Advertisement
ಹೀಗಿದ್ದರೂ ಚೀನ ಕೋವಿಡ್-19 ಬಗ್ಗೆ ಮೌನ ತಳ್ಳಿದ್ದು, ಬಹುತೇಕ ಎಲ್ಲ ದೇಶಗಳನ್ನೂ ಕೆರಳಿಸಿದೆ. ಈ ಮಧ್ಯೆ ಬ್ರಿಟನ್ ವಿಶ್ವದಾದ್ಯಂತ ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಾರಣೀಕರ್ತನಾದ ಚೀನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ವ್ಯವಹಾರ ಹಿಂದಿನಂತೆ ಮುಂದಿರದು ಎಂದು ಸ್ಪಷ್ಟವಾಗಿ ಹೇಳಿದೆ.
ಈ ಬಿಕ್ಕಟ್ಟನ್ನು ಆಳವಾಗಿ ಪರಿಶೀಲಿಸಬೇಕು. ಜತೆಗೆ ಚೀನದ ನಗರವಾದ ವುಹಾನ್‌ನಲ್ಲಿ ಕೋವಿಡ್-19 ಹೇಗೆ ಪ್ರಾರಂಭವಾಯಿತು ಎಂಬುದನ್ನು ಕಂಡುಹಿಡಿಯುವುದು ಅವಶ್ಯಕ. ಈ ರೋಗದ ಆರಂಭ ಹಂತದಲ್ಲೇ ಚೀನ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿರುವ ಬ್ರಿಟನ್. ಅವೆಲ್ಲವೂ ಇಡೀ ಜಗತ್ತಿಗೆ ಗೊತ್ತಾಗಬೇಕಿದೆ ಎಂದು ಆಗ್ರಹಿಸಿದೆ. ಕೋವಿಡ್-19 ಬಗ್ಗೆ ಕೆಲವು “ಕಠಿನ ಪ್ರಶ್ನೆಗಳಿಗೆ’ ಚೀನ ಉತ್ತರಿಸಬೇಕಿದ್ದು, ವೈರಸ್ ಹೇಗೆ ಪ್ರಾರಂಭವಾಯಿತು ಎಂಬುದನ್ನು ಹಂತ-ಹಂತವಾಗಿ ವಿವರಿಸಲೇಬೇಕು ಎಂದು ಒತ್ತಾಯಿಸಿದೆ. ವ್ಯಾಪಾರ ಸಂಬಂಧ ಇಲ್ಲ
ಸಾಂಕ್ರಾಮಿಕ ರೋಗದ ಮೂಲವನ್ನು ಒಳಗೊಂಡಂತೆ ಅದರ ಎಲ್ಲಾ ಅಂಶಗಳನ್ನು ಬಹಿರಂಗ ಪಡಿಸದಿದ್ದರೆ ನಾವೂ ವಾಣಿಜ್ಯ ಸಂಬಂಧ ಮುಂದುವರಿಸುವ ಕುರಿತು ಯೋಚಿಸಬೇಕಾದೀತು ಎಂದು ಎಚ್ಚರಿಸಿರುವ ಬ್ರಿಟನ್. ಇದನ್ನು ವಿಜ್ಞಾನದ ಆಧಾರದ ಮೇಲೆ “ಸಮತೋಲಿತ ರೀತಿಯಲ್ಲಿ” ಪರಿಶೀಲಿಸಬೇಕು. ಚೀನ ಈ ವಿಚಾರದಲ್ಲಿ ನಿಷ್ಠೆಯಿಂದ ನಡೆದುಕೊಳ್ಳಬೇಕು ಎಂದು ತಾಕೀತು ಮಾಡಿದೆ. ಜತೆಗೆ ಮುಂಬರುವ ದಿನಗಳಲ್ಲಿ ಚೀನಕ್ಕೆ ಎಲ್ಲ ರಾಷ್ಟ್ರಗಳು ಪಾಠ ಕಲಿಸಲಿದ್ದು, ನಮ್ಮ ವ್ಯವಹಾರ ಸಂಬಂಧಗಳು ಹಿಂದಿನಂತೆಯೇ ಮುಂದುವರೆಯುವುದಿಲ್ಲ ಎಂದು ಬೆದರಿಕೆ ಹಾಕಿದೆ.