Advertisement

ನಮ್ಮ ತ್ಯಾಗ, ಬಲಿದಾನ ಕಾಣದಾಯಿತೇ?

06:40 AM Jan 05, 2018 | Team Udayavani |

ನವದೆಹಲಿ: ಉಗ್ರ ದಮನದ ವಿಚಾರದಲ್ಲಿ ಪಾಕಿಸ್ತಾನ ನಾಟಕವಾಡುತ್ತಿದೆ ಎಂದು ಆರೋಪಿಸಿ, ಭಯೋತ್ಪಾದನೆ ವಿರುದ್ಧದ ಸಮರಕ್ಕೆ ತಾನು ನೀಡುತ್ತಿದ್ದ ಅನುದಾನ ನಿಲ್ಲಿಸಿರುವ ಅಮೆರಿಕದ ನಿರ್ಧಾರದ ವಿರುದ್ಧ ಪಾಕಿಸ್ತಾನ ಕಿಡಿಕಾರಿದೆ. ಹಳೇ ಸಿನಿಮಾಗಳಲ್ಲಿ ಬರುವ ಪಾತ್ರಗಳು ಒಂದರ ಹಿಂದೊಂದರಂತೆ ಸೆಂಟಿಮೆಂಟ್‌ ಡೈಲಾಗ್‌ ಹೇಳುವಂತೆ, ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸಿಫ್, ಟ್ವಿಟರ್‌ನಲ್ಲಿ ಅಮೆರಿಕವನ್ನು ಭಾವನಾತ್ಮಕವಾಗಿ ಹಣಿಯಲು ಯತ್ನಿಸಿದ್ದಾರೆ.  

Advertisement

ಅಮೆರಿಕದ ಎಚ್ಚರಿಕೆ: ಪಾಕಿಸ್ತಾನದ ಆರೋಪಗಳಿಗೆ ಪ್ರತ್ಯುತ್ತರ ನೀಡಿರುವ ವೈಟ್‌ಹೌಸ್‌, ಮುಂದಿನ ದಿನಗ ಳಲ್ಲಿ ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ದಮನಕ್ಕಾಗಿ ಅಮೆರಿಕ ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದು, ಇನ್ನು 24ರಿಂದ 48 ಗಂಟೆಗಳೊಳಗೆ ಆ ಕ್ರಮಗಳನ್ನು ಪ್ರಕಟಿಸ ಲಾಗುವುದು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪಾಕ್‌ ಸೇನೆ, ಅಮೆರಿಕದ ಕ್ರಮಕ್ಕೆ ನಮ್ಮ ಜನತೆಯ ಹಿತಾಸಕ್ತಿಗೆ ಅನುಗುಣವಾಗಿ ಪ್ರತಿಕ್ರಿಯಿಸುತ್ತೇವೆ ಎಂದಿದೆ.

ಪಾಕ್‌ ಉದುರಿಸಿದ ನುಡಿಮುತ್ತು :
– ಭಯೋತ್ಪಾದನೆ ನಿಗ್ರಹಕ್ಕೆ ನೀವೇನು (ಪಾಕಿಸ್ತಾನ) ಮಾಡಿ ದ್ದೀರಿ ಅಂತ ನಮ್ಮನ್ನು ಕೇಳುತ್ತಿದ್ದೀರಾ? ನಮ್ಮ ಸೇನಾ ನೆಲೆಗಳಿಂದಲೇ ನೀವು ಅಫ್ಘಾನಿಸ್ತಾನದ ಮೇಲೆ 57,800 ಬಾರಿ ದಾಳಿ ನಡೆಸಿದ್ದೀರಿ. ಇದು ನಾವು ನಿಮಗೆ ಕೊಟ್ಟ ಸಹಕಾರವಲ್ಲವೇ? 

– ಉಗ್ರರ ವಿರುದ್ಧ ನೀವು ಶುರು ಮಾಡಿದ ಯುದ್ಧದಿಂದಾಗಿ ನಮ್ಮ ದೇಶದಲ್ಲಿ ಸಾವಿರಾರು ನಾಗರಿಕರು, ಸೈನಿಕರು ಸಾವನ್ನಪ್ಪಿದ್ದಾರೆ. ನಮ್ಮ ಈ ತ್ಯಾಗ ನಿಮಗೆ ಕಾಣದಾಯಿತೇ?

– ಉಗ್ರರ ವಿರುದ್ಧದ ನಮ್ಮ ಹೋರಾಟ ನಿಮಗೆ ಸಂತಸ ತಂದಿಲ್ಲವೆಂಬುದಕ್ಕೆ ನಮ್ಮ ವಿಷಾದವಿದೆ. ಹಾಗೆಂದು, ನಮ್ಮ ರಾಷ್ಟ್ರದ ಸ್ವಾಭಿಮಾನ ಚ್ಯುತಿಯಾಗಲು ನಾವು ಬಿಡುವುದಿಲ್ಲ. 

Advertisement

– ನಿಮ್ಮ ಒಂದು ಫೋನ್‌ ಕರೆಗೆ ಹಿಂದಿನ ನಮ್ಮ ಆಡಳಿತಗಾರ ರೊಬ್ಬರು (ಮುಷರ್ರಫ್) ಮಂಡಿಯೂರಿಸಿದರು. ಪರಿಣಾಮ ನಾವು ಅನುಭವಿಸುತ್ತಿರುವುದು ಬರೀ ರಕ್ತಪಾತ.

Advertisement

Udayavani is now on Telegram. Click here to join our channel and stay updated with the latest news.

Next