Advertisement

ನಿಜವಾಗಿಯೂ ಬೆತ್ತಲಾಗಿ ಆಸ್ಕರ್‌ ವೇದಿಕೆಗೆ ಬಂದಿದ್ರಾ ಜಾನ್‌ ಸೆನಾ? ಅಸಲಿ ಫೋಟೋ ಇದೇ ನೋಡಿ..

03:03 PM Mar 11, 2024 | Team Udayavani |

ವಾಷಿಂಗ್ಟನ್: 96ನೇ ಆಸ್ಕರ್‌ ಪ್ರಶಸ್ತಿ ಸಮಾರಂಭ ಹಾಲಿವುಡ್‌ ಗಣ್ಯರ ಸಮ್ಮುಖದಲ್ಲಿ ಯುಎಸ್‌ಎಯ ಕ್ಯಾಲಿಫೋರ್ನಿಯಾದ ಡಾಲ್ಬಿ ಥಿಯೇಟರ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ.

Advertisement

ಹತ್ತಾರ ವಿಭಾಗದಲ್ಲಿ ಪ್ರತಿಷ್ಠಿತ ಆಸ್ಕರ್‌ ಅವಾರ್ಡ್ಸ್‌ ಗಳನ್ನು ನೀಡಲಾಗಿದೆ. ಕ್ರಿಸ್ಟೋಫರ್ ನೋಲನ್ ಅವರ ʼಓಪನ್ ಹೈಮರ್ʼ ಸೇರಿದಂತೆ ವಿವಿಧ ಸಿನಿಮಾಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಕಾರ್ಯಕ್ರಮದಲ್ಲಿ WWE ಸೂಪರ್‌ ಸ್ಟಾರ್‌ ಹಾಗೂ ಅಮೆರಿಕಾದ ನಟ ಜಾನ್‌ ಸೆನಾ ಅವರು ಬೆತ್ತಲಾಗಿ ಪ್ರಶಸ್ತಿ ನೀಡಲು ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಜಾನ್‌ ಸೆನಾ ಈ ರೀತಿ ಕಾಣಿಸಿಕೊಂಡ ರೀತಿಗೆ ಹಲವರು ಶಾಕ್‌ ಆಗಿದ್ದಾರೆ.

ಫೋಟೋ ಹಾಗೂ ವಿಡಿಯೋಗಳು ವೈರಲ್‌ ಆದ ಬೆನ್ನಲ್ಲೇ ಇದೀಗ ಇದರ ಸತ್ಯಾಸತ್ಯತೆ ಹೊರಬಿದ್ದಿದೆ.

ಜಾನ್‌ ಸೆನಾ ಅವರು ವಸ್ತ್ರ ವಿನ್ಯಾಸ ಪ್ರಶಸ್ತಿ ನೀಡಲು ವೇದಿಕೆ ಬಂದಿದ್ದರು. ಈ ವೇಳೆ ಅವರು ಖಾಸಗಿ ಅಂಗಕ್ಕೆ ಸ್ಟೋರಿ ಬೋರ್ಡ್‌ ನ್ನು ಅಡ್ಡ ಹಿಡಿದು ಬೆತ್ತಲಾಗಿ ವೇದಿಕೆಗೆ ಬಂದಿದ್ದರು.

Advertisement

ಆದರೆ ಇದೀಗ ಜಾನ್‌ ಸಿನಾ ನಿಜಕ್ಕೂ ಬೆತ್ತಲಾಗಿದ್ದಾರ? ಎನ್ನುವುದರ ಬಗೆಗಿನ ಚರ್ಚೆಗೆ ಫೋಟೋವೊಂದು ಇಲ್ಲ ಎನ್ನುವ ಉತ್ತರವನ್ನು ಸ್ಪಷ್ಟೀಕರಿಸಿದೆ.

ಬ್ಯಾಕ್‌ ಸ್ಟೇಜ್‌ ನಲ್ಲಿ ಜಾನ್‌ ಸೆನಾ ನಿಂತಿರುವ ಫೋಟೋಗಳು ಹೊರಬಿದ್ದಿದೆ. ಜಾನ್‌ ಸೆನಾ ಮೈಗೆ ಏನು ಬಟ್ಟೆ ಹಾಕಿಲ್ಲ. ಆದರೆ ಖಾಸಗಿ ಅಂಗದ ಮುಂದೆ ಹಾಗೂ ಹಿಂದೆ ಸಣ್ಣದೊಂದು ಬಟ್ಟೆಯನ್ನು ಮುಚ್ಚಿಕೊಂಡಿದ್ದಾರೆ. ಇದು ವೇದಿಕೆಗೆ ಬಂದಾಗ ಯಾರಿಗೂ ಕೂಡ ಗೊತ್ತಾಗದಂತೆ, ಹಾಸ್ಯವಾಗಿ ಹಾಗೂ ನೈಜವಾಗಿ ತಾನೇನು ಧರಿಸಿಯೇ ಇಲ್ಲ ಎನ್ನುವ ಹಾಗೆ ಜಾನ್‌ ಸೆನಾ ನಡೆದುಕೊಂಡು ಹೋಗಿದ್ದಾರೆ.

ಜಾನ್‌ ಸೆನಾ ಬೆತ್ತಲಾಗಿಲ್ಲ ಅವರು ಮಾನ ಮುಚ್ಚಲು ಬಟ್ಟೆಯೊಂದನ್ನು ಸುತ್ತಿಕೊಂಡಿರುವುದು ಬ್ಯಾಕ್ ಸ್ಟೇಜ್‌ ನಲ್ಲಿರುವ ಫೋಟೋಗಳಿಂದ ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next