Advertisement

ನಮ್ಮ ಬಾವುಟ

06:30 AM Feb 22, 2018 | |

ನೀಲಿ ಬಾನಿನಲಿ 
ಹಾರುತಿರಲಿ ನಮ್ಮ 
ಮೂರು ಬಣ್ಣಗಳ ಬಾವುಟ |
ತೇಲಿ ತೇಲಿ 
ಮುಗಿಲಲ್ಲಿ ಏರಿ 
ಹಾರಾಡುತಿರಲಿ ಅದು ಪಟ ಪಟ |
ದೇಶಭಕ್ತಿಯದು 
ತ್ಯಾಗಶಕ್ತಿಯದು 
ನಮ್ಮ ದೇಶದಾ ಬಾವುಟ |
ಪ್ರತಿಯೊಬ್ಬನೆದೆಯು 
ಸೆಟೆದೇಳ್ಳೋ ಹೆಮ್ಮೆ 
ಇದು ನಮ್ಮ ಹೆಮ್ಮೆಯ ಬಾವುಟ |
ಪ್ರಗತಿ ಪಥದಲಿ 
ಸಾಗೋ ಗುರುತದು 
ನೀಲಿ ಚಕ್ರದಾ ಬಾವುಟ |
ಶಾಂತಿ ತ್ಯಾಗ 
ಸಹಬಾಳ್ವೆ ತಿಳಿಸೋ
ಬಲುಚೆನ್ನ ನಮ್ಮಯ ಬಾವುಟ |
ಭಾರತೀಯರಾ 
ಆತ್ಮ ಗೌರವ 
ಪೂಜ್ಯನೀಯ ನಮ್ಮ ಬಾವುಟ |

Advertisement

* ಮಹಾಂತೇಶ ಎಸ್‌. ಪಾಟೀಲ, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next