Advertisement

ಓಶಿವಾರಾ: ಬಿಎಂಸಿಯ ಖಾಸಗಿ ಪರೀಕ್ಷಾ ಕೇಂದ್ರ ಆರಂಭ

06:26 PM Apr 14, 2020 | mahesh |

ಮುಂಬಯಿ: ಮುಂಬಯಿಯ ವಾಹನ ನಿಲುಗಡೆ ಸ್ಥಳದಿಂದ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಪರೀಕ್ಷಾ ಕೇಂದ್ರಗಳಲ್ಲಿ ಮೊದಲನೆಯದು ಓಶಿವಾರಾದಲ್ಲಿ ಕೋವಿಡ್‌ -19ಕ್ಕಾಗಿ ಶನಿವಾರ ಪರೀಕ್ಷೆಯನ್ನು ಪ್ರಾರಂಭಿಸಿತು. ಚಿಕಿತ್ಸಾಲಯಗಳನ್ನು ಸ್ಥಾಪಿಸಲು ಬೃಹನ್ಮುಂ ಬಯಿ ಮುನ್ಸಿಪಲ್‌ ಕಾರ್ಪೊರೇಷನ್‌ ಗುರುತಿಸಿ ರುವ 17 ಸಾರ್ವಜನಿಕ ಪಾರ್ಕಿಂಗ್‌ ಸ್ಥಳಗಳಲ್ಲಿ ಇದು ಒಂದಾಗಿದೆ. ಇದರಿಂದಾಗಿ ಇಲ್ಲಿ ಹೆಚ್ಚಿನ ಜನರನ್ನು ಪರೀಕ್ಷಿಸಬಹುದು. ಉಳಿದ ಚಿಕಿತ್ಸಾಲಯಗಳು ಮುಂದಿನ ವಾರದೊಳಗೆ ಕಾರ್ಯನಿರ್ವಹಿಸಲಿವೆ ಎಂದು ಮೂಲಗಳು ತಿಳಿಸಿವೆ.

Advertisement

ಚಿಕಿತ್ಸೆಗಾಗಿ ಬರುವವರಿಗೆ ಸಹಕರಿಸಲು ಚಿಕಿತ್ಸಾಲಯಗಳ ಸಾಮರ್ಥ್ಯವನ್ನು ಹೆಚ್ಚಿಸಲು ಬಿಎಂಸಿ ಯೋಜಿಸಿದೆ. ಪ್ರಸ್ತುತ, ನಗರದಲ್ಲಿ 10 ಜ್ವರ ಪರೀಕ್ಷಾ ಚಿಕಿತ್ಸಾಲಯಗಳಿವೆ. ಇದುವರೆಗೆ ಕೋವಿಡ್‌ -19ರ ಐದು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಐದು ಖಾಸಗಿ ಲ್ಯಾಬ್‌ಗಳಾದ ಎಸ್‌ಎಸ್‌ಆರ್‌ ಲಿಮಿಟೆಡ್‌, ಥೈರೋಕೇರ್‌ ಟೆಕ್ನಾಲಜೀಸ್‌, ಮೆಟ್ರೊಪೊಲಿಸ್‌ ಲ್ಯಾಬೊರೇಟರಿ, ಇನ್ಫ್ ಕ್ಸನ್‌ ಲ್ಯಾಬೊರೇಟರೀಸ್‌ ಮತ್ತು ಸಬರ್ಬನ್‌ ಡಯಾಗ್ನೊಸ್ಟಿಕ್‌ ಸೆಂಟರ್‌ – ನಗರದಾದ್ಯಂತ 17 ಪಾರ್ಕಿಂಗ್‌ ಸ್ಥಳಗಳಲ್ಲಿ ಪ್ರತಿದಿನ 3,000 ಪರೀಕ್ಷೆಗಳನ್ನು ನಡೆಸುವ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಿದೆ.

ಪ್ರಭಾದೇವಿಯಲ್ಲಿರುವ ಇಂಡಿಯಾಬುಲ್ಸ… ಹಣಕಾಸು ಕೇಂದ್ರವೂ ಇದರಲ್ಲಿ ಸೇರಿದೆ. ದಾದರ್‌ನಲ್ಲಿ ಕೊಹಿನೂರ್‌ ಮಿಲ…, ಬೊರಿವಲಿ ಪಶ್ಚಿಮದಲ್ಲಿ ಕ್ಲಬ್‌ ಅಕ್ವೇರಿಯಾ ಪಾರ್ಕಿಂಗ್‌, ಚೌಪಟ್ಟಿಯಲ್ಲಿ ಬಿರ್ಲಾ ಕೃಡಾ ಕೇಂದ್ರ, ಗೋರೆಗಾಂವ್‌ ಪೂರ್ವದ ನೆಸ್ಕೊ ಪ್ರದರ್ಶನ ಕೇಂದ್ರದ ಹೊರಗಿರುವ ಸೇವಾ ರಸ್ತೆ, ಗೋರೆಗಾಂವ್‌ ಪಶ್ಚಿಮದ ಹಬ್‌ ಮಾಲ್‌ ಬಳಿ ವಾಹನ ನಿಲುಗಡೆ ಸ್ಥಳ ಮತ್ತು ಬೈಕುಲ್ಲಾ, ಕಲಾಚೌಕಿ, ಸಿವ್ರಿ, ಮುಲುಂಡ್‌ ಮತ್ತು ಕಾಂಜುರ್ಮಾರ್ಗ್‌ನಲ್ಲಿ ವಾಹನ ನಿಲುಗಡೆ ಸ್ಥಳಗಳಲ್ಲಿ ಪರೀಕ್ಷಾ ಚಿಕಿತ್ಸಾಲಯಗಳನ್ನು ತೆರೆಯಲು ನಿರ್ಧರಿಸಲಾಗಿದೆ.

ಹೆಚ್ಚುವರಿ ಪುರಸಭೆ ಆಯುಕ್ತ ವೆಲಾಸು ಮಾತನಾಡಿ, ನಾವು ಹೆದ್ದಾರಿಯಲ್ಲಿ ವಿಶಾಲವಾದ ಸೇವಾ ರಸ್ತೆಗಳನ್ನು ಗುರುತಿಸುತ್ತಿದ್ದೇವೆ. ಹದಿನೇಳು ವಾಹನ ನಿಲುಗಡೆ ಸ್ಥಳಗಳನ್ನು ಗುರುತಿಸಲಾಗಿದೆ. ಒಂದು ಪಾರ್ಕಿಂಗ್‌ ಸ್ಥಳದಲ್ಲಿ ಪರೀಕ್ಷೆ ಪ್ರಾರಂಭವಾಗಿದೆ. ಇತರರೆಡೆಗಳಲ್ಲಿ ಮುಂದಿನ ವಾರದಿಂದ ಪ್ರಾರಂಭವಾಗುತ್ತದೆ. ಖಾಸಗಿ ಲ್ಯಾಬ್‌ಗಳನ್ನು ತೊಡಗಿಸಿಕೊಳ್ಳುವ ಮೂಲಕ ನಮ್ಮ ಜ್ವರ ಚಿಕಿತ್ಸಾಲಯಗಳ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ಯೋಜಿಸಿದ್ದೇವೆ. ಅವರು ಧಾರಕ ವಲಯಗಳಲ್ಲಿ ಹೆಚ್ಚಿನ ಜನರನ್ನು ಪರೀಕ್ಷಿಸುತ್ತಾರೆ. ಮತ್ತು ಸ್ವಾಬ್‌ ಪರೀಕ್ಷೆಗಳು ಅಗತ್ಯವಿದ್ದರೆ ನಾವು ಲ್ಯಾಬ್‌ಗಳಲ್ಲಿ ವ್ಯವಸ್ಥೆ ಮಾಡುತ್ತೇವೆ. ಪಶ್ಚಿಮ ಮತ್ತು ಪೂರ್ವ ಎಕ್ಸ್‌ಪ್ರೆಸ್‌ ಹೆದ್ದಾರಿಗಳಲ್ಲಿನ ಪರೀಕ್ಷಾ ಕೇಂದ್ರಗಳು ಡ್ರೈವ್‌-ಥ್ರೂ’ ಆಗಿರುತ್ತವೆ. ಅಂದರೆ ಪರೀಕ್ಷೆಗೆ ಮಾದರಿಗಳನ್ನು ನೀಡುವವರು ತಮ್ಮ ವಾಹನಗಳನ್ನು ಬಿಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ವೈದ್ಯಕೀಯ ತಂಡಗಳ ಮಾನವಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಬಿಎಂಸಿ 1,709 ನಿವಾಸಿ ವೈದ್ಯರು, 417 ಇಂಟರ್ನಿಗಳು, 662 ವಿದ್ಯಾರ್ಥಿಗಳು ಮತ್ತು 468 ನರ್ಸಿಂಗ್‌ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ. ಮುಂಬಯಿಯಲ್ಲಿ 993 ಸಕಾರಾತ್ಮಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಎಂಸಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಗರಿಷ್ಠ ಸಂಖ್ಯೆಯು ಜಿ / ಸೌತ್‌ ವಾರ್ಡ್‌ನಿಂದ ಬಂದಿದೆ. ಇದರಲ್ಲಿ ವರ್ಲಿ ಮತ್ತು ಪ್ರಭಾದೇವಿ ಸೇರಿದೆ. ವರದಿಯಾದ ಒಟ್ಟು ಪ್ರಕರಣಗಳಲ್ಲಿ ಸುಮಾರು ಶೇ. 50 ರಷ್ಟು ನಗರದ ನಾಲ್ಕು ವಾರ್ಡ್‌ ಗಳಿಂದ ಬಂದಿವೆ. ಜಿ / ಸೌತ್‌ ವಾರ್ಡ್‌ ನಲ್ಲಿ 243 ಪ್ರಕರಣಗಳು; ಇ ವಾಡ್ನìಲ್ಲಿರುವ ಬೈಕುಲ್ಲಾ, ಮುಂಬಯಿ ಸೆಂಟ್ರಲ್‌ ಮತ್ತು ಮಜಗಾಂವ್‌ ಇಲ್ಲಿ 104 ಪ್ರಕರಣಗಳು ಸೇರಿವೆ. ಡಿ ವಾಡ್ನಲ್ಲಿರುವ ಮಲಬಾರ್‌ ಹಿಲ್, ಚೌಪಟ್ಟಿ, ಗ್ರಾಂಟ್‌ ರಸ್ತೆ ಇಲ್ಲಿ 66 ಪ್ರಕರಣಗಳು, ಮತ್ತು ಹೆಚ್‌ / ಈಸ್ಟ್ ವಾರ್ಡ್‌ ನ ಬಾಂದ್ರಾ ಪೂರ್ವದಲ್ಲಿ 59 ಪ್ರಕರಣಗಳು ಸೇರಿವೆ.

Advertisement

ಜಿ / ನಾರ್ತ್‌ ವಾರ್ಡ್‌ನಿಂದ ಶನಿವಾರ ವರದಿಯಾದ 44 ಹೊಸ ಸಕಾರಾತ್ಮಕ ಪ್ರಕರಣಗಳಲ್ಲಿ 28 ಪ್ರಕರಣಗಳು ಧಾರಾವಿ ಮೂಲದವರಾಗಿದ್ದು, ಒಂದು ಸಾವು ಕೂಡ ವರದಿಯಾಗಿದೆ. ಮುಂದಿನ ಎರಡು ವಾರಗಳಲ್ಲಿ ಧಾರಾವಿ ನಿವಾಸಿಗಳ ಸುಮಾರು 7 ಲಕ್ಷ ನಿವಾಸಿಗಳನ್ನು ಪರೀಕ್ಷಿಸುವುದಾಗಿ ಬಿಎಂಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next