Advertisement
5,000ಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಆವರಿಸಿದ ಭೀಕರ ಕಾಳ್ಗಿಚ್ಚಿನಿಂದಾಗಿ ಕನಿಷ್ಠ ಐವರು ಮೃತಪಟ್ಟಿದ್ದಾರೆ. ಲಾಸ್ ಏಂಜಲೀಸ್ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಇರುವ 49 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಬೆಂಕಿಯ ತೀವ್ರತೆಗೆ ಹಲವು ಕಾರುಗಳು ಮತ್ತು ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ವರದಿಯಾಗಿದೆ.
Related Articles
Advertisement
ಮಾರ್ಚ್ 2 ರಂದು ನಡೆಯಲಿರುವ 2025ರ ಆಸ್ಕರ್ ಸಮಾರಂಭವನ್ನು ಕಾನನ್ ಒ’ಬ್ರೇನ್ ಹೋಸ್ಟ್ ಮಾಡಲಿದ್ದಾರೆ.
ಬೆದರಿದ ಹಾಲಿವುಡ್ನ ಪ್ರಮುಖರುಕ್ಯಾಲಿಫೋರ್ನಿಯಾದ ಬಹುಭಾಗ ಅದರಲ್ಲೂ ಲಾಸ್ ಏಂಜಲೀಸ್ ಸುತ್ತಲೂ ಇರುವ ಪ್ರದೇಶಗಳು ಐಷಾರಾಮಿ ಮನೆಗಳನ್ನು ಹೊಂದಿದೆ. ಅದರಲ್ಲೂ ಬಹುಭಾಗ ಹಾಲಿವುಡ್ ತಾರೆಯರ ನೆಲೆಯಾಗಿದೆ. ಕಾಳ್ಗಿಚ್ಚಿನ ಭೀತಿಯಿಂದ ಹಾಲಿವುಡ್ನ ಪ್ರಮುಖರೆಲ್ಲರೂ ತಮ್ಮ ಮನೆಗಳನ್ನು ತೊರೆದಿದ್ದಾರೆ ಎನ್ನಲಾಗಿದೆ. ಅವರಿಗೆ ಸೇರಿದ ವಾಹನಗಳು ಮನೆಗಳು ಬಹುತೇಕ ನಾಶವಾಗಿವೆ. ಅಗ್ನಿಶಾಮಕ ಸಿಬಂದಿ ಬುಲ್ಡೋಜರ್ಗಳ ಮೂಲಕ ಸಾವಿರಾರು ಐಷಾರಾಮಿ ವಾಹನ ಗಳನ್ನು ತೆರವುಗೊಳಿಸುತ್ತಿದ್ದಾರೆ.