ದೇವರಹಿಪ್ಪರಗಿ: ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನ ನಮ್ಮದಾಗಿದೆ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಹಮ್ಮಿಕೊಮಡಿದ್ದ ಸಂವಿಧಾನ ಗೌರವ ಅಭಿಯಾನದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿದ ಅವರು, ಸಂವಿಧಾನದ ಪ್ರತಿಯೊಂದು ಅಂಶಗಳು ನಮಗೆ ಮಾದರಿಯಾಗಿವೆ ಎಂದರು.
ಪ್ರತಿಯೊಬ್ಬ ನಾಗರಿಕನಿಗೂ ಅನ್ವಯವಾಗುವ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸಂವಿಧಾನ ಮಾಹಿತಿ ನೀಡುತ್ತದೆ. ಇಂತಹ ಸಂವಿಧಾನ ರಚನೆ ಮಾಡಿದ ಮಹನೀಯರೆಲ್ಲರಿಗೂ ನಾವು ಕೃತಜ್ಞರಾಗಿರಬೇಕು. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಸೇವೆ ಶ್ಲಾಘನೀಯವಾಗಿದೆ. ಇಂತಹ ಸಂವಿಧಾನಕ್ಕೆ ಗೌರವ ಸಲ್ಲಿಸುವ ಹಾಗೂ ಸಂರಕ್ಷಣೆ ಮಾಡುವ ಕಾರ್ಯ ನಮ್ಮ ಮೇಲಿದೆ ಎಂದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಮೇಶ ಮಸಬಿನಾಳ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಘಟಕಾಂಬಳೆ, ಎಸ್‌ಸಿ ಮೋರ್ಚಾ ಕಾರ್ಯದರ್ಶಿ ಶಿವು ನಾಟೀಕಾರ, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕಾಶೀನಾಥ ತಳಕೇರಿ ಮಾತನಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಎಸ್‌ಸಿ ಮೋರ್ಚಾ ತಾಲೂಕಾಧ್ಯಕ್ಷ ಸುಭಾಷ್ ನಡುವಿನಮನಿ, ಸಿಂದಗಿ ತಾಲೂಕು ಎಸ್‌ಸಿ ಮೋರ್ಚಾ ಅಧ್ಯಕ್ಷ ಸಿದ್ದು ಪೂಜಾರಿ, ಅಶೋಕ ರತ್ನಾಕರ, ಸುಭಾಷ್‌ಚಂದ್ರ ಹೊನ್ನಕಂಠಿ, ಮಲಕು ಬಾಗೇವಾಡಿ, ಹುಸೇನ್ ಗೌಂಡಿ, ಮಹಾಂತೇಶ ನಾಗರಬೆಟ್ಟ, ಮಹಾಂತೇಶ ವಂದಾಲ, ಭೀಮನಗೌಡ ಲಚ್ಯಾಣ, ರವಿ ಸಾತಿಹಾಳ, ಶಿವಾನಂದ ರೂಗಿ, ಮಹಾಂತೇಶ ಗುಡಿಮನಿ, ಕಾಶೀನಾಥ ಚವ್ಹಾಣ, ಸುನೀಲ ಕಲಕೇರಿ, ರಾಜು ಮಾದರ, ಭೀಮಸಿಂಗ್ ಪವಾರ, ಕುಮಾರ ರಾಠೊಡ ಇದ್ದರು.