯಿಂದಾಗಿ ಬೆಂಗಳೂರು 33 ರನ್ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಒಂದು ಹಂತದಲ್ಲಿ 1 ವಿಕೆಟಿಗೆ 75ರನ್ ಗಳಿಸಿದ್ದ ಬೆಂಗಳೂರು ತಂಡವು 108 ರನ್ ತಲುಪಿದಾಗ 8 ವಿಕೆಟ್ ಕಳೆದುಕೊಂಡಿತ್ತು. ಎಬಿ ಡಿ’ ವಿಲಿಯರ್ ಹೋರಾಟದ 53 ರನ್ ಗಳಿಸಿದರು. ಅವರು 6ನೆಯವರಾಗಿ ಔಟಾಗುತ್ತಲೇ ತಂಡದ ಸೋಲು ಖಚಿತವಾಯಿತು. ಸ್ಕೋರ್‌ಪಟ್ಟಿ
ರಾಜಸ್ಥಾನ್ ರಾಯಲ್ಸ್
ರಾಹುಲ್ ತ್ರಿಪಾಠಿ ಔಟಾಗದೆ 80
ಜೋಫ್ರಾ ಆರ್ಚರ್ ಸಿ ಪಟೇಲ್ ಬಿ ಯಾದವ್ 0
ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಯಾದವ್ 33
ಸಂಜು ಸ್ಯಾಮ್ಸನ್ ಸಿ ಅಲಿ ಬಿ ಯಾದವ್ 0
ಹೆನ್ರಿಕ್ ಕ್ಲಾಸೆನ್ ಸಿ ಅಲಿ ಬಿ ಸಿರಾಜ್ 32
ಕೃಷ್ಣಪ್ಪ ಗೌತಮ್ ರನೌಟ್ 14
ಇತರ: 5
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 164
ವಿಕೆಟ್ ಪತನ: 1-2, 2-101, 3-101, 4-149, 5-164
ಬೌಲಿಂಗ್:
ಯಜುವೇಂದ್ರ ಚಹಲ್ 4-0-26-0
ಉಮೇಶ್ ಯಾದವ್ 4-1-25-3
ಮೊಯಿನ್ ಅಲಿ 2-0-19-0
ಟಿಮ್ ಸೌಥಿ 4-0-37-0
ಮೊಹಮ್ಮದ್ ಸಿರಾಜ್ 4-0-33-1
ಕಾಲಿನ್ 2-0-23-0
ರಾಯಲ್ ಚಾಲೆಂಜರ್ ಬೆಂಗಳೂರು
ವಿರಾಟ್ ಕೊಹ್ಲಿ ಬಿ ಗೌತಮ್ 4
ಪಾರ್ಥಿವ್ ಪಟೇಲ್ ಸ್ಟಂಪ್ಡ್ ಕ್ಲಾಸೆನ್ ಬಿ ಗೋಪಾಲ್ 33
ಎಬಿ ಡಿ’ವಿಲಿಯರ್ ಸ್ಟಂಪ್ಡ್ ಕ್ಲಾಸೆನ್ ಬಿ ಗೋಪಾಲ್ 53
ಮೊಯಿನ್ ಅಲಿ ಸಿ ಮತ್ತು ಬಿ ಗೋಪಾಲ್ 1
ಮನ್‌ದೀಪ್ ಸಿಂಗ್ ಸ್ಟಂಪ್ಡ್ ಕ್ಲಾಸೆನ್ ಬಿ ಗೋಪಾಲ್ 3
ಕಾಲಿನ್ ಸಿ ರಹಾನೆ ಬಿ ಸೋಧಿ 2
ಸಫìರಾಜ್ ಖಾನ್ ಸಿ ಕ್ಲಾಸೆನ್ ಬಿ ಲಾಲಿನ್ 7
ಟಿಮ್ ಸೌಥಿ ಸಿ ಗೌತಮ್ ಬಿ ಉನಾದ್ಕತ್ 14
ಉಮೇಶ್ ಯಾದವ್ ಬಿ ಲಾಲಿನ್ 0
ಮೊಹಮ್ಮದ್ ಸಿರಾಜ್ ಸಿ ಗೌತಮ್ ಬಿ ಉನಾದ್ಕತ್ 14
ಯಜುವೇಂದ್ರ ಚಹಲ್ ಔಟಾಗದೆ 0
ಇತರ: 3
ಒಟ್ಟು (19.2 ಓವರ್‌ಗಳಲ್ಲಿ ಆಲೌಟ್) 134
ವಿಕೆಟ್ ಪತನ: 1-20, 2-75, 3-77, 4-85, 5-96, 6-98, 7-108, 8-108, 9-128
ಬೌಲಿಂಗ್:
ಕೃಷ್ಣಪ್ಪ ಗೌತಮ್ 2-0-6-1
ಜೋಫ್ರಾ ಆರ್ಚರ್ 4-0-37-0
ಬೆನ್ ಲಾಲಿನ್ 2-0-15-0
ಜೈದೇವ್ ಉನಾದ್ಕತ್ 3.2-0-27-2
ಶ್ರೇಯಸ್ ಗೋಪಾಲ್ 4-0-16-4
ಐಶ್ ಸೋಧಿ 4-0-31-1
ಪಂದ್ಯಶ್ರೇಷ್ಠ: ಶ್ರೇಯಸ್ ಗೋಪಾಲ್