Advertisement

ದೇಶವೆಂಬ ವೃಕ್ಷಕ್ಕೆ ಮತಾಂತರ ಗೆದ್ದಲಿನ ರೀತಿ: ಗೃಹ ಸಚಿವ ಆರಗ ಜ್ಞಾನೇಂದ್ರ 

11:28 AM Dec 25, 2021 | Team Udayavani |

ಮಂಗಳೂರು : ”ನಮ್ಮ ದೇಶದ ಧಾರ್ಮಿಕ ಚೌಕಟ್ಟು, ಸಾಂಸ್ಕೃತಿಕ ಚೌಕಟ್ಟು ಎಲ್ಲಾ ಧರ್ಮಗಳನ್ನು ಪ್ರೀತಿಸುತ್ತದೆ, ಇಂಥಾ ಧಾರ್ಮಿಕ ಚೌಕಟ್ಟು ಜಗತ್ತಿನಲ್ಲೇ ಇಲ್ಲಾ, ಆದರೆ ಇಂಥಾ ಒಳ್ಳೆಯ ವೃಕ್ಷಕ್ಕೆ ಗದ್ದಲು ರೀತಿಯಲ್ಲಿ ಮತಾಂತರ ಹಿಡಿದು ಅದನ್ನು ಸಾಯಿಸುತ್ತಿದೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ ಅವರು ಶನಿವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮತಾಂತರ ಕಾಯ್ದೆ ವಿಧಾನ ಸಭೆಯಲ್ಲಿ ಪಾಸ್ ಆಗಿದೆ. ನಾವೆಲ್ಲರೂ ಪಕ್ಷ ಮೀರಿ ಈ ಬಗ್ಗೆ ಯೋಚನೆ ಮಾಡಬೇಕು. ನಾವು ಮತಾಂತರ ಕಾಯ್ದೆ ಏಕೆ ತಂದೆವು ಎಂದು ಯೋಚಿಸಬೇಕು.ಇದನ್ನು ನಿವಾರಿಸಲು ನಾವು ಈ ಕಾಯ್ದೆ ತಂದಿದ್ದೇವೆ. ಇದಕ್ಕೆ ವಿರೋಧ ಅನಗತ್ಯ ಎಂದರು.

ಧರ್ಮದ ಆಧಾರದಲ್ಲಿ ಇಂದು ಸಮಾಜ ಒಡೆದು ಹೋಗುತ್ತಿದೆ. ಈ ಬಗ್ಗೆ ರಾಜಕಾರಣ ಯೋಚನೆ ಮಾಡಬೇಕಾಗಿದೆ. ಆದರೆ ಇದಕ್ಕೆ ಆಕ್ಷೇಪ ಬರುವುದು ಸಹಜವಾಗಿದೆ. ವಿರೋಧ ಇದೆ ಎಂದು ಅದನ್ನು ನಿಲ್ಲಿಸಲು ಆಗುವುದಿಲ್ಲ ಎಂದರು.

ಕಾಶ್ಮೀರದಲ್ಲಿ 370 ಕಾಯ್ದೆ ನಾವು ಮಾತ್ರ ತರೋದಕ್ಕೆ ಸಾಧ್ಯ. ಓಟಿಗೋಸ್ಕರ ಇರುವರು ಅದನ್ನು ತರುವುದಕ್ಕೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ಉಪ್ಪಿನಂಗಡಿ ಗಲಭೆಯನ್ನು ಪೊಲೀಸರು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಪೊಲೀಸರನ್ನು ಸಮರ್ಥಿಸಿಕೊಂಡರು.

Advertisement

ಸಮುದಾಯದ ನಡುವಿನ ಘರ್ಷಣೆಗಳನ್ನು ಕೂಡಾ ಪೊಲೀಸರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದರು. ನಕ್ಸಲರ ಶರಣಾಗತಿ ಬಗ್ಗೆ ಮಾತನಾಡಿದ ಅವರು, ಕೆಲವರು ಇದೀಗ ಶರಣಾಗುತ್ತಿದ್ದಾರೆ. ಈ ಭಾಗದ ನಕ್ಸಲರು ಸಮಾಜಮುಖಿಯಾಗಿ ಬರುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next