Advertisement

ವಿವಾದಾತ್ಮಕ “ತಾಂಡವ್‌’, “ಮಿರ್ಜಾಪುರ್‌-2′ ವೆಬ್‌ಸರಣಿಗಳ ಪ್ರಸಾರಕ್ಕೆ ಕೊಕ್‌

08:04 PM Mar 09, 2021 | Team Udayavani |

ನವದೆಹಲಿ: ಕೇಂದ್ರ ಸರ್ಕಾರ ಓವರ್‌-ದ-ಟಾಪ್‌ (ಒಟಿಟಿ) ಸೇವೆಗಳ ಮೇಲೆ ಇತ್ತೀಚೆಗೆ ನಿಬಂಧನೆಗಳನ್ನು ಹೇರಿದ ಹಿನ್ನೆಲೆಯಲ್ಲಿ ಜನಪ್ರಿಯ ಮಿರ್ಜಾಪುರ್‌ 2 ಹಾಗೂ ತಾಂಡವ್‌ ಮುಂತಾದ ವೆಬ್‌ ಸರಣಿಗಳ ಪ್ರಸಾರವನ್ನು ನಿಲ್ಲಿಸಲಾಗಿದೆ.

Advertisement

ಇತ್ತೀಚೆಗೆ, ತಾಂಡವ್‌ ವೆಬ್‌ಸರಣಿಯು ವಿವಾದಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ತಾಂಡವ್‌ ನಿರ್ಮಾಪಕರನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಒಟಿಟಿಗಳ ನಿಯಂತ್ರಣಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.

ಫ್ಯಾಮಿಲಿ ಮ್ಯಾನ್‌ ರದ್ದಾಗಿಲ್ಲ:
ಗೂಢಚಾರಿಯ ಜೀವನದ ಕಥಾವಸ್ತುವನ್ನೊಳಗೊಂಡ “ದ ಫ್ಯಾಮಿಲ್‌ ಮ್ಯಾನ್‌-2′ ವೆಬ್‌ ಸರಣಿ ರದ್ದಾಗಿಲ್ಲ ಎಂದು ಆ ಸರಣಿಯ ಪ್ರಧಾನ ಪಾತ್ರಧಾರಿ ಮನೋಜ್‌ ಬಾಜ್‌ಪೇಯಿ ಸ್ಪಷ್ಟಪಡಿಸಿದ್ದಾರೆ. ವಿವಿಧ ಒಟಿಟಿಗಳಲ್ಲಿ ಪ್ರಸಾರವಾಗುತ್ತಿದ್ದ ಕೆಲವು ವೆಬ್‌ಸರಣಿಗಳು ರದ್ದಾಗಿರುವ ಹಿನ್ನೆಲೆಯಲ್ಲಿ ದ ಫ್ಯಾಮಿಲಿ ಮ್ಯಾನ್‌-2ರ ಪ್ರಸಾರ ಕೂಡ ರದ್ದಾಗಿದೆ ಎಂಬ ವದಂತಿಗಳು ಹರಡಿದ್ದವು. ಈ ಹಿನ್ನೆಲೆಯಲ್ಲಿ, ಮನೋಜ್‌ ಟ್ವಿಟರ್‌ ಮೂಲಕ ಈ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ :ಮುಂಬೈಗೆ ಮತ್ತೆ ಲಾಕ್‌ಡೌನ್‌ ಭೀತಿ : ಸಚಿವ ಅಸ್ಲಾಮ್‌ ಶೇಖ್‌ ಸುಳಿವು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next