Advertisement
ಗುಳೇದ ಗುಡ್ಡದಲ್ಲಿ ಈಗ ತಿಪ್ಪೆ ಕಾಣುವುದಿಲ್ಲ, ಕಸ ಬಿದ್ದರೆ ಕ್ಷಣಾರ್ಧದಲ್ಲೇ ಮಾಯ. ಏಕೆಂದರೆ, ಇದನ್ನೆಲ್ಲ ಸ್ವಚ್ಛ ಮಾಡುವುದಕ್ಕಾಗಿಯೇ ಕಟಿಬದ್ಧವಾದ ತಂಡ ಇದೆ. ಅದರ ಹೆಸರು ಗುಳೇದಗುಡ್ಡದ ಸಮಾಜ ಸೇವಕರು (GSW)ಅಂತ. ಇವರ ಗುರಿ, ಗುಳೇದ ಗುಡ್ಡವನ್ನು ಸ್ವತ್ಛವಾಗಿಡಬೇಕು ಅನ್ನೋದು. ಪ್ರಧಾನಿ ನರೇಂದ್ರ ಮೋದಿಯವರ ಸ್ವತ್ಛತಾ ಅಭಿಯಾನದ ಕರೆಯಿಂದ ಸ್ಫೂರ್ತಿಗೊಂಡು ಹುಟ್ಟಿದ್ದು ಬಾಗಲಕೋಟೆ ಸಮಾಜ ಸೇವಕರ ತಂಡ. ಇದರ ಸದಸ್ಯರು ಪ್ರತಿ ಶನಿವಾರ, ಭಾನುವಾರಗಳನ್ನು ತಮ್ಮ ಊರನ್ನು ಕ್ಲೀನ್ ಮಾಡಲು ತೆಗೆದಿಟ್ಟಿದ್ದಾರೆ. ಇಡೀ ಊರು ಪರಿಶುದ್ಧವಾಗಿರಬೇಕು ಅನ್ನೋದು ಇವರ ಗುರಿ. ಈ ಗುರಿ ಹುಟ್ಟಿ ಸುಮಾರು ಐದು ವರ್ಷವಾಯಿತು. ಈಗಲೂ ಮುಂದುವರಿದಿದೆ. ಸೇವಕರ ತಂಡದಲ್ಲಿ ಗುಳೇದಗುಡ್ಡದ ಸಾಮಾನ್ಯ ಜನರಿಂದ, ಡಾಕ್ಟರ್, ಎಂಜಿನಿಯರ್‌ಗಳು, ಶಿಕ್ಷಕರು, ಉದ್ಯಮಿ, ವಕೀಲರು, ನೇಕಾರರು, ಫೋಟೋಗ್ರಾಫರ್‌ಗಳು ಯಾವುದೇ ಭೇದಭಾವವಿಲ್ಲದೆ ಕೈ ಜೋಡಿಸಿದ್ದಾರೆ.
Related Articles
(ಜನಜಾಗೃತಿ ಸಭೆ) ನಡೆಸುತ್ತಾರೆ. ಅಲ್ಲಿಗೆ ಪುರಸಭಾ ಅಧಿಕಾರಿಗಳನ್ನು ಸೇರಿಸಿ, ಏನೇನು ಕೆಲಸ, ಸಮಸ್ಯೆ ಏನು ಅಂತೆಲ್ಲ ಸ್ಥಳೀಯರೊಂದಿಗೆ ಚರ್ಚಿಸುತ್ತಾರೆ. ಕಳೆದ ಐದು ವರ್ಷಗಳಿಂದ ಸಮಾಜ ಸೇವೆಯಲ್ಲಿ ನಿರತರಾಗಿರುವ ಗುಳೇದ ಗುಡ್ಡದ ಸೇವಕರು ಆರಂಭದಲ್ಲಿ ಇದ್ದದ್ದು 8-10ಜನ ಮಾತ್ರ ಇದ್ದರು. ಇವತ್ತು ಈ ಸಂಖ್ಯೆ 50ಕ್ಕೂ ಹೆಚ್ಚಾಗಿದೆ.
ಈ ಸಂಘದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿ ಅಂತ ಯಾವ ಹುದ್ದೆಗಳೂ ಇಲ್ಲ. ಹೀಗೆಲ್ಲ ಹುದ್ದೆ ಸೃಷ್ಟಿ ಮಾಡಿದರೆ ರಾಜಕೀಯ ಹರಡಬಹುದು ಎನ್ನುವ ಉದ್ದೇಶದಿಂದಲೇ ಯಾರೂ ಮುಖ್ಯರಲ್ಲ, ಯಾರು ಅಮುಖ್ಯರೂ ಅಲ್ಲಾ ಎಂಬ ಕುವೆಂಪು ಅವರ ಆಶಯದಂತೆ ನಡೆದುಕೊಂಡು ಬರುತ್ತಿದ್ದಾರೆ. ಇರುವ ಸದಸ್ಯರಲ್ಲಿ ವಾರಕ್ಕೆ ಒಬ್ಬರು ನಾಯಕತ್ವ ವಹಿಸಿಕೊಳ್ಳುವುದರಿಂದ ಸಮಸ್ಯೆ ಇಲ್ಲವಂತೆ.
