ಕ್ಯಾಲಿಕಟ್ : ಕೇರಳದಲ್ಲಿ ಆಡಳಿತಾರೂಢ ಸಿಪಿಐ(ಎಂ) ಮತ್ತು ಆರ್‌ಎಸ್‌ಎಸ್ ಸಂಘರ್ಷ ತಾರಕಕ್ಕೇರಿದ್ದು, ಗುರುವಾರ ರಾತ್ರಿ ಕ್ಯಾಲಿಕಟ್‌ನ ನದಪುರಂ ನಲ್ಲಿರುವ ಆರ್‌ಎಸ್‌ಎಸ್ ಕಚೇರಿಯ ಮೇಲೆ ಬಾಂಬ್ ಎಸೆಯಲಾಗಿದ್ದು , ಕೆಲವೇ ಗಂಟೆಗಳ ಅಂತರದಲ್ಲಿ ಸಮೀಪದ ಸಿಪಿಐ(ಎಂ)ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಘಟನೆಯ ಬಳಿಕ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಅಪರಿಚಿತರು ಕಚ್ಚಾ ಬಾಂಬ್ ಎಸೆದ ಪರಿಣಾಮ ನಾಲ್ವರು ಆರ್‌ಎಸ್‌ಎಸ್ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಧ್ಯಪ್ರದೇಶದ ಆರ್‌ಎಸ್‌ಎಸ್ ನಾಯಕ ಕುಂದನ್ ಚಂದ್ರವತ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆಗೆ 1 ಕೋಟಿ ಇನಾಮು ಘೋಷಿಸಿದ ಕೆಲವೇ ಹೊತ್ತಿನಲ್ಲಿ ಬಾಂಬ್ ಎಸೆಯಲಾಗಿದೆ.
ಸ್ಥಳದಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ.