Advertisement

ನಮ್ಮ ಜಮೀನು ನಮ್ಮ ಕೆರೆ ಯೋಜನೆ ಜಾರಿ: ಜಯಚಂದ್ರ

01:19 PM Jan 17, 2017 | Team Udayavani |

ಆಳಂದ: ಅಂತರ್ಜಲ ಹೆಚ್ಚಳ ಮಾಡುವ ನಿಟ್ಟಿನಲ್ಲಿ ನಮ್ಮ ಜಮೀನು ನಮ್ಮ ಕೆರೆ ಹೊಸ ಯೋಜನೆ ಜಾರಿಗೆ ತರುವ ಮೂಲಕ ಹರಿಯುವ ನೀರು ನಿಲ್ಲಿಸಿ, ನಿಂತ ನೀರಿಗೆ ಇಂಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಕಾನೂನು ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವ ಟಿ.ಬಿ.ಜಯಚಂದ್ರ ಘೋಷಿಸಿದರು.

Advertisement

ಪಟ್ಟಣದ ಗುರುಭವನದಲ್ಲಿ ಸೋಮವಾರ ಸಣ್ಣ ನೀರಾವರಿ ಇಲಾಖೆಯಿಂದ ಏರ್ಪಡಿಸಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಮಳೆ ಬೆಳೆ ಇಲ್ಲದೆ 160 ತಾಲೂಕಿನಲ್ಲಿ ಬರ ಆವರಿಸಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಬೆಳೆ ಇಲ್ಲವಾಗಿ, ಪರಿಸ್ಥಿತಿ ಗಂಭೀರ ಸ್ವರೂಪ ತಾಳಿದೆ.

ಸಮಸ್ಯೆ ಎದುರಿಸಲು ಪ್ರತಿಯೊಂದು ಕಡೆ ಕೆರೆ, ಚೆಕ್‌ ಡ್ಯಾಂಗಳನ್ನು ನಿರ್ಮಾಣ ಮಾಡುವುದು, ಮಳೆ ನೀರು ನಿಲ್ಲುವಂತೆ ಮಾಡುವುದು ಅವಶ್ಯಕವಾಗಿದೆ ಎಂದರು. ನೀರಿನ ಗಂಭೀರ ಸಮಸ್ಯೆ ನಿವಾರಿಸಲು ಆಳಂದ ಸೇರಿದಂತೆ ಕಲಬುರಗಿ ಜಿಲ್ಲೆಯಲ್ಲಿ ಪ್ರಯೋಗಾತ್ಮಕವಾಗಿ ನಮ್ಮ ಜಮೀನು ನಮ್ಮ ಕೆರೆ ಯೋಜನೆ ಜಾರಿಗೆ ತಂದು ಅನುಷ್ಠಾನಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು. 

ನೀರು ಭೂಮಿಯಿಂದ ಮೇಲೆ ಬರುವುದಿಲ್ಲ. ಮೇಲೆ ಬಿದ್ದ ನೀರೆ ಭೂಮಿಯಲ್ಲಿರುತ್ತದೆ. ಮಳೆ ನೀರು ಇಂಗಿಸಿದರೆ ಬ್ಯಾಂಕ್‌ನಲ್ಲಿ ಹಣವಿಟ್ಟಂತೆ. ಯಾವಾಗ ಬೇಕಾದರೂ ನೀರು ಬಳಸಿಕೊಳ್ಳಬಹುದು ಎಂದು ಸಚಿವರು ಸಲಹೆ ನೀಡಿದರು. ಶಾಸಕ ಬಿ.ಆರ್‌. ಪಾಟೀಲ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾರಾಯಿ ಮಾರಾಟ ನಿಲ್ಲಿಸಬೇಕು.

ಭೀಮನದಿಯಿಂದ ಅಮರ್ಜಾ ಅಣೆಕಟ್ಟೆಗೆ ನೀರು ಭರ್ತಿ ಮಾಡುವ ಯೋಜನೆ ಹಾಗೂ ತಾಲೂಕಿನ ಅಗತ್ಯವಿರುವ ಕೆರೆಗಳ ನಿರ್ಮಾಣಕ್ಕೆ ಒತ್ತಾಯಿಸಲಾಗಿತ್ತು. ಅವರು ಭರವಸೆ ನೀಡಿದ್ದರು. ಆದರೆ ಇದುವರೆಗೂ ಬೇಡಿಕೆ ಈಡೇರಿಸಿಲ್ಲ. ಕೆರೆಗಳ ನಿರ್ಮಾಣಕ್ಕೆ ಸಚಿವರು ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಹಿರಿಯ ಮುಖಂಡ ಶಿವುಪುತ್ರಪ್ಪ ಪಾಟೀಲ ಮುನ್ನೋಳಿ ಸ್ವಾಗತಿಸಿದರು.

Advertisement

ಸತೀಶ ಪನಶೆಟ್ಟಿ ನಿರೂಪಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರು ನಂತರ ಸಚಿವರಿಗೆ ಕೆರೆ, ಚೆಕ್‌ ಡ್ಯಾಂ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿದರು. ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ್‌ ಪಾಟೀಲ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಬಸವರಾಜ ಪಾಟೀಲ ಗೊಳಾ, ತಹಸೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ, ಮುಖಂಡ ಅಬ್ದುಲ್‌ ಸಲಾಂ ಸಗರಿ,

ಬಿ.ಕೆ. ಪಾಟೀಲ ಭೂಸನೂರ, ಭೀಮರಾವ್‌ ಢಗೆ, ನೀರಾವರಿ ಇಲಾಖೆ ಹಿರಿಯ ಇಂಜಿನಿಯರ್‌ ಮಹಾದೇವ ಎಲ್‌. ಶಿಂಧೆ, ನಾರಾಯಣ ಭಗವತಿ, ವಿಯಯಪುರ ಇಂಜಿನಿಯರ್‌ ಎ.ಎನ್‌. ಜಾನೆಲೇಕ್ಟರ್‌, ಎಇಇ ಆನಂದಕುಮಾರ ಹಾಜರಿದ್ದರು. ಇದಕ್ಕೂ ಮುನ್ನ ತಾಲೂಕಿನ ಪಡಸಾವಳಿ, ಚಿಂಚೋಳಿ ಇನ್ನಿತರ ಗ್ರಾಮಗಳಲ್ಲಿನ ಕೆರೆ, ಕಟ್ಟೆ ಕಟ್ಟಲು ಸಚಿವರು ಮತ್ತು ಶಾಸಕರು ವಿವಿಧ ಜಾಗಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next