Advertisement
ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ‘ರೋಮಾ’ ಚಿತ್ರದ ಡೈರೆಕ್ಟರ್ ಅಲ್ಫಾನ್ಸೋ ಕ್ವಾರೋನ್ ಪಾಲಾದರೆ, ಆನಿಮೇಟೆಡ್ ಚಿತ್ರ ಪ್ರಶಸ್ತಿ ‘ಸ್ಪೈಡರ್ ಮ್ಯಾನ್: ಇನ್ ಟು ದಿ ಸ್ಪೈಡರ್ ವರ್ಸ್’ ಚಿತ್ರದ ಪಾಲಾಯಿತು. ವಿದೇಶಿ ಭಾಷೆಯ ಚಿತ್ರ ಪ್ರಶಸ್ತಿಯನ್ನು ಸ್ಪ್ಯಾನಿಷ್ ಭಾಷೆಯ ‘ರೋಮಾ’ ಪಡೆದರೆ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ‘ರೆಜಿನಾ ಕಿಂಗ್’ ಪಡೆದರು. ರೆಜಿನಾ ಅವರಿಗೆ ಇಫ್ ಬೀಲ್ ಸ್ಟ್ರೀಟ್ ಕುಡ್ ಟಾಕ್’ ಚಿತ್ರದ ನಟನೆಗಾಗಿ ಈ ಅತ್ಯುನ್ನತ ಗೌರವ ಒಲಿದು ಬಂತು. ಅತ್ಯುತ್ತಮ ಪೋಷಕ ನಟ ಗೌರವ ‘ಮೆಹರ್ಶಾಲಾ ಅಲಿ’ ಅವರಿಗೆ ಗ್ರೀನ್ ಬುಕ್ ಚಿತ್ರಕ್ಕಾಗಿ ಲಭಿಸಿತು.
ಡಾಕ್ಯುಮೆಂಟರಿ: ಪಿರಿಯಡ್- ಎಂಡ್ ಆಫ್ ಸೆಂಟೆನ್ಸ್
ಮೂಲ ಹಾಡು: ಶ್ಯಾಲೋ ( ಎ ಸ್ಟಾರ್ ಈಸ್ ಬಾರ್ನ್)
ಚಿತ್ರಕಥೆ: ಗ್ರೀನ್ ಬುಕ್
ಪ್ರೊಡಕ್ಷನ್ ಡಿಸೈನ್: ಬ್ಲಾಕ್ ಪ್ಯಾಂಥರ್
ಛಾಯಾಗ್ರಹಣ: ರೋಮಾ
ವಸ್ತ್ರ ವಿನ್ಯಾಸ: ಬ್ಲಾಕ್ ಪ್ಯಾಂಥರ್
ಸಂಗೀತ: ಬ್ಲಾಕ್ ಪ್ಯಾಂಥರ್
ಸೌಂಡ್ ಎಡಿಟಿಂಗ್: ಬೊಹಿಮಿಯನ್ ರಾಪ್ಸೋಡಿ
ಸೌಂಡ್ ಮಿಕ್ಸಿಂಗ್: ಬೊಹಿಮಿಯನ್ ರಾಪ್ಸೋಡಿ
ಆನಿಮೇಟೆಡ್ ಕಿರು ಚಿತ್ರ: ಬಾವೊ
ಲೈವ್ ಆಕ್ಷನ್ ಕಿರು ಚಿತ್ರ: ಸ್ಕಿನ್
ವಿಶುವಲ್ ಎಫೆಕ್ಟ್: ಫಸ್ಟ್ ಮ್ಯಾನ್
ಸಂಕಲನ: ಬೊಹಿಮಿಯನ್ ರಾಪ್ಸೋಡಿ
ಮೇಕಪ್ ಮತ್ತು ಕೇಶವಿನ್ಯಾಸ: ವೈಸ್