Advertisement

ಬೂತ್‌ಮಟ್ಟದಿಂದ ಪಕ್ಷ ಸಂಘಟಿಸಿ: ಕಾಗೋಡು

07:41 PM Sep 25, 2020 | Suhan S |

ರಿಪ್ಪನ್‌ಪೇಟೆ: ಮಹಿಳೆಯರಿಗೆ ತಂದೆಯ ಮನೆಯಲ್ಲಿಯೂ ಆಸ್ತಿಯಲ್ಲಿ ಹಕ್ಕು ಹೀಗೆ ಹಲವು ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸಿದ ಏಕೈಕ ಪಕ್ಷ ಕಾಂಗ್ರೆಸ್‌ ಆಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

Advertisement

ಪಟ್ಟಣದ ಶ್ರೀರಾಮಮಂದಿರದಲ್ಲಿ ಅಯೋಜಿಸಲಾಗಿದ್ದ ಹೋಬಳಿಮಟ್ಟದ ಗ್ರಾಪಂ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿನ ಮೂಲಭೂತ ಸಮಸ್ಯೆಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಎನ್‌.ಅರ್‌.ಇ.ಜಿ. ಯೋಜನೆಯಡಿ ಸಾಕಷ್ಟು ಅಭಿವೃದ್ಧಿಗೆ ಅದ್ಯತೆ ಕಲ್ಪಿಸುವ ಮೂಲಕ ಉದ್ಯೋಗವಿಲ್ಲದ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು ಎಂದರು.

ಇದೀಗ ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸುವುದರೊಂದಿಗೆ ಉಳ್ಳವರಿಗೆ ಭೂ ಮಿತಿ ಇಲ್ಲದೆ ಖರೀದಿಗೆ ಅವಕಾಶಕಲ್ಪಿಸಿರುವದನ್ನು ತೀವ್ರವಾಗಿ ಖಂಡಿಸಿ ಯಾವುದೇ ಕಾರಣಕ್ಕೂ ಈ ಸರ್ಕಾರದ ಸುಗ್ರೀವಾಜ್ಞೆ ನಿರ್ಧಾರವನ್ನು ರದ್ದುಗೊಳಿಸುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಹೊಸನಗರ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಜಿ. ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಕಲಗೋಡು ರತ್ನಾಕರ್‌, ಶ್ವೇತಾ, ತಾಪಂ ಸದಸ್ಯ ಎನ್‌. ಚಂದ್ರೇಶ್‌, ಮುಖಂಡರಾ ಡಾ| ಅಬೂಬಕರ್‌, ಕೊಳವಳ್ಳಿ ಎಂ. ರಾಜೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್‌.ವಿ. ಈಶ್ವರಪ್ಪ ಗೌಡ, ರಾಮಚಂದ್ರ, ಡಿ.ಈ. ಮಧುಸೂದನ್‌,ಉಭೇದುಲ್ಲಾ ಷರೀಫ್‌, ಅಶೀಫ್‌, ಎಂ.ಡಿ. ಇಂದ್ರಮ್ಮ, ಗೌರಮ್ಮ, ಕಲಾವತಿ, ರಮೇಶ್‌, ಖಲೀಲ್‌ ಷರೀಫ್‌, ಗಿರಿಜ ಎಂ.ನಾಯ್ಕ, ಧನಲಕ್ಷ್ಮೀ,ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next