Advertisement

ಹುಬ್ಬಳ್ಳಿ ಎನ್‌ಜಿಇಎಫ್ ಪುನಶ್ಚೇತನ ಇಲ್ಲ: ದೇಶಪಾಂಡೆ 

03:45 AM Mar 25, 2017 | Team Udayavani |

ವಿಧಾನಪರಿಷತ್ತು: ಸತತ ಏಳು ವರ್ಷಗಳಿಂದ ನಷ್ಟದಲ್ಲಿರುವ ಹುಬ್ಬಳ್ಳಿಯ ಎನ್‌.ಜಿ.ಇ.ಎಫ್ ಸಂಸ್ಥೆಯನ್ನು ಪುನಶ್ಚೇತನಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಪಕ್ಷೇತರ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ ಪ್ರಶ್ನೆಗೆ ಲಿಖೀತ ರೂಪದಲ್ಲಿ ನೀಡಿರುವ ಉತ್ತರದಲ್ಲಿ ಸಚಿವರು ಈ ಮಾಹಿತಿ ನೀಡಿದ್ದು, ಹುಬ್ಬಳ್ಳಿಯ ಎನ್‌.ಜಿ.ಇ.ಎಫ್ ಸಂಸ್ಥೆಯಿಂದ 21.09 ಕೋಟಿ ರೂ. ನಷ್ಟವಾಗಿದೆ. ಈ ಸಂಸ್ಥೆಯನ್ನು ಪುನಶ್ಚೇತನಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹೇಳಿದರು.

ಅದೇ ರೀತಿ ದಿ. ಮೈಸೂರು ಪೇಪರ್‌ ಮಿಲ್ಸ್‌ ಲಿಮಿಟೆಡ್‌ ಸಂಸ್ಥೆಯಿಂದ 596.47 ಕೋಟಿ ರೂ. ನಷ್ಟ ಆಗಿದ್ದು, ಈ ಸಂಸ್ಥೆಯ ಕಾರ್ಯಾಚರಣೆಯನ್ನು ಗುತ್ತಿಗೆಗೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಂಸ್ಥೆಯ ಖಾಯಂ ಹಾಗೂ ಗುತ್ತಿಗೆ ನೌಕರರಿಗೆ ವಿ.ಆರ್‌.ಎಸ್‌/ವಿ.ಎಸ್‌.ಎಸ್‌ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next