Advertisement

ನಮ್ಮ ಸರಕಾರ ಯಾರನ್ನೂ ಮುಳುಗಲು ಬಿಡುವುದಿಲ್ಲ: ಸಿ.ಸಿ.ಪಾಟೀಲ

02:17 PM Nov 07, 2019 | Team Udayavani |

ಗದಗ: ರಾಜ್ಯ ಬಿಜೆಪಿ ಸರಕಾರ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತ ಯಾರನ್ನೂ ಮುಳುಗಲು ಬಿಡುವುದಿಲ್ಲ. ಎಲ್ಲರನ್ನೂ ಎತ್ತಿಹಿಡಿಯಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಸ್ಥಳೀಯ ಜನರ ಬೇಡಿಕೆಯಂತೆ ಜಿಲ್ಲೆಯ ಲಕಮಾಪುರ ಹಾಗೂ ವಾಸನ ಗ್ರಾಮಗಳನ್ನು ಸ್ಥಳಾಂತರಿಸಲಾಗುವುದು ಎಂದರು.

ಕಳೆದ ಆಗಸ್ಟ್ ನಿಂದ ಜಿಲ್ಲೆಯಲ್ಲಿ ಮೂರು ಬಾರಿ ಪ್ರವಾಹ ಬಂದಿದ್ದು, ನರಗುಂದ ಮತ್ತು ರೋಣ ತಾಲೂಕಿನ ತಲಾ 16, ಶಿರಹಟ್ಟಿ ತಾಲೂಕಿನ 8 ಗ್ರಾಮಗಳು ಜಲಾವೃತಗೊಂಡಿವೆ. 48476 ಜನ ಸಂತ್ರಸ್ತರನ್ನು ಸ್ಥಳಾಂತರಿಸಲಗಿದೆ. ವಾಸಕ್ಕೆ ಯೋಗ್ಯವಿಲ್ಲದ,  ಶಿಥಿಲಾವಸ್ಥೆಯಲ್ಲಿರುವ ಆಸರೆ ಮನೆಗಳನ್ನು ಪುನರ್ ನಿರ್ಮಿಸಲಿದೆ ಎಂದರು.

ದಶಕದ ಹಿಂದೆ ಉಂಟಾಗಿದ್ದ ಪ್ರವಾಹ ಸಂದರ್ಭದಲ್ಲಿ ಆಸರೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಅವುಗಳು ಬಳಕೆಯಲ್ಲಿ ಇಲ್ಲದೇ ಹಾಳಾಗಿವೆ. ಈ ಬಾರಿ ಮತ್ತೆ ವಿತರಿಸಲಾಗುತ್ತದ. ಆದರೆ, ಹಿಂದಿನ ಪರಿಸ್ಥಿತಿ ಮರುಕಳಿಸಿದರೆ, ಅವರಿಗೆ‌ ಮನೆ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದು, ಮತ್ತೊಬ್ಬರಿಗೆ ಮನೆ ಹಂಚಿಕೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next