Advertisement
– ಹೀಗೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ತವರೂರು ಉತ್ತರ ಪ್ರದೇಶದ ಇಟಾವಾದಲ್ಲೇ ಪ್ರಧಾನಿ ಮೋದಿ ಕಾಂಗ್ರೆಸ್ ಮತ್ತು ಎಸ್‌ಪಿ ವಿರುದ್ಧ ಈ ರೀತಿ ವಾಗ್ಧಾಳಿ ನಡೆಸಿದ್ದಾರೆ.
ಎಸ್‌ಪಿ ಮತ್ತು ಕಾಂಗ್ರೆಸ್ ಏನು ಮಾಡಿವೆ ಎಂದು ಮೋದಿ ಪ್ರಶ್ನಿಸಿದರು. ಅವರು ಚುನಾ ವಣೆಗೆ ಸ್ಪರ್ಧಿಸುವುದು ಅವರಿಗಾಗಿ ಮತ್ತು ಅವರ ಮಕ್ಕಳಿಗಾಗಿ ಮಾತ್ರ. ಆದರೆ ನನಗೆ ಯಾರೂ ಇಲ್ಲ, ಸಿಎಂ ಯೋಗಿಗೂ ಇಲ್ಲ. ಆದರೂ ನಾವು ದುಡಿ ಯುತ್ತಿರುವುದು ನಿಮ್ಮ ಮಕ್ಕಳಿಗಾಗಿ. ವಿಕಸಿತ ಭಾರತ ಅನ್ನುವುದು ಕೇವಲ ಪದಗಳಲ್ಲ, ಈ ಪದಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯ, ಸಮೃದ್ಧ ಜೀವನವೂ ಸೇರಿದೆ ಎಂದಿದ್ದಾರೆ.
Related Articles
ಪದ್ಧತಿ ಮುರಿದೆ
ರಾಜನ ಮಗ ರಾಜನೇ ಆಗಬೇಕು ಎಂಬ ಪದ್ಧತಿಯನ್ನೇ ನಾನು ಮುರಿದು ಒಬ್ಬ ಚಾಯ್‌ವಾಲಾ ಮುಖ್ಯಮಂತ್ರಿ ಸಿಎಂ ಆಗಬಹುದು, ಪ್ರಧಾನಿ ಆಗಬಹುದು ಎಂಬುದನ್ನು ನಿರೂಪಿಸಿದ್ದೇನೆ. ವಂಶಾಡಳಿತದಲ್ಲಿ ಕಾರು, ಬಂಗಲೆಗಳು ಅಧಿಕಾರ, ರಾಜಕೀಯ ಪರಂಪರೆಯ ಕುರುಹು ಆಗಿದೆ. ಆದರೆ ಮೋದಿ ಪರಂಪರೆ ಬಡವರಿಗೆ ಪಕ್ಕಾ ಮನೆ, ಅಕ್ಕ-ತಂಗಿಯರಿಗೆ ಶೌಚಾಲಯ, ದಲಿತರು ಮತ್ತು ಹಿಂದುಳಿದವರಿಗೆ ವಿದ್ಯುತ್, ಗ್ಯಾಸ್, ನೀರಿನ ಸೌಲಭ್ಯ, ಉಚಿತ ಪಡಿತರ, ಶಿಕ್ಷಣ ನೀತಿ, ಆರೋಗ್ಯ ಸೌಲಭ್ಯ ರೂಪಿಸಿಕೊಡುವುದಾಗಿದೆ. ಮೋದಿಯ ಪರಂಪರೆ ಎಲ್ಲರಿಗಾಗಿ, ಎಲ್ಲರದ್ದೂ ಆಗಿರುವ ಪರಂಪರೆ ಎಂದಿದ್ದಾರೆ.
Advertisement
ಕಾರ್ಯಕರ್ತರಿಗೆ ಮಣೆ ಹಾಕಿದ್ದೇವೆ: ಮೋದಿ
ಸಮಾಜವಾದಿ ಪಕ್ಷವು ಕುಟುಂಬ ರಾಜ ಕಾರಣಕ್ಕೆ ಮಣೆ ಹಾಕಿದೆ. ಇಡೀ ರಾಜ್ಯದಲ್ಲಿ ಇದು ವರೆಗೆ ತಮ್ಮ ಕುಟುಂಬದ ಹೊರತಾಗಿ ಯಾದವ ಸಮುದಾಯದಿಂದ ಯಾವೊಬ್ಬ ಅಭ್ಯರ್ಥಿಯನ್ನೂ ಪಕ್ಷ ಕಣಕ್ಕಿಳಿಸಿಲ್ಲ. ಆದರೆ ಬಿಜೆಪಿಯಲ್ಲಿ ಕಾರ್ಯ ಕರ್ತನೂ ಕೂಡ ದೊಡ್ಡ ಮಟ್ಟವನ್ನೂ ತಲುಪಬಹು ದಾಗಿದೆ ಎಂದು ಪಿಎಂ ಚಾಟಿ ಬೀಸಿದ್ದಾರೆ. ಎಸ್‌ಪಿಯವರು ನಿಜವಾಗಲೂ ಯದುವಂಶೀಯರೇ?
ಕಳೆದ ಬಾರಿ ಚುನಾವಣೆ ಸಂದರ್ಭ ಕಾಂಗ್ರೆಸ್‌ನ ರಾಜಕುಮಾರ ದೇವಾಲಯ ಸುತ್ತಿ, ಪವಿತ್ರ ದಾರ ಗಳನ್ನು ಕೈಗೆ ಸುತ್ತಿಕೊಂಡಿದ್ದರು. ಆದರೆ ಈ ಬಾರಿ ಆ ಗಿಮಿಕ್ ನಿಂತಿದೆ. ದೇಶದ ಐತಿಹಾಸಿಕ ರಾಮ ಮಂದಿರ ಉದ್ಘಾಟನೆಗೆ ದೇಶವೇ ಸಂತಸ ಪಟ್ಟಿತ್ತು. ಆದರೆ ಅವರು ಆಹ್ವಾನ ನಿರಾಕರಿಸಿದರು. ದ್ವಾರಕೆಯ ಸಮುದ್ರಕ್ಕೆ ತೆರಳಿ ಕೃಷ್ಣನಿಗೆ ನಾನು ನಮಿಸಿದ್ದೂ ರಾಜಕುಮಾರನಿಗೆ ಸಮಸ್ಯೆಯಾಯಿತು. ಅಂಥವ ರೊಂದಿಗೆ ಎಸ್‌ಪಿ ಸ್ನೇಹ ಬೆಳೆಸಿದೆ. ಕೃಷ್ಣನನ್ನು ಪೂಜಿಸಿದ್ದಕ್ಕೂ ಕೊಂಕು ನುಡಿಯುವವರನ್ನು ಸ್ನೇಹಿತರು ಎನ್ನುತ್ತಿರುವ ಎಸ್‌ಪಿಯವರು ನಿಜ ವಾಗಿಯೂ ಯದುವಂಶೀಯರೇ ಎಂದು ನಾನು ಕೇಳಬೇಕಿದೆ ಎಂದು ಮೋದಿ ಆಕ್ಷೇಪಿಸಿದ್ದಾರೆ.