ಹುಮನಾಬಾದ: ಸ್ವಾತಂತ್ರ್ಯದ 71ನೇ ವರ್ಷಾಚರಣೆ ಮಾಡುತ್ತಿರುವ ಭಾರತ ಇಂದು ಆಧುನಿಕತೆಯಿಂದ ಮುಂದೆ ನಡೆಯುತ್ತಿದೆ. ಎಲ್ಲಾ ಅಭಿವೃದ್ಧಿ ರಾಷ್ಟ್ರಗಳಂತೆ ನಮ್ಮ ಭಾರತ ಕೂಡ ಗುರುತಿಸಿಕೊಳ್ಳುತ್ತಿದೆ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು. ಪಟ್ಟಣದ ಮಿನಿ ವಿಧಾನ ಸೌಧ ಪ್ರಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ 71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ದೇಶ ಪ್ರೇಮ ಮೈಗೂಡಿಸಿಕೊಂಡು ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರರನ್ನು ಸ್ಮರಿಸಬೇಕು ಎಂದರು. ಗ್ರಾಮೀಣಾಭಿವೃದ್ಧಿ ಸಚಿವರ ಭೇಟಿ ಸಂದರ್ಭದಲ್ಲಿ ಶೌಚಾಲಯಗಳ ನಿರ್ಮಾಣದಲ್ಲಿ ಬೀದರ ಜಿಲ್ಲೆ ಹಿಂದುಳಿದಿರುವ ಕುರಿತು ತಿಳಿಸಿದ್ದು, ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ, ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ ಹಾಗೂ ಶಾಸಕರು ಸೇರಿ ಶೌಚಾಲಯ ನಿರ್ಮಾಣಕ್ಕೆ ಜನರಲ್ಲಿ ಜಾಗೃತಿ ಮೂಡಿಸು ಕೆಲಸ ಮಾಡುವಂತೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಶೌಚಾಲಯ ನಿರ್ಮಾಣ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನೂ ಕೂಡ ಹಮ್ಮಿಕೊಳ್ಳಲಾಗುತ್ತಿದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಕುಟುಂಬಗಳ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಸಮುದಾಯದ ಜನರು ಯೋಜನೆಯ ಲಾಭ ಪಡೆಯಬೇಕು ಎಂದು ಹೇಳಿದರು. ಇದೇ ವೇಳೆ ತ್ಮಹತ್ಯೆ ಮಾಡಿಕೊಂಡ ಇಬ್ಬರು ರೈತರ ಕುಟುಂಬಗಳಿ ತಲಾ ಐದು ಲಕ್ಷ ರೂ. ಚೆಕ್, ಹಾವು ಕಚ್ಚಿ ಮೃತಪಟ್ಟ ವ್ಯಕ್ತಿಯ ಕಟುಂಬಕ್ಕೆ ಒಂದು ಲಕ್ಷ, ಮುಜುರಾಯಿ ಇಲಾಖೆ ಸೇರಿದಂತೆ ಇತರೆ ಸರ್ಕಾರಿ ಯೋಜನೆ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಇದಕ್ಕೂ ಮುನ್ನ ತಹಶೀಲ್ದಾರ ದೇವೆಂದ್ರಪ್ಪಾಪಾಣಿ ಧ್ವಜಾರೋಹಣ ನೇರೆವರಿಸಿದರು. ಡಾ| ಜಯಕುಮಾರ ಸಿಂಧೆ ಉಪನ್ಯಾಸ ನೀಡಿದರು. ಪುರಸಭೆ ಅಧ್ಯಕ್ಷೆ ರಾಧಾ ಮಾಳಪ್ಪ, ತಾಪಂ ಅಧ್ಯಕ್ಷ ರಮೇಶ ಡಾಕುಳಗಿ, ಉಪಾಧ್ಯಕ್ಷೆ ಸುಗಂದಾ ಸೀತಾಳಗೇರಾ, ಎಪಿಎಂಸಿ ಅಧ್ಯಕ್ಷ ಡಾ| ಭದ್ರೇಶ ಪಾಟೀಲ, ಜಿಪಂ ಸದಸ್ಯ ಲಕ್ಷ್ಮಣರಾವ್ ಬುಳ್ಳಾ, ಶಂಕರ ರೆಡ್ಡಿ, ಮನೋಜ ಕೌಟೆಕರ್, ಸಿಪಿಐ ಜೆ.ಎಂ. ನ್ಯಾಮೇಗೌಡರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ, ತಾಪಂ ಇಒ ಡಾ|ಗೋವಿಂದ, ಪುರಸಭೆ ಸದಸ್ಯರಾದ ವಿನಾಯಕ ಯಾದವ, ಅಫ್ಸರ್ ಮಿಯ್ಯಾ, ಕೃಷಿ ಅಧಿಕಾರಿ ಡಾ| ಪಿ.ಎಂ. ಮಲ್ಲಿಕಾರ್ಜುನ, ಪಿಎಸ್‌ಐ ಸಂತೋಷ ಎಲ್.ಟಿ. ಹಾಗೂ ವಿವಿಧ ಇಲಾಖೆಗಳ ಅಧಿ ಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು