ಈಗಿನ ಯುವಜನತೆ ಎಷ್ಟೇ ಬುದ್ಧಿವಂತರಾಗಿದ್ದರು ಅವರ ಕೆಟ್ಟ ಚಟಗಳು ಅವರ ಕನಸುಗಳನ್ನು ಬಲಿಯಾಗಿಸುತ್ತವೆ. ಡ್ರಗ್ಸ್ ಎಂಬ ವಸ್ತು ಯುವಜನತೆಯ ಕನಸುಗಳನ್ನು ತಿನ್ನುತ್ತಿದೆ. ಡ್ರಗ್ಸ್ ಚಟಕ್ಕೆ ಯುವಜನತೆ ಬೀಳಲು ಸಾವಿರ ಕಾರಣಗಳು ಇರುತ್ತವೆೆ. ಆದರೆ ಅದರಿಂದ ಮತ್ತೆ ಹೊರ ಬರಲು ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ಹೆಚ್ಚಾಗಿ ಯುವಜನತೆಯ ಒಟ್ಟಿಗೆ ಶಾಲಾ ಮಕ್ಕಳು ಈ ಡ್ರಗ್ಸ್ ಅನ್ನು ಬಳಸುತ್ತಾರೆ. ಇದನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಉಪಯೋಗಿಸುತ್ತಿರುವವರು ಒಂದು ದಿನ ಬಳಸದೆ ಇದ್ದರೆ ಮಾನಸಿಕವಾಗಿ ಪರಿಣಾಮ ಬೀರುತ್ತದೆ ಮತ್ತು ಡಿಪ್ರಶನ್‌ಗೆ ಒಳಗಾಗುವ ಸಾಧ್ಯತೆ ಇದೆ.
ಮಕ್ಕಳು ಡ್ರಗ್ಸ್ ಖರೀದಿಸಲು ಹಣ ಬೇಕಾದರೆ ಸುಲಿಗೆ, ದರೋಡೆ, ಮಾಡಲು ಮುಂದಾಗುತ್ತಾರೆ. ತಂದೆ -ತಾಯಿ ಹಣ ಕೊಡಲು ನಿರಾಕರಿಸಿದರೆ ಅವರನ್ನು ಕೊಲ್ಲುವವರೂ ಇದ್ದಾರೆ. ಡ್ರಗ್ಸ್ ಸೇವಿಸುವುದನ್ನು ನಿಲ್ಲಿಸಬೇಕೆಂದು ಕೊಂಡರೂ ಅದು ಅವರಿಂದ ಸಾಧ್ಯವಾಗುವುದಿಲ್ಲ. ಕೆಲವು ನಿಷೇಧಿತ ಡ್ರಗ್ಸ್ ಉಪಯೋಗಿಸುವುದ ರಿಂದ ಅವರ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ .ಡ್ರಗ್ಸ್ ರಕ್ತದ ಜತೆ ಸೇರಿ ಹಲವಾರು ಕಾಯಿಲೆಗಳಿಗೂ ಕಾರಣವಾಗುತ್ತದೆ. 2 ಬಿಲಿಯನ್ ಗಿಂತಲೂ ಹೆಚ್ಚು ಜನ ನಿಷೇಧಿತ ಡ್ರಗ್ಸ್‌ನ ದಾಸರಾಗಿದ್ದಾರೆ.
ಇದನ್ನೂ ಓದಿ: ಜೀವನ ಒಂದು ಪಯಣ
ಯುವಜನರೇ ಶಕ್ತಿಯಾಗಿರುವ ಭಾರತದ ನಾಳಿನ ಭವಿಷ್ಯವನ್ನು ರೂಪಿಸಬೇಕಾದವರೂ ಈ ಡ್ರಗ್ಸ್ ಜಾಲಕ್ಕೆ ಬೀಳುವುದರಿಂದ ಅವರ ಭವಿಷ್ಯ ಹಾಳಾಗಲು ಕಾರಣವಾಗುತ್ತದೆ. ಈ ಜಾಲಕ್ಕೆ ಬೀಳಲು ಹಲವು ಕಾರಣಗಳಿವೆ. ಸ್ನೇಹಿತರ ಸಹವಾಸ, ತಂದೆ-ತಾಯಿಯ ಬೇಜವಾಬ್ದಾರಿತನ ಇವೆಲ್ಲ ಕಾರಣವಾಗುತ್ತವೆ. ನಾಳಿನ ಭವಿಷ್ಯ ರೂಪಿಸಬೇಕಾದವರು ತಮ್ಮ ಜೀವನವನ್ನು, ಕನಸನ್ನು ಚಿವುಟಿ ಹಾಕುವುದು ಸರಿಯಲ್ಲ. ಸರಕಾರ ಮತ್ತು ಪೊಲೀಸ್ ಎಷ್ಟೆಲ್ಲ ಎಚ್ಚರ ವಹಿಸಿದರೂ ಈ ಡ್ರಗ್ ಜಾಲಕ್ಕೆ ಬೀಳುವವರ ಸಂಖ್ಯೆ ಹೆಚ್ಚಾಗುತ್ತಿದೆ . ಡ್ರಗ್ ಎನ್ನುವುದು ಚಕ್ರವ್ಯೂಹ ಇದ್ದ ಹಾಗೆ. ಅದರಿಂದ ದೂರ ಬರಲು ಅಷ್ಟೇ ಕಷ್ಟ. ಈ ಜಾಲಕ್ಕೆ ಬೀಳದಂತೆ ಯುವಜನತೆ ಶ್ರಮಿಸಬೇಕು. ಈ ಬಗ್ಗೆ ಮಕ್ಕಳಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಹಾಗೆ ನಿಮ್ಮ ಸುತ್ತ ಮುತ್ತ ಈ ಮಾದಕ ವಸ್ತುವನ್ನು ಉಪಯೋಗಿಸುವವರಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ಯುವಜನತೆ ಮತ್ತು ಮಕ್ಕಳು ದಾರಿ ತಪ್ಪದ ಹಾಗೇ ನೋಡಿಕೊಳ್ಳ ಬೇಕಾಗಿರುವುದು ಸರಕಾರದ ಮಾತ್ರ ಹೂಣೆಯಲ್ಲ ನಾಗರಿಕರ ಹೊಣೆಯೂ ಆಗಿದೆ.
ಜಾಸ್ಮಿನ್ ಥೋಮಸ್
ಎಂಪಿಎಂ ಕಾಲೇಜು ಕಾರ್ಕಳ