GSW ತಂಡದ ನಿಸ್ವಾರ್ಥ ಕಾರ್ಯದಿಂದ ಗುಳೇಗುಡದಲ್ಲಿ ಬೇತಾಳನಂತೆ ಸತತ 50 ವರ್ಷಗಳಿಂದ ಬೆನ್ನಿಗಂಟಿಕೊಂಡಿದ್ದ 70 ರಿಂದ 80 ತಿಪ್ಪೆಗಳು ಕಣ್ಮರೆಯಾದವು. ಕೇವಲ ಸ್ವತ್ಛ ಮಾಡುವುದೊಂದೇ ತಂಡದ ಗುರಿಯಾಗಿರಲಿಲ್ಲ. ಗುಳೇದಗುಡ್ಡವನ್ನು ಹಸಿರಾಗಿಸುವುದು ತಂಡದ ಗುರಿಯಾಗಿದೆ. ಅದರಂತೆ, ಮಳೆಗಾಲದಲ್ಲಿ ಸಾವಿರ ಸಸಿ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು, 1,500 ಸಸಿಗಳನ್ನು ನೆಟ್ಟಿದ್ದಾರೆ. ಗುಳೇದಗುಡ್ಡ ದಲ್ಲಿರುವ ಎಲ್ಲಾ ಶಾಲಾ-ಕಾಲೇಜುಗಳು, ಸಂಘ ಸಂಸ್ಥೆಗಳು, ಊರಿನ ಗುರು ಹಿರಿಯರು ಈ ವಿನೂತನ ಕಾರ್ಯಕ್ಕೆ ಹೆಗಲು ಕೊಟ್ಟರು. ಸಸಿ ನೆಟ್ಟ ಮೇಲೆ ಅವುಗಳ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ.
Advertisement
ಎಖಗ ಯ ತಂಡದ ವಾರ್ಷಿಕೋತ್ಸವದ ನೆಪದಲ್ಲಿ ಊರಿನ ಪ್ರಮುಖ ರಸ್ತೆಗಳಲ್ಲಿ ಜಾಥಾ(ಜನಜಾಗೃತಿ) ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಅರಿವು ಮೂಡಿಸುವುದರ ಜೊತೆಗೆ, ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ಮತ್ತು ರಕ್ತ ತಪಾಸಣೆ ಕಾರ್ಯಕ್ರಮವನ್ನು ಏರ್ಪಡಿಸುತ್ತಿದೆ.
ವಾರಕ್ಕೆ ಒಬ್ಬರು ಲೀಡರ್ಸಂಘದ ಸದಸ್ಯರನ್ನು ಒಟ್ಟು ಗೂಡಿಸಲು ವಾಟ್ಸಾಪ್ ಗ್ರೂಪ್ ಇದೆ. ಅದರಲ್ಲಿ ಈ ವಾರ ಯಾವ ಪ್ರದೇಶಕ್ಕೆ ಹೋಗಬೇಕು, ಯಾರ ಮನೆಯಲ್ಲಿ ಸಭೆ ನಡೆಸಬೇಕು, ಎಲ್ಲೆಲ್ಲಿ ಸ್ವತ್ಛ ಗೊಳಿಸಬೇಕು ಅನ್ನೋ ವಿಚಾರ ಬಹುಮತದಿಂದ ನಿರ್ಧಾರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ರೀತಿ ಸಭೆ ನಡೆದಾಗ ಇವರು ಮೇಲು, ಅವರು ಕೀಳು ಅನ್ನೋ ಮನೋಭಾವ ಬರಬಾರದು ಎಂಬ ಕಾರಣಕ್ಕೆ ಯಾರೂ ಖುರ್ಚಿಯ ಮೇಲೆ ಕುಳಿತು ಚರ್ಚಿಸುವುದಿಲ್ಲ. ಎಲ್ಲರೂ ನೆಲದ ಮೇಲೆ ಕುಳಿತೇ ವಿಚಾರ ವಿನಿಮಯ ಮಾಡುವುದು ವಿಶೇಷ . ಶಿವಕುಮಾರ ಮೋಹನ ಕರನಂದಿ