Advertisement

ರೂಪತಾರಾದಲ್ಲಿ ನಮ್‌ ಪ್ರಶ್ನೆ ನಿಮ್‌ ಉತ್ತರ

11:24 AM Feb 05, 2018 | |

“ರೂಪಾತಾರಾ’ದಲ್ಲಿ ಕಳೆದ ತಿಂಗಳು ನಮ್‌ ಪ್ರಶ್ನೆ ನಿಮ್‌ ಉತ್ತರ ಎಂಬ ಹೊಸ ಅಂಕಣವನ್ನು ಪರಿಚಯಿಸಲಾಗಿತ್ತು. ಈ ಅಂಕಣಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಓದುಗರ ವಲಯದಿಂದ ಸಿಕ್ಕಿತ್ತು. ಈ ಅಂಕಣದಲ್ಲಿ ಶಾಲಾ-ಕಾಲೇಜುಗಳಲ್ಲಿ ನೀಡುವ ಪ್ರಶ್ನೆಪತ್ರಿಕೆಯ ಮಾದರಿಯಲ್ಲಿ ಓದುಗರಾದ ನಿಮಗೆ ಪ್ರಶ್ನೆಗಳನ್ನು ಕೇಳಲಾಗುವುದು. ಈ ಪ್ರಶ್ನೋತ್ತರ ಅಂಕಣ ನಿಮ್ಮ ಶಾಲಾ ದಿನಗಳನ್ನು ನೆನಪಿಸಬಹುದು.

Advertisement

ಪ್ರಶ್ನೆ ಪತ್ರಿಕೆಯಲ್ಲಿ ಒಂದೇ ಪದದಲ್ಲಿ ಉತ್ತರಿಸಿ, ಬಿಟ್ಟ ಸ್ಥಳವನ್ನು ತುಂಬಿತಿ, ಹೊಂದಿಸಿ ಬರೆಯಿರಿ ಮತ್ತು ಬಹು ಆಯ್ಕೆಯ ಪ್ರಶ್ನೆಗಳು ಎಂಬ ನಾಲ್ಕುಮುಖ್ಯ ವಿಭಾಗಗಳಿವೆ. ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆದು ಕಳುಹಿಸಿದವರ ಪೈಕಿ ಆಯ್ಕೆಯಾದ ಮೂವರಿಗೆ ಲಹರಿ ಆಡಿಯೋ ವತಿಯಿಂದ ವಿಶೇಷ ಬಹುಮಾನ ನೀಡಲಾಗುವುದು.

ವಿ.ಸೂ: “ರೂಪತಾರಾ’ದ ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟವಾಗಿರುವ ಈ ಅಂಕಣದಲ್ಲಿಯೇ, ನೀಡಲಾದ ಜಾಗದಲ್ಲಿ  ನಿಮ್ಮ ಉತ್ತರಗಳನ್ನು ತುಂಬಿ ಕಳುಹಿಸಿ. ಜೆರಾಕ್ಸ್‌ ಪ್ರತಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಮ್ಮ ಉತ್ತರಗಳನ್ನು ಸ್ವೀಕರಿಸಲು ಕಡೇ ದಿನಾಂಕ ಫೆಬ್ರವರಿ 12, 2018.

Advertisement

Udayavani is now on Telegram. Click here to join our channel and stay updated with the latest news.

Next