ಹೊಳೆನರಸೀಪುರ: ಬಿಜೆಪಿ ಪಕ್ಷದ ಮಂಡಲದ ಅಧ್ಯಕ್ಷರಾಗಿ ಎಚ್.ಜೆ.ನಾಗರಾಜ್ ಶನಿವಾರ ಅಧಿಕಾರ ಸ್ವೀಕರಿಸಿದರು. ಪಟ್ಟಣದ ಮಂಡಲದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬೇರೊಬ್ಬರನ್ನು ಜಿಲ್ಲಾಧ್ಯಕ್ಷ ಯೋಗಾರಮೇಶ್ ನೇಮಕ ಮಾಡಿದ್ದರು. ಆದರೆ ಅಧಿಕಾರ ಸ್ವೀಕರಿಸಿದ ಅಂದಿನ ಅಧ್ಯಕ್ಷರು ಕಾರಣಾಂತರದಿಂದ ಕರ್ತವ್ಯ ನಿರ್ವಹಿಸದೇ ಪಕ್ಷವನ್ನು ಬಲಪಡಿಸುವಲ್ಲಿ ಹಿನ್ನಡೆ ಆಗಿದ್ದರಿಂದ ತಮ್ಮನ್ನು ಇದೀಗ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎಂದರು.
ಪಕ್ಷದ ಅಭ್ಯರ್ಥಿಗೆ ಬೆಂಬಲ: ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಕಣಕ್ಕಿಳಿಸುವ ಅಭ್ಯರ್ಥಿಗೆ ತಾವುಗಳು ಬೆಂಬಲವಾಗಿ ನಿಲ್ಲುವುದಾಗಿ ಘೋಷಿಸಿದ ಅವರು ನಮಗೆ ಪಕ್ಷ ಮುಖ್ಯವೇ ಹೊರತು ವ್ಯಕ್ತಿ ನಿಷ್ಠೆ ಸರಿಯಲ್ಲ ಎಂದು ನಿರ್ಧರಿಸಿದ್ದು ಅದ್ದಕರಿಂದ ಪಕ್ಷ ಯಾರನ್ನೆ ಕಣಕ್ಕೆ ಇಳಿಸಿದರೂ ಸಹ ಅವರ ಪರವಾಗಿ ಕೆಲಸ ಮಾಡಲು ನಮ್ಮ ತಾಲೂಕು ಮಂಡಲಿ ನಿರ್ಧರಿಸಿದರು ಎಂದರು.
ಸೂಕ್ತ ಅಭ್ಯರ್ಥಿ ಕಣಕ್ಕೆ: ಜಿಲ್ಲೆಯಲ್ಲಿ ಪಕ್ಷದಿಂದ ಸೂಕ್ತ ಅಭ್ಯರ್ಥಿಯನ್ನು ಇನ್ನೇರಡು ದಿನಗಳಲ್ಲಿ ಕಣಕ್ಕೆ ಇಳಿಸುವ ಬಗ್ಗೆ ತಮಗೆ ಸಂಪೂರ್ಣ ನಂಬಿಕೆ ಇದೆ. ಆದ್ದರಿಂದ ತಾವು ವ್ಯಕ್ತಿ ನಿಷ್ಠೆಗಿಂತ ಪಕ್ಷ ನಿಷ್ಠೆಯಲ್ಲಿ ಅಪಾರ ನಂಬಿಕೆ ಇರಿಸಿಕೊಂಡಿರುವ ವ್ಯಕ್ತಿ ಜೊತೆಗೆ ತಾವು ಕಳೆದ ಐದು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ನೀಡಲು ಮುಂದಾದೆ.
ಇದನ್ನು ಗಮನಿಸಿದ ಬಿಜೆಪಿ ಪಕ್ಷ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಗರ ಅಧ್ಯಕ್ಷರಾಗಿ ನೇಮಕ ಮಾಡಿದರು. ಅದನ್ನೇ ಮಾನದಂಡವಾಗಿ ಇರಿಸಿಕೊಂಡಿರುವ ಪಕ್ಷದ ಮುಖಂಡರು ತಮ್ಮ ಮಂಡಲದ ಅಧ್ಯಕ್ಷರಾಗಿ ನೇಮಕ ಮಾಡಿದ್ದು ತಾವು ಪಕ್ಷದ ನಿಷ್ಠಾವಂತನಾಗಿ ಕೆಲಸ ಮಾಡುವುದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಪಕ್ಷವನ್ನು ಬಲಪಡಿಸಿ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿ ಎರಡುವರೆ ಲಕ್ಷ ಮತಗಳಿಂದ ಜಯಬೇರಿ ಗಳಿಸಿ ಜಿಲ್ಲೆಯನ್ನು ನರೇಂದ್ರಮೋದಿ ಅವರಿಗೆ ಬಳುವಳಿ ನೀಡಲು ತಾವು ಶ್ರಮಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ತಮ್ಮನ್ನು ಮಂಡಲದ ಅಧ್ಯಕ್ಷರಾಗಿ ಜಿಲ್ಲಾಧ್ಯಕ್ಷ ಯೋಗಾರಮೇಶ್ ಅವರು ನೇಮಕ ಮಾಡಿರುವ ಪತ್ರವನ್ನು ಪ್ರದರ್ಶಿಸಿದರು.
ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎಂ.ಎನ್.ರಾಜು, ತೀರ್ಥೇಶ್, ಪ್ರಸನ್ನ, ಮಾಧ್ಯಮ ವಕ್ತಾರ ವಸಂತಕುಮಾರ್, ರೋಹಿತ್, ಗಿರೀಶ್ ಸೇರಿದಂತೆ ಹಲವು ಮುಖಂಡರು ಇದ್ದರು.