Advertisement

ಅನ್ಯಧರ್ಮೀಯರ ವ್ಯಾಪಾರ ನಿಷೇಧ ಬ್ಯಾನರ್ ತಾಲೂಕು ಆಡಳಿತ ಹಾಕಿಲ್ಲ: ತಹಶೀಲ್ದಾರ್ ಸ್ಪಷ್ಟನೆ

01:05 PM Apr 01, 2022 | Team Udayavani |

ಸಾಗರ: ಇಲ್ಲಿಯ ಮಹಾಗಣಪತಿ ದೇವರ ಜಾತ್ರೆಯು ಏಪ್ರಿಲ್ 2ರಿಂದ 8ರವರೆಗೆ ನಡೆಯಲಿದ್ದು, ಕೆಲವೆಡೆ ಅಳವಡಿಸಲಾಗಿದ್ದ ‘ಹಿಂದೂಯೇತರ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ’ಎಂಬ ಬ್ಯಾನರ್‌ಗಳನ್ನು ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ತೆರವುಗೊಳಿಸಿಲಾಗಿದೆ.

Advertisement

ಬ್ಯಾನರ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಗಣಪತಿ ಜಾತ್ರೆಯಲ್ಲಿ ಹಿಂದೂಯೇತರ ಧರ್ಮಿಯರು ವ್ಯಾಪಾರ ನಡೆಸುವಂತಿಲ್ಲ ಎಂದು ತಾಲೂಕು ಆಡಳಿತ ಯಾವುದೇ ಬ್ಯಾನರ್ ಹಾಕಿಲ್ಲ. ಬೇರೆಯವರು ಅಳವಡಿಸಿದ್ದು, ಈ ರೀತಿ ಸಂದೇಶವಿರುವ ಬ್ಯಾನರನ್ನು ತಾಲೂಕು ಆಡಳಿತದ ವತಿಯಿಂದ ತೆರವುಗೊಳಿಸಲಾಗಿದೆ. ತಾಲೂಕು ಆಡಳಿತ ಅಂತಹ ಯಾವುದೇ ನಿರ್ಬಂಧ ಹೇರಿಲ್ಲ ಎಂದು ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಕೌಟುಂಬಿಕ ಕಲಹ: ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

ಈ ನಡುವೆ ಹಿಂದೂಯೇತರ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಅಧಿಕೃತವಾಗಿ ತಾಲೂಕು ಆಡಳಿತ ಹೇಳದೇ ಇದ್ದರೂ ಸ್ಥಳೀಯ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಮುದಾಯದವರು ಈ ಬಾರಿ ಜಾತ್ರೆಯ ಮಳಿಗೆ ಹರಾಜಿನಲ್ಲಿ ಪಾಲ್ಗೊಂಡಿಲ್ಲ ಎಂದು ಮುಸ್ಲಿಂ ಸಮುದಾಯದ ವ್ಯಾಪಾರಸ್ಥರೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next