Advertisement

ರಾಜ್ಯಸಭೆಯಲ್ಲಿ “ಆಸ್ಕರ್‌’ಯೋಗಾಯುರ್ವೇದ ಪಾಠ!

12:26 AM Mar 20, 2020 | mahesh |

ಉಡುಪಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಆಸ್ಕರ್‌ ಫೆರ್ನಾಂಡಿಸ್‌ ಅವರು ರಾಜ್ಯಸಭೆಯಲ್ಲಿ ಬುಧವಾರ ಗೋಮೂತ್ರದ ಉತ್ತಮ ಗುಣಗಳನ್ನು ಶ್ಲಾಘಿಸಿದ್ದಾರೆ. ಅಲ್ಲದೆ ವ್ಯಕ್ತಿಯೊಬ್ಬರು ಗೋಮೂತ್ರ ಕುಡಿದು ಕ್ಯಾನ್ಸರ್‌ ಗುಣಪಡಿಸಿಕೊಂಡ ಕಥೆಯನ್ನೂ ಹೇಳಿಕೊಂಡರು.

Advertisement

ಹೋಮಿಯೋಪತಿ ಮತ್ತು ಭಾರತೀಯ ವೈದ್ಯಕೀಯ ವ್ಯವಸ್ಥೆಗಳಿಗೆ ರಾಷ್ಟ್ರೀಯ ಆಯೋಗಗಳನ್ನು ಸ್ಥಾಪಿ ಸುವ ಎರಡು ಮಸೂದೆಗಳ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆ ನಡೆಯುತ್ತಿತ್ತು. ಈ ವೇಳೆ ಮಾತನಾಡಿದ ಆಸ್ಕರ್‌ ಫೆರ್ನಾಂಡಿಸ್‌ ಅವರು ಒಮ್ಮೆ ಮೀರತ್‌ ಬಳಿಯ ಆಶ್ರಮಕ್ಕೆ ಭೇಟಿ ನೀಡಿದಾಗ ಗೋ ಮೂತ್ರ ಕುಡಿದು ಕ್ಯಾನ್ಸರ್‌ ಗುಣಪಡಿಸಿಕೊಂಡಿದ್ದ ವ್ಯಕ್ತಿ ಯೊಬ್ಬ ರನ್ನು ಭೇಟಿಯಾಗಿದ್ದಾಗಿ ತಿಳಿಸಿದರು.

ವಜ್ರಾಸನದಿಂದ ಮೊಣಕಾಲು ನೋವು ದೂರ
ಭಾರತೀಯ ವೈದ್ಯಕೀಯ ವ್ಯವಸ್ಥೆ ಉತ್ತಮ ಗುಣಗಳನ್ನು ಹೊಂದಿದೆ. ನನಗೆ ಮೊಣಕಾಲಿನ ತೀವ್ರ ನೋವು ಬಂದಾಗ ಬದಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರ ಸಲಹೆಗಳನ್ನು ನಿರಾಕರಿಸಿ ವಜ್ರಾಸನ ಮಾಡಲು ಪ್ರಾರಂಭಿಸಿದ್ದೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲದೆ ಕುಸ್ತಿ ಮಾಡುವಷ್ಟು ನಾನು ಸಮರ್ಥನಾಗಿದ್ದೇನೆ ಎಂದರು. ದಿವಂಗತ ಮಾಜಿ ಪ್ರಧಾನಿ ವಾಜಪೇಯಿ ಅವರು ಮೊಣಕಾಸಿನ ಶಸ್ತ್ರಚಿಕಿತ್ಸೆ ತಿಳಿದಿದ್ದರೆ ಅವರ ಬಳಿಗೆ ಹೋಗಿ ವಜ್ರಾಸನ ಆರಂಭಿಸುವಂತೆ ಕೇಳಿಕೊಳ್ಳುತ್ತಿದ್ದೆ. ಇದರಿಂದ ಅವರು ಖಂಡಿತವಾಗಿ ಗುಣಮುಖರಾಗು ತ್ತಿದ್ದರು ಎಂದು ಹೇಳಿದರು.

ಅಮೆರಿಕದಲ್ಲಿ ಸುಮಾರು 104 ವರ್ಷ ವಯಸ್ಸಿನ ವ್ಯಕ್ತಿ ಯುವಕರನ್ನು ನಾಚಿಸುವಂತೆ ಓಡುತ್ತಾರೆ. ಯೋಗ ನಮ್ಮ ಸಂಪತ್ತು. ನೀವು ಯೋಗವನ್ನು ಅಭ್ಯಾಸ ಮಾಡಿದರೆ, ನಮ್ಮ ಆರೋಗ್ಯದ ಬಜೆಟ್‌ ವೆಚ್ಚವನ್ನು ಶೇ. 50ರಷ್ಟು ಕಡಿಮೆ ಮಾಡಬಹುದು. ಇದು ಜೀವನ ವಿಧಾನ. ಭಾರತೀಯ ಔಷಧ ಪದ್ಧತಿ ವೈದ್ಯರ ಬಳಿಗೆ ಹೋಗುವ ಮೊದಲೇ ಸಾಕಷ್ಟು ಪರಿಹಾರ ನೀಡುತ್ತದೆ ಎಂದರು. ಮಸೂದೆಗಳನ್ನು ಬೆಂಬಲಿಸಿದರೂ ಯೋಗ, ಪ್ರಕೃತಿ ಚಿಕಿತ್ಸೆಯನ್ನು ಹೊರಗಿ ಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next