Advertisement

ನಮ್ಮ ಭಾಷಾ ವೈವಿಧ್ಯ

11:47 AM Jul 02, 2018 | |

ನಮ್ಮ ದೇಶದಲ್ಲಿದ್ದಷ್ಟು ಭಾಷೆಗಳು ವಿಶ್ವದ ಇತರ ದೇಶಗಳಲ್ಲಿ ಕಂಡು ಬರುವುದು ಅಸಂಭವ. ಇತ್ತೀಚೆಗೆ ಬಿಡುಗಡೆಯಾದ 2011ರ ಜನಗಣತಿಯ ವಿವರಗಳು ಕುತೂಲಹಕಾರಿ ಮಾಹಿತಿಗಳನ್ನು ನೀಡಿವೆೆ. ಭಾರತದಲ್ಲಿ 19,500ಕ್ಕೂ ಹೆಚ್ಚು ಮಾತೃ ಭಾಷೆಗಳಿರುವುದಾಗಿ ಈ ವರದಿ ಹೇಳಿದೆ. ಈ ಭಾಷಾ ವೈವಿಧ್ಯ ಕುರಿತ ಮಾಹಿತಿ ಇಲ್ಲಿದೆ.

Advertisement

19,500 ಮಾತೃ ಭಾಷೆಯಾಗಿ ಬಳಕೆ ಆಗುತ್ತಿರುವ ಭಾಷೆ, ಉಪ ಭಾಷೆಗಳು
121 10 ಸಾವಿರಕ್ಕಿಂತಲೂ ಅಧಿಕ ಮಂದಿ ಮಾತನಾಡುವ ಭಾಷೆಗಳು
ಎರಡು ಭಾಗಗಳಲ್ಲಿ ಅವುಗಳ ವರ್ಗೀಕರಣ
ಸಂವಿಧಾನದ 8ನೇ ಪರಿಚ್ಛೇದದಲ್ಲಿ  22 ಭಾಷೆಗಳು 
(ಕನ್ನಡವೂ ಸೇರಿದೆ)
ಪರಿಚ್ಛೇದ ಸೇರದ ಭಾಷೆಗಳ ಸಂಖ್ಯೆ 99.

14 8 ನೇ ಪರಿಚ್ಛೇದದಲ್ಲಿ ಮೊದಲು ಸೇರ್ಪಡೆಯಾಗಿದ್ದ ಭಾಷೆಗಳ ಸಂಖ್ಯೆ
1967 ಸಿಂಧಿ ಭಾಷೆ ಸೇರ್ಪಡೆಯಾದ ವರ್ಷ
1992 ಕೊಂಕಣಿ, ಮಣಿಪುರಿ , ನೇಪಾಲಿ ಭಾಷೆ ಸೇರ್ಪಡೆಯಾದ ವರ್ಷ
2004 ಬೋಡೋ, ದೋಗ್ರಿ, ಮೈಥಿಲಿ, ಸನಾತನಿ ಭಾಷೆ ಸೇರ್ಪಡೆಯಾದ ವರ್ಷ
19,569 ಒಟ್ಟು ಭಾಷೆಗಳ ನೋಂದಣಿ. 

96.71% ಒಟ್ಟು ಜನ ಸಂಖ್ಯೆಯ ಇಷ್ಟು ಮಂದಿ ಸಂವಿಧಾನದಕ್ಕೆ ಸೇರ್ಪಡೆಯಾಗಿರುವ 22 ಭಾಷೆಗಳ ಪೈಕಿ ಒಂದನ್ನು ಮಾತನಾಡುತ್ತಾರೆ. 
3.29% ಇತರ ಭಾಷೆಗಳನ್ನು ಮಾತನಾಡುವವರು

ವರದಿಯಲ್ಲೇನಿದೆ?
ರಕ್ತ ಸಂಬಂಧಿಗಳು ಮಾತ್ರವಲ್ಲದೆ, ಇತರರೂ ಕುಟುಂಬ ಸದಸ್ಯರಾಗಿ ಸೇರುತ್ತಿ ರುವ ಕಾರಣ, ಪ್ರತಿಯೊಬ್ಬರಲ್ಲೂ ಮಾತೃಭಾಷೆ ಯಾವುದು ಎಂದು ಕೇಳಬೇಕಾಗುತ್ತದೆ. 2001ರಲ್ಲಿ ಅನುಸೂಚಿತವಲ್ಲದ ಭಾಷೆಗಳ ಸಂಖ್ಯೆ 100 ಆಗಿದ್ದವು. ಅನಂತರ, ಸಿಮ್ಟೆ ಮತ್ತು ಪರ್ಷಿಯನ್‌ ಭಾಷೆಗಳನ್ನು ಹೊರಗಿಟ್ಟ ಹಿನ್ನೆಲೆಯಲ್ಲಿ 2011ರಲ್ಲಿ 99 ಭಾಷೆಗಳೆಂದು ದಾಖಲಾಗಿದೆ.ಮಾವೋ ಭಾಷೆಯನ್ನು  10 ಸಾವಿರಕ್ಕೂ ಹೆಚ್ಚು ಮಂದಿ ಮಾತನಾಡುತ್ತಾರೆ.   
 

Advertisement
Advertisement

Udayavani is now on Telegram. Click here to join our channel and stay updated with the latest news.

Next