Advertisement

OTT Release: ‘ಕಲ್ಕಿ’ ಓಟಿಟಿ ರಿಲೀಸ್ ಗೆ ದಿನಗಣನೆ: ಅಧಿಕೃತ ಡೇಟ್ ಅನೌನ್ಸ್

10:27 AM Aug 17, 2024 | Team Udayavani |

ಹೈದರಾಬಾದ್: ಪ್ರಭಾಸ್ ವೃತ್ತಿ ಬದುಕಿನ ದೊಡ್ಡ ಹಿಟ್ ಗಳಲ್ಲಿ ಒಂದಾಗಿರುವ ‘ಕಲ್ಕಿ – 2898 ಎಡಿ’ ಓಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ.

Advertisement

ಬಾಕ್ಸ್‌ ಆಫೀಸ್‌ನಲ್ಲಿ 1000 ಸಾವಿರಕ್ಕೂ ಅಧಿಕ ಕಲೆಕ್ಷನ್ ಮಾಡಿ ʼಕಲ್ಕಿʼ ಹತ್ತಾರು ದಾಖಲೆಗಳನ್ನು ಬ್ರೇಕ್‌ ಮಾಡಿದೆ. ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ರಿಲೀಸ್‌ ಆಗಿ ಭಾರತ ಮಾತ್ರವಲ್ಲದೆ ಅಮೆರಿಕಾ, ಕೆನಡಾ ಸೇರಿದಂತೆ ವಿದೇಶದ ಥಿಯೇಟರ್‌ಗಳಲ್ಲೂ ಚಿತ್ರ ಸಖತ್‌ ಸೌಂಡ್‌ ಮಾಡಿತ್ತು.

content-img

ನಿರ್ದೇಶಕ ನಾಗ್ ಅಶ್ವಿನ್ ತನ್ನ ‘ಕಲ್ಕಿ’ ಕಥೆಯನ್ನು ಒಂದು ಸೈನ್ಸ್ ಫಿಕ್ಷನ್ ಫ್ಯಾಂಟಸಿ ಕಥೆಯನ್ನಾಗಿ ಹೇಳಿದ್ದಾರೆ. ಸಿನಿಮಾದ ಕಥೆಯು ಕುರುಕ್ಷೇತ್ರದ ಯುದ್ಧಭೂಮಿಯಿಂದ ಶುರುವಾಗಿ, ಕಲಿಯುಗದ ಅಂತ್ಯದವರೆಗೂ ಸಾಗುತ್ತದೆ.

ಸಿನಿಮಾದ ಅದ್ದೂರಿ ದೃಶ್ಯರೂಪವಾಗಿ‌ ಮೂಡಿಬಂದಿದ್ದು, ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನದ ಬಳಿಕ ಈಗ ಓಟಿಟಿ ರಿಲೀಸ್ ಗೆ ಸಿದ್ದವಾಗಿದೆ.

Advertisement

ಇದೇ ಆಗಸ್ಟ್ 22 ರಂದು ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟೀಮಿಂಗ್ ಆಗಲಿದೆ. ಅದೇ ದಿನ ನೆಟ್ ಫ್ಲಿಕ್ಸ್ ನಲ್ಲಿ ಹಿಂದಿ ವರ್ಷನ್ ಸ್ಟ್ರೀಮ್ ಆಗಲಿದೆ.

ಸಿನಿಮಾ ಹೆಚ್ಚಿನ ಪ್ರೇಕ್ಷಕರನ್ನು ತಲುಪಿಸುವ ನಿಟ್ಟಿನಲ್ಲಿ ಎರಡು ಓಟಿಟಿ ವೇದಿಕೆಯಲ್ಲಿ ರಿಲೀಸ್‌ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

ʼಕಲ್ಕಿʼ ಸಿನಿಮಾದಲ್ಲಿ ಪ್ರಭಾಸ್‌, ಅಮಿತಾಭ್‌, ಕಮಲ್‌ ಹಾಸನ್‌, ದೀಪಿಕಾ ಪಡುಕೋಣೆ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.