Advertisement
ಲಾಡೆನ್ ‘ಅಮೆರಿಕನ್ ಜನರಿಗೆ ಬರೆದ ಪತ್ರ’ ಮೊದಲ ಬಾರಿಗೆ ಇಪ್ಪತ್ತೊಂದು ವರ್ಷಗಳ ನಂತರ ಪ್ರಕಟವಾಗಿದ್ದು ಚರ್ಚೆಗೆ ಬಂದಿದೆ. ಸಾವಿರಾರು ಟಿಕ್‌ಟಾಕ್ ಬಳಕೆದಾರರು ಒಂದೇ ದಿನದಲ್ಲಿ ಕ್ಲಿಪ್‌ಗಳನ್ನು ಸಿದ್ಧಮಾಡಿ ಹಂಚಿಕೊಳ್ಳುವ ಮೂಲಕ, ಒಸಾಮಾ ಪತ್ರದ ವಿಡಿಯೋ ಗಳು ಸದ್ಯ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿವೆ.
Related Articles
Advertisement
ಒಸಾಮಾ ಪತ್ರದಲ್ಲಿ “ಪ್ಯಾಲೆಸ್ತೀನ್ ಜನರು ಸೆರೆಯಾಳುಗಳಾಗಿ ಕಾಣುವುದಿಲ್ಲ ಏಕೆಂದರೆ ನಾವು ಅದರ ಸಂಕೋಲೆಗಳನ್ನು ಮುರಿಯಲು ಪ್ರಯತ್ನಿಸುತ್ತೇವೆ ಮತ್ತು ಯುನೈಟೆಡ್ ಸ್ಟೇಟ್ಸ್ ಕ್ರೈಸ್ತರ ರಕ್ತದಿಂದ ಅದರ ದುರಹಂಕಾರವನ್ನು ಬೆಲೆ ತೆರಬೇಕಾಗುತ್ತದೆ” ಎಂದು ಎಚ್ಚರಿಸಿರುವುದು ಎದ್ದು ಕಂಡಿದೆ.
ದಿ ಗಾರ್ಡಿಯನ್ ಪತ್ರಿಕೆಯು 2002 ರಿಂದ ತನ್ನ ವೆಬ್‌ಸೈಟ್‌ನಲ್ಲಿ ಒಸಾಮಾ ಬಿನ್ ಲಾಡೆನ್ ಪತ್ರವನ್ನು ಹೊಂದಿತ್ತು, ಆದರೆ ಈಗ ವಿಡಿಯೋಗಳು ವೈರಲ್ ಆದ ನಂತರ ಅದನ್ನು ತೆಗೆದುಹಾಕಿದೆ.ಡಾಕ್ಯುಮೆಂಟ್ ಅನ್ನು ತೆಗೆದುಹಾಕಲು ಯಾವುದೇ ಕಾರಣವನ್ನು ಅದು ಒದಗಿಸಿಲ್ಲ. ಪತ್ರವನ್ನು ತೆಗೆದಿರುವುದು ಪತ್ರದ ಕುರಿತಾದ ವಿಡಿಯೋಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೆಚ್ಚಿಸಿದೆ ಎಂದು ಹೇಳಲಾಗಿದೆ.
ಗಾರ್ಡಿಯನ್ ಸಂದೇಶದಲ್ಲಿ “ಈ ಪುಟವು ಈ ಹಿಂದೆ 24 ನವೆಂಬರ್ 2002 ರಂದು ಅಬ್ಸರ್ವರ್‌ನಲ್ಲಿ ವರದಿ ಮಾಡಿದಂತೆ, ಅನುವಾದದಲ್ಲಿ, ಒಸಾಮಾ ಬಿನ್ ಲಾಡೆನ್ ಅವರ “ಅಮೆರಿಕನ್ ಜನರಿಗೆ ಪತ್ರ” ದ ಪೂರ್ಣ ಪಠ್ಯವನ್ನು ಒಳಗೊಂಡಿರುವ ಡಾಕ್ಯುಮೆಂಟ್ ಅನ್ನು ಪ್ರದರ್ಶಿಸಿದೆ.” ಎಂದು ಹೇಳಿದೆ.
ಟಿಕ್‌ಟಾಕ್ ಟ್ರೆಂಡ್‌ನ ಬಗ್ಗೆ ತನಿಖೆ ನಡೆಸಬೇಕೆಂದು ಹಲವರು ಒತ್ತಾಯಿಸಿದ್ದು, ಇದು ಉದ್ದೇಶಪೂರ್ವಕ ಪ್ರವೃತ್ತಿಯಿಂದ ಕೂಡಿದ ಅಭಿಯಾನವಾಗಿ ಪ್ರಾರಂಭವಾಯಿತು” ಎಂದು ಎಕ್ಸ್ ಬಳಕೆದಾರರು ಬರೆದಿದ್ದಾರೆ.
ಮೇ 2011 ರಲ್ಲಿ ಪಾಕಿಸ್ಥಾನದ ಅಬೋಟಾಬಾದ್‌ನಲ್ಲಿರುವ ಕಟ್ಟಡದ ಮೇಲೆ ರಾತ್ರಿ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಯುಎಸ್ ಸೈನ್ಯದ ಸೀಲ್ ತಂಡವ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆಗೈದಿತ್ತು.