Advertisement
ಉಡುಪಿ: ವಿದ್ಯಾರ್ಥಿಗಳು ತಮ್ಮ ಪದವಿಯ ಬಳಿಕ ಗ್ರಾಮೀಣ ಪ್ರದೆಶಗಳಲ್ಲಿ ಸೇವೆಯನ್ನು ಸಲ್ಲಿಸಲು ಆಸಕ್ತಿಯನ್ನು ತೋರಿಸಬೇಕು ಎಂದು ಪ್ರಸಾದ್ ನೇತ್ರಾಲಯದ ಮುಖ್ಯಸ್ಥರಾಗಿರುವ ಹಾಗೂ ಗ್ರಾಮೀಣ ಭಾಗದಲ್ಲಿ ಹಲವಾರು ನೇತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಿರುವ ಅನುಭವವನ್ನು ಹೊಂದಿರುವ ಡಾ. ಕೃಷ್ಣಪ್ರಸಾದ್ ಅವರು ಹೊಸ ವಿದ್ಯಾರ್ಥಿಗಳಿಗೆ ಕರೆಯನ್ನು ನೀಡಿದರು. ಕರ್ನಾಟಕ ಸರಕಾರದ ‘ದೃಷ್ಟಿ ಸಮಿತಿ’ಯ ಅಧ್ಯಕ್ಷರಾಗಿರುವ ತಾವು ರಾಜ್ಯಾದ್ಯಂತ ಶಾಲೆಗಳಲ್ಲಿ ಉಚಿತ ಕಣ್ಣಿನ ಪರೀಕ್ಷಾ ಕ್ಯಾಂಪ್ ಗಳನ್ನು ಕಡ್ಡಾಯವಾಗಿ ನಡೆಸಲು ಅನುಕೂಲವಾಗುಂತೆ ಕಾನೂನು ಒಂದನ್ನು ರೂಪಿಸುತ್ತಿರುವುದಾಗಿ ಡಾ. ಕೃಷ್ಣಪ್ರಸಾದ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪ್ರಸಾದ್ ನೇತ್ರಾಲಯದಲ್ಲಿ ಲಭ್ಯವಿರುವ ವಿಶ್ವದರ್ಜೆಯ ಸೌಲಭ್ಯಗಳ ಸದುಪಯೋಗವನ್ನು ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೆಲ್ಲರೂ ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಉಡುಪಿಯ ಸಹಾಯಕ ಜಿಲ್ಲಾಧಿಕಾರಿಯಾಗಿರುವ ಶ್ರೀಮತಿ ಅನುರಾಧ ಜಿ. ಅವರು ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಬಿಎಸ್ಸಿ (ನೇತ್ರಶಾಸ್ತ್ರ – ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಅಧೀನಕ್ಕೊಳಪಟ್ಟಿದೆ) ಮತ್ತು ಡಿಒಟಿ (ಪ್ಯಾರಾ ಮೆಡಿಕಲ್ ಬೋರ್ಡ್, ಕರ್ನಾಟಕ ಸರಕಾರ ಇದರ ಅಧೀನಕ್ಕೊಳಪಟ್ಟಿರುವುದು) ವಿದ್ಯಾರ್ಥಿ ಸಮೂಹಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣ ಸೌಲಭ್ಯವನ್ನು ಒದಗಿಸುತ್ತಿರುವುದಕ್ಕೆ ಅನುರಾಧ ಅವರು ಡಾ. ಕೃಷ್ಣ ಪ್ರಸಾದ್ ಅವರನ್ನು ವಿಶೇಷವಾಗಿ ಅಭಿನಂದಿಸಿದರು. ಅವರು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಅಂಗಸಂಸ್ಥೆಯಾಗಿರುವ ನೇತ್ರಜ್ಯೋತಿ ಕಾಲೇಜಿನ ಹೊಸ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಪ್ರಸಾದ್ ನೇತ್ರಾಲಯದ ನಿರ್ದೇಶಕರಾಗಿರುವ ಶ್ರೀ ರಘುರಾಮ್ ರಾವ್ ಅವರು ಮಾತನಾಡಿ ನಾವೆಷ್ಟು ಗುಣಮಟ್ಟದ ಬೋಧನಾ ವ್ಯವಸ್ಥೆಯನ್ನು ಕಲ್ಪಿಸಿದರೂ ಅದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಫಲಿತಾಂಶವನ್ನು ತಂದುಕೊಡುವ ಜವಾಬ್ದಾರಿ ವಿದ್ಯಾರ್ಥಿಗಳದ್ದಾಗಿದೆ ಎಂದರು.
Related Articles
Advertisement
ಇದೇ ಸಂದರ್ಭದಲ್ಲಿ ಕಾಲೇಜು ನಿಮಾರ್ಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಅಬ್ದುಲ್ ಖಾದರ್ ಅವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಡಾ. ಪರೇಶ್ ಪೂಜಾರಿ, ಡಾ. ಹರಿಪ್ರಸಾದ್ ಓಕುಡ, ಡಾ. ಶಮಂತ ಶೆಟ್ಟಿ ಸೇರಿದಂತೆ ಕಾಲೇಜಿಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ನಜ್ವಾ ಶಬ್ಬರ್ ಅವರು ಸ್ವಾಗತಿಸಿದರು. ಎಂ.ವಿ. ಆಚಾರ್ಯ ಅವರು ಕಾರ್ಯಕ್ರಮ ನಿರೂಪಿಸಿದರು.