Advertisement
ಕೆರೆ ಹೆಬ್ಬಾರ್ ಎಂದೇ ಹೆಸರಾದ ಶ್ರೀನಿವಾಸ ಹೆಬ್ಬಾರ್ ಅವರ ನೇತೃತ್ವದಲ್ಲಿ ಜೀವ ಜಲ ಕಾರ್ಯಪಡೆ ಕಟ್ಟಿಕೊಂಡು ನಗರದಲ್ಲಿ ಆರಕ್ಕೂ ಅಧಿಕ ಕೆರೆಗಳಿಗೆ ಪುನರುಜ್ಜೀವನ ಮಾಡುವ ಮೂಲಕ ಮನೆ ಮಾತಾಗಿದ್ದರು. ಆ ತಂಡ ಈಗ ಈ ನಿರಂತರ ಅಭಿಯಾನ ಶುರುವಾಗಲಿದೆ.
Related Articles
Advertisement
ಇಡೀ ನಗರದ ಹಾಗೂ ನಗರ ಜೋಡಿಸುವ ಪ್ರಮುಖ ರಸ್ತೆಗಳ ಮಾರ್ಗದಲ್ಲಿ ಸ್ವಚ್ಛತೆ ಮಾಡುವ ಹಾಗೂ ಶಿರಸಿ ಸುಂದರ ನಗರವಾಗಿಸುವ ಕನಸಿನಲ್ಲಿ ಈ ಕಾರ್ಯ ಆರಂಭವಾಗಿದೆ.
ಕುಮಟಾ, ಬನವಾಸಿ, ಯಲ್ಲಾಪುರ, ಕುಳವೆ, ಕರಿಗುಂಡಿ, ಸಿದ್ದಾಪುರ ಸೇರಿದಂತೆ ಎಲ್ಲ ಮಾರ್ಗಗಳ ಸುಮಾರು ೫ ಕಿಮಿ ವ್ಯಾಪ್ತಿಯಲ್ಲಿ ಸ್ವಚ್ಛತೆ ನಡೆಸಲಿದ್ದಾರೆ.
ಈ ನೂತನ ಅಭಿಯಾನಕ್ಕೆ ಈಗಾಗಲೇ ಒಂದು ಹೊಸ ಟ್ರಾಕ್ಟರ್ ಖರೀದಿಸಿದ್ದಾರೆ. ಟಿಪ್ಪರ್ ಹಾಗೂ ಜೆಸಿಬಿ ಬಳಸಿ ಹತ್ತು ಜನರ ತಂಡ ಕಸ ಎತ್ತಲಿದೆ. ನಗರಸಭೆ ಈಗಾಗಲೇ ನಡೆಸುತ್ತಿರುವ ತ್ಯಾಜ್ಯ ಸಂಗ್ರಹ ನಡೆಸುತ್ತಿದ್ದು, ಅದಕ್ಕೆ ಪೂರಕವಾಗಿ ಇದು ಜೊತೆಯಾಗಲಿದೆ. ನಗರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಇದನ್ನು ಹಾಕಲು ಮಾತುಕತೆ ನಡೆಸಲಾಗಿದೆ.
ಈ ಸ್ವಚ್ಛತಾ ಅಭಿಯಾನ ಶುಕ್ರವಾರ ಬೆಳಿಗ್ಗೆ11 ಗಂಟೆಗೆ ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್, ವಿಜಯ ಕರ್ನಾಟಕದ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಪೌರಾಯುಕ್ತ ಕೇಶವ ಛೌಗಲೆ ಇತರರು ಪಾಲ್ಗೊಳ್ಳಲಿದ್ದಾರೆ.
ಸ್ವಚ್ಛತೆಗೆ ಎಲ್ಲರೂ ಜೊತೆಯಾಗಬೇಕು. ಒಟ್ಟಾರೆ ಶಿರಸಿ ಸುಂದರವಾಗಿರಬೇಕು ಎಂಬುದು ನಮ್ಮ ಆಶಯ. ಒಂದು ತಿಂಗಳು ಸಮಾರೋಪಾದಿ ಕೆಲಸ ಮಾಡಿದರೆ ಒಂದು ಹಂತದ ಸ್ವಚ್ಛತೆ ಆಗಬಹುದು ಎಂದು ಶ್ರೀನಿವಾಸ ಹೆಬ್ಬಾರ್ ಹೇಳಿದರು.