Advertisement

ನಮ್ಮ ಕಾರ್ಯಕ್ರಮ BJP ನಕಲು ಮಾಡಿದೆ: ಎಚ್‌.ಡಿ. ಕುಮಾರಸ್ವಾಮಿ

11:24 PM May 02, 2023 | Team Udayavani |

ರಾಯಚೂರು: ಜೆಡಿಎಸ್‌ನ ಪಂಚರತ್ನ ಕಾರ್ಯಕ್ರಮಗಳನ್ನೇ ಬಿಜೆಪಿಯವರು ನಕಲು ಮಾಡಿ ಪ್ರಣಾಳಿಕೆ ಸಿದ್ಧಪಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳ ಉತ್ತರ ಭಾರತದ ನಾಯಕರಿಗೆ ಕರ್ನಾಟಕದ ಮೇಲೆ ಪ್ರೀತಿ ಹೆಚ್ಚಾಗಿರುವುದು ಅಭಿನಂದನೀಯ. ಪ್ರಧಾನಿ, ಗೃಹಸಚಿವರು ಕರ್ನಾಟಕದಲ್ಲಿಯೇ ಉಳಿದಿದ್ದಾರೆ. ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಕರ್ನಾಟಕದ 10 ಜಿಲ್ಲೆಯಲ್ಲಿ ಬಡತನವಿದೆ ಎಂದು ಕೇಂದ್ರದ ವರದಿಯಲ್ಲಿದೆ. ಅಪೌಷ್ಟಿಕತೆ ವಿಚಾರದಲ್ಲಿ ಕೇಂದ್ರ-ರಾಜ್ಯ ಸರಕಾರಗಳು ಯಾವ ಪರಿಹಾರ ಕೊಟ್ಟಿವೆ ತಿಳಿಸಲಿ ಎಂದರು.

ಸಾಲಮನ್ನಾ ಮಾಡಿದ್ದೇ ನಾವು
ಕುಮಾರಸ್ವಾಮಿ ಸಾಲಮನ್ನಾ ಮಾಡಿಲ್ಲ ಎಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಸಿಎಂ ಆದಾಗ ಪ್ರತೀ ಅವ ಧಿಯಲ್ಲಿ ಸಾಲಮನ್ನಾ ಮಾಡಿದ್ದೆ. ಕಾಂಗ್ರೆಸ್‌ನವರು ನಿರುದ್ಯೋಗ ಭತ್ಯೆ ಕೊಡುವ ಭರವಸೆ ನೀಡುತ್ತಿದ್ದಾರೆ. ಆದರೆ, ಅವರ ಅಧಿ ಕಾರದಲ್ಲಿ 2.75 ಲಕ್ಷ ಉದ್ಯೋಗ ಭರ್ತಿ ಮಾಡಲೇ ಇಲ್ಲ. ಇದರ ವೈಫಲ್ಯದಿಂದ ಈಗ ಭತ್ಯೆ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಜಿಎಸ್‌ಟಿ ದಾಖಲೆ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಸಂಕಷ್ಟದ ಸನ್ನಿವೇಶದಲ್ಲೂ ಜನ ತೆರಿಗೆ ಕಟ್ಟುತ್ತಿದ್ದಾರೆ. ಈ ಹಣ ಯಾವ ಕಂಪೆನಿಗಳನ್ನು ಉದ್ಧಾರ ಮಾಡಲು ಬಳಸುತ್ತಿದ್ದಾರೆ ಎಂಬುದನ್ನು ತಿಳಿಸಲಿ ಎಂದರು.

ಹಣ ಕೊಟ್ಟು ಸಮೀಕ್ಷೆ
ಚುನಾವಣೆ ಸಮೀಕ್ಷೆಗಳನ್ನು ಹಣ ಕೊಟ್ಟು ಮಾಡಿಸುತ್ತಿದ್ದು, ಜನರ ಭಾವನೆ ಕದಡಲು ಯತ್ನಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿಯೇ ನಾವು 35 ಸ್ಥಾನ ಗೆಲ್ಲಲಿದ್ದೇವೆ ಎಂದರು.

ಬಂಡಿಯಲ್ಲಿ ವಸ್ತು ಮಾರಿದಂತೆ ಮೋದಿ ರೋಡ್‌ ಶೋ: ಇಬ್ರಾಹಿಂ
ರಾಯಚೂರು: ಅಂಗಡಿಯಲ್ಲಿ ಮಾರಾಟವಾಗದ ವಸ್ತುವನ್ನು ಬಂಡಿಯಲ್ಲಿ ಹಾಕಿಕೊಂಡು ಹೋಗುವ ರೀತಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಮಾಡುತ್ತಿದ್ದಾರೆ. ಪ್ರಧಾನಿ ಹುದ್ದೆಗೆ ಗೌರವ ಕೊಡಬೇಕೆಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಂತ್ರ ಸರಕಾರ ಬಂದರೂ ಚಿಂತೆಯಿಲ್ಲ. ಕುತಂತ್ರ ಸರಕಾರ ಬರಬಾರದು. ಹೀಗಾಗಿ ಈ ಬಾರಿ ಜೆಡಿಎಸ್‌ಗೆ ಬಹುಮತ ಸಿಗಲಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಕನಸಿನ ಮಾತಾಗಿದೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆ ಮನೆ ಮಂದಿಗೆ ಜಗಳ ಹಚ್ಚುವ ಸ್ಕೀಮ್‌ ಆಗಿದೆ. ಬಿಜೆಪಿಯವರ ಹೆಲಿಕಾಪ್ಟರ್‌ ಹಾರಿದ ಅನಂತರ ಬೇರೆ ಪಕ್ಷದವರ ಹೆಲಿಕಾಪ್ಟರ್‌ ಹಾರಲು ಅನುಮತಿ ನೀಡುತ್ತಿದ್ದಾರೆ. ಚುನಾವಣೆ ಆಯೋಗ ಈ ಬಗ್ಗೆ ಗಮನ ಹರಿಸಬೇಕಿದೆ. ಕಾಶ್ಮೀರ ರಾಜ್ಯಪಾಲ ಸಕಾ³ಲ್‌ ಮಲಿಕ್‌ ಪುಲ್ವಾಮಾ ಶವ ಪೆಟ್ಟಿಗೆ ಬಗ್ಗೆ ಮಾತನಾಡಿದ್ದಾರೆ. ಇದೊಂದು ಗಂಭೀರ ಆರೋಪ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